ಪ್ರತಿನಿತ್ಯ ಪ್ರಾರ್ಥನೆಯಲ್ಲಿ ಸಂವಿಧಾನ ಪೀಠಿಕೆ ಓದುವುದನ್ನೂ ಕಡ್ಡಾಯಗೊಳಿಸಿದ ಸರ್ಕಾರ

ರಾಜ್ಯದ ಎಲ್ಲ ಶಾಲೆಗಳಲ್ಲಿ ಇನ್ನುಮುಂದೆ ನಾಡಗೀತೆ, ರಾಷ್ಟ್ರಗೀತೆಯಂತೆ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿದೆ.

Congress government decided Constitution Preamble reading compulsory in Karnataka schools sat

ಬೆಂಗಳೂರು (ಜೂ.15): ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಈವರೆಗೆ ಪ್ರಾರ್ಥನೆಯ ವೇಳೆ ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡಲು ಅವಕಾಶವಿತ್ತು. ಈಗ ಈ ಎರಡೂ ಗೀತೆಯೊಂದಿಗೆ ಸಂವಿಧಾನ ಪೀಠಿಕೆ ಓದುವುನ್ನೂ ಕಡ್ಡಾಯಗೊಳಿಸಲು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಇಲಾಖೆಗಳ ಸಚುವರೂ ಭಾಗವಹಿಸಿದ್ದರು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ಬಹುತೇಕ ವಿವಾದಿತ ಕಾಯ್ದೆಗಳನ್ನು ಕಾಂಗ್ರೆಸ್‌ ಈಗ ರದ್ದುಗೊಳಿಸಲು ಮುಂದಾಗಿದೆ. ಈ ಪೈಕಿ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಕ್ಕೂ ಕೈಹಾಕಿದೆ. ಮುಖ್ಯವಾಗಿ ಬಿಜೆಪಿ ಸರ್ಕಾರದಿಂದ ಸೇರ್ಪಡೆ ಮಾಡಲಾಗಿಉದ್ದ ಪಠ್ಯಗಳನ್ನು ತೆಗೆದುಹಾಕಲು ಮುಂದಾಗಿದೆ. ಜೊತೆಗೆ, ಪರಿಷ್ಕರಣೆಗೂ ಮುನ್ನ ಪಠ್ಯಪುಸ್ತಕದಿಂದ ಕೈಬಿಡಲಾಗಿದ್ದ ಪಠ್ಯವನ್ನು ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. 

ಗ್ಯಾರಂಟಿ ಜಾರಿ ಮುಂದೂಡಿಕೆ, ನಾಳೆ ನಿಮ್ಮ ಮನೆಗೆ ಬರಲ್ಲ ಗೃಹಲಕ್ಷ್ಮೀ!

ಸಂವಿಧಾನ ಪೀಠಿಕೆ ಓದು ಕಡ್ಡಾಯ: ಇನ್ನುಮುಂದೆ ರಾಜ್ಯದ ಎಲ್ಲ ಸರ್ಕಾರಿ, ಸರ್ಕಾರಿ ಅನುದಾನಿತ ಹಾಘೂ ಸರ್ಕಾರದ ಒಪ್ಪಿಗೆ ಪಡೆದು ಸ್ಥಾಪಿಸಲಾದ ಎಲ್ಲ ಖಾಸಗಿ ಶಾಲೆಗಳಲ್ಲಿಯೂ ಸಂವಿಧಾನ ಪೀಠಿಕೆ ಓದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಈವರೆಗೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಪ್ರತಿನಿತ್ಯ ಪ್ರಾರ್ಥನಾ ಸಮಯದಲ್ಲಿ ಹಾಗೂ ರಾಷ್ಟ್ರೀಯ ಹಬ್ಬಗಳಲ್ಲಿ ನಾಡಗೀತೆ, ರಾಷ್ಟ್ರಗೀತೆಗಳನ್ನು ಹಾಡಲಾಗುತ್ತಿತ್ತು. ಈಗ ಅದರೊಂದಿಗೆ ಭಾರತೀಯ ಸಂವಿಧಾನದ ಪೀಠಿಕೆ ಓದುವುದನ್ನು ಕೂಡ ಕಡ್ಡಾಯಗೊಳಿಸಲಿ ರಾಜ್ಯ ಸರ್ಕಾದರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 

ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಪುಟದ ಅನುಮೋದನೆ:  ರಾಜ್ಯದಲ್ಲಿ 6 ರಿಂದ 10 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಮಾತ್ರ ಬದಲಾವಣೆ ಮಾಡಲಾಗುತ್ತೆ. ಶಿಕ್ಷಕರಿಗೆ ಯಾವ ಪಾಠ ಮಾಡಬೇಕು ಅಂತ ಮಾರ್ಗಸೂಚಿ ನೀಡಲಾಗುತ್ತದೆ. ಕೆಲವು ತಜ್ಞರ ಸಲಹೆಯಂತೆ ಸಪ್ಲಿಮೆಂಟರಿ ಪುಸ್ತಕ ನೀಡಲಾಗುತ್ತದೆ. ದೇಶದ ಪ್ರಧಾನನಂತ್ರಿ ಜವಾಹರಲಾಲ್‌ ನೆಹರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ದೇಶದ ಮೊದಲ ಶಿಕ್ಷಕಿ ಎಂದೇ ಖ್ಯಾತಿಯಾದ ಸಾವಿತ್ರಿಬಾ ಪುಲೆ ವಿಚಾರಗಳನ್ನು ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ ಎಂದಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. 

ಪಠ್ಯ ಪುಸ್ತಕ ಪರಿಷ್ಕರಣೆ, ವಿವಾದಿತ ಎಪಿಎಂಸಿ ಕಾಯ್ದೆ ರದ್ದುಪಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ!

ಬಿಜೆಪಿ ಸರ್ಕಾರದಿಂದ ಸೇರ್ಪಡೆ ಮಾಡಲಾಗಿದ್ದ ಪಠ್ಯ ರೆದ್ದು: ಈ ಹಿಂದೆ ಬಿಜೆಪಿ ಸರ್ಕಾರದಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಸೇರ್ಪಡೆ ಮಾಡಲಾದ ಕೆಲವು ವಿಚಾರಗಳನ್ನು ಸದರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದಿಂದ ಕೈಬಿಡಲು ನಿರ್ಧರಿಸಲಾಗಿದೆ. ಹೀಗಾಗಿ, ಒಂದು ಶೈಕ್ಷಣಿಕ ವರ್ಷದಲ್ಲಿಯೂ ಅಭ್ಯಾಸ ಮಾಡಲು ಅವಕಾಶ ನೀಡದೇ ಪಠ್ಯಪುಸ್ತಕವನ್ನು ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತಿದೆ. ಇನ್ನು ಬಿಜೆಪಿ ಸರ್ಕಾರದಿಂದ ಸೇರ್ಪಡೆ ಮಾಡಲಾಗಿದ್ದ ಸಾವರ್ಕರ್‌ ವಿಚಾರ, ಚಕ್ರವರ್ತಿ ಸೂಲಿಬೆಲೆ ಹಾಗೂ ಹೆಡಗೆವಾರ್ ಅವರ ಸಂಬಂಧಿತ ಪಠ್ಯವನ್ನು ತೆಗೆಯಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Latest Videos
Follow Us:
Download App:
  • android
  • ios