ಪಠ್ಯ ಪರಿಷ್ಕರಣೆಯಿಂದ ಮಕ್ಕಳಲ್ಲಿ ವಿಷಬೀಜ ಬಿತ್ತನೆ: ಅಜಯ್‌ ಸಿಂಗ್‌

*   ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿ ಆಹೋರಾತ್ರಿ ಧರಣಿಯಲ್ಲಿ ಶಾಸಕ ಅಜಯ್‌ ಸಿಂಗ್‌ ಖಂಡನೆ
*  ಕೋಣೆಗಳಲ್ಲಿ ವಿಶಾಲ ಚಿಂತನೆಯ ಪಠ್ಯ ಬೋಧನೆ ನಡೆಯಬೇಕೇ ಹೊರತು ಕೇಸರಿಕರಣದ ಪಠ್ಯ ಬೋಧನೆಯಲ್ಲ
*   ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆ ಕ್ರಮಕ್ಕೆ ಕುಟುಕಿದ ಎಂದು ಡಾ. ಅಜಯ್‌ ಸಿಂಗ್‌
 

Congress MLA Dr Ajay Singh React on Textbook Revision in Karnataka  grg

ಕಲಬುರಗಿ(ಜೂ.18):  ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಮಾಡಲು ಏನೂ ಕೆಲಸವಿಲ್ಲ, ಅಭಿವೃದ್ಧಿ ವಿಷಯಗಳನ್ನು ಮರೆತಿರುವ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿ ಮಕ್ಕಳ ತಲೆಯಲ್ಲಿ ವಿಷ ಬೀಜ ಬಿತ್ತುತ್ತಿದೆ ಎಂದು ಶಾಸಕ ಡಾ. ಅಜಯ್‌ ಸಿಂಗ್‌ ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿ ಕಲಬುರಗಿಯಲ್ಲಿ ಕೈಗೊಂಡ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ತಜ್ಞ ಡಾ.ಸವರ್ವಪಳ್ಳಿ ರಾಧಾಕೃಷ್ಣನ್‌ ಅವರ ಮಾತಿನಂತೆ ಈ ದೇಶದ ಭವಿಷ್ಯ ರೂಪುಗೊಳ್ಳುವುದೇ ಶಾಲೆಗಳ ನಾಲ್ಕು ಗೋಡೆಗಳಿರುವ ತರಗತಿ ಕೋಣೆಗಳಲ್ಲಿ. ಈ ಕೋಣೆಗಳಲ್ಲಿ ವಿಶಾಲ ಚಿಂತನೆಯ ಪಠ್ಯ ಬೋಧನೆ ನಡೆಯಬೇಕೇ ಹೊರತು ಕೇಸರಿಕರಣದ ಪಠ್ಯ ಬೋಧನೆಯಲ್ಲ ಎಂದು ಡಾ. ಅಜಯ್‌ ಸಿಂಗ್‌ ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆ ಕ್ರಮಕ್ಕೆ ಕುಟುಕಿದರು.

ಹಿಂದೂ ಎಂದು ಬರೆದಿದ್ದಕ್ಕೆ ಮೊರಾರ್ಜಿ ಶಾಲೆಯಲ್ಲಿ 71 ವಿದ್ಯಾರ್ಥಿಗಳಿಗಿಲ್ಲ ಪ್ರವೇಶ!

ರಾಜ್ಯದಲ್ಲಿ 1ರಿಂದ 10ನೇ ತರಗತಿಯವರೆಗೂ ಓದುತ್ತಿರುವ 1.30 ಕೋಟಿ ಮಕ್ಕಳಿದ್ದಾರೆ. ರಾಜ್ಯದ ಜನಸಂಖ್ಯೆಯ ಒಟ್ಟು ಪಾಲಿನಲ್ಲಿ ಒಂದು ಐದಾಂಶ ಭಾಗ ಮಕ್ಕಳೇ ತುಂಬಿರುವಾಗ ಇವರಿಗೆ ಜಾತ್ಯತೀತ ನಿಲುವಿನ, ಭಾರತದ ಭವ್ಯತೆ, ಪರಂಪರೆ ಗಟ್ಟಿಗೊಳಿಸುವಂತಹ ಪಠ್ಯ ಬೋಧನೆ ಇರಬೇಕೇ ಹೊರತು ಯಾವುದೋ ಪಕ್ಷದ, ಸಂಘ ಪರಿವಾರದ ವಿಚಾರಗಳೇ ತುಂಬಿರುವ ಪಠ್ಯ ಯಾಕೆ ಬೇಕು? ಇಂತಹ ಪಠ್ಯ ನಮ್ಮ ಮಕ್ಕಳಿಗಂತೂ ಬೇಡವೇ ಬೇಡವೆಂದು ಹೇಳಿದರು.
ಸರ್ಕಾರಕ್ಕೆ ಮಾಡಲು ಕೆಲಸವಿಲ್ಲವೆಂದೇ ಇಂತಹ ಪಠ್ಯ ಪರಿಷ್ಕರಣೆಗೆ ಮುಂದಾದಂತಿದೆ. ಅಭಿವೃದ್ಧಿ ಇವರಿಗೆ ಬೇಕಾಗಿಲ್ಲ. ಬಿಜೆಪಿ ಸರ್ಕಾರ ಈಗ ಮಾಡುತ್ತಿರೋದು ಜನರಿಗೆ ಸಂಕಷ್ಟಕ್ಕೆ ಸಿಲುಕಿಸುವ ಕೆಲಸವೇ ಹೊರತು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸಗಳಲ್ಲ ಎಂದು ಟೀಕಿಸಿದರು.

10ಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್‌ ಬಂದರೆ ಶಾಲೆಗೆ ರಜೆ!

ಮೊದಲು ಅಜಾನ್‌ ವಿರೋಧಿಸಿ ಧರ್ಮ ದಂಗಲ್‌ ವಿವಾದ ಎಬ್ಬಿಸಿದ್ದರು. ನಂತರ ಗುಡಿ-ಗೋಪುರಗಳ ಮುಂದೆ ಒಂದು ಜಾತಿಗೆ ಸೀಮಿತವಾಗಿ ಘೋಷಣೆ ಹಾಕುತ್ತ ವ್ಯಾಪಾರ ಮಾಡಕೂಡದಂದು ಚಳವಳಿ ರೂಪಿಸಿದರು. ಈಗ ಪಠ್ಯ ಪರಿಷ್ಕರಣೆಗೆ ಮುಂದಾಗಿ ವಿನಾಕಾರಣ ವಿವಾದ ಹುಟ್ಟುಹಾಕಿದ್ದಾರೆಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರವಿದ್ದಾಗ ಸಿಎಂ ಸಿದ್ದರಾಮಯ್ಯ ನವರು ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನೇಮಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಸಮೀತಿ ವಿವರವಾದಂತಹ ಸಭೆಗಳನ್ನು ನಡೆಸಿ, ಚಿಂತಿಸಿ ಕೆಲಸ ಮಾಡಿದ್ದರು. ಈಗ ನೋಡಿದರೆ ಪಠ್ಯ ಪರಿಷ್ಕರಣೆಯೇ ಹುಡುಗಾಟಿಕೆಯಂತೆ ಮಾಡಿದ್ದಾರೆಂದುಡಾ. ಅಜಯ್‌ ಸಿಂಗ್‌ ದೂರಿದ್ದಾರೆ.
 

Latest Videos
Follow Us:
Download App:
  • android
  • ios