ಅಶಿಸ್ತಿನ ಹುಡುಗಿಯರಿಗೆ ಕ್ಲಾಸಲ್ಲೇ ಹುಡುಗರಿಂದ ಕಪಾಳಮೋಕ್ಷ.. ಆದೇಶಿಸಿದ್ದು ಶಿಕ್ಷಕಿ!
ಶಾಲೆಯಲ್ಲಿ ತಪ್ಪು ಮಾಡಿದಾಗ ಸಣ್ಣಪುಟ್ಟ ಶಿಕ್ಷೆ ನೀಡಲಾಗುತ್ತದೆ. ಕೆಲವೊಮ್ಮೆ ಶಿಕ್ಷಕರು ನೀಡುವ ಶಿಕ್ಷೆ ಅವರಿಗೆ ಶಾಪವಾಗುತ್ತದೆ. ಈಗ ಈ ಶಿಕ್ಷಕಿ ಕೂಡ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾಳೆ. ಕಾರಣ ಇಷ್ಟೆ.
ಹಿಂದೆ ಸ್ಕೂಲ್ ನಲ್ಲಿ ಮಕ್ಕಳಿಗೆ ಶಿಕ್ಷೆ ನೀಡುವ, ಹೊಡೆಯುವ ಅಧಿಕಾರ ಶಿಕ್ಷಕರಿಗಿತ್ತು. ಮಕ್ಕಳ ಓದಿಲ್ಲ, ತಪ್ಪು ಮಾಡ್ತಿದ್ದಾರೆ ಎಂಬುದು ಗೊತ್ತಾದಾಗ ಶಿಕ್ಷಕರು ಮಕ್ಕಳಿಗೆ ಬೈದು, ಹೊಡೆದು ಬುದ್ಧಿ ಹೇಳ್ತಿದ್ದರು. ಆದ್ರೀಗ ಕಾಲ ಹಾಗಿಲ್ಲ. ಹೊಡೆಯೋದಿರಲಿ ಶಿಕ್ಷಕರು ಸ್ವಲ್ಪ ಬೈದ್ರೂ ಅದು ದೊಡ್ಡ ವಿಷ್ಯವಾಗುತ್ತದೆ. ನಮ್ಮ ಮಕ್ಕಳಿಗೆ ಯಾಕೆ ಬೈದ್ರಿ ಎಂದು ಪ್ರಶ್ನೆ ಮಾಡುವ ಪಾಲಕರು, ಶಿಕ್ಷಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸ್ತಾರೆ. ಶಿಕ್ಷಕರು, ಮಕ್ಕಳಿಗೆ ಶಿಕ್ಷೆ ನೀಡಿ ಸಸ್ಪೆಂಡ್ ಆದ ಅನೇಕ ಪ್ರಕರಣಗಳು ಆಗಾಗ ಸುದ್ದಿಗೆ ಬರ್ತಿರುತ್ತವೆ. ಈಗ ಮತ್ತೊಂದು ಸುದ್ದಿ ಚರ್ಚೆಯಾಗ್ತಿದೆ. ಇಲ್ಲಿ ಶಿಕ್ಷಕಿ ಮಕ್ಕಳ ಮೇಲೆ ಯಾವುದೇ ಹಲ್ಲೆ ನಡೆಸಿಲ್ಲ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳ ಕೈನಿಂದ ಹೊಡೆಸಿದ್ದಾಳೆ. ಆಕೆ ಮಾಡಿದ ಕೆಲಸ ಈಗ ಕೆಲಸಕ್ಕೆ ಕುತ್ತು ತಂದಿದೆ. ಘಟನೆ ಏನು ಎಂಬ ವಿವರ ಇಲ್ಲಿದೆ.
ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ (Teacher) ಯಿಂದ ಕಠಿಣ ಶಿಕ್ಷೆ : ಪೂರ್ವ ಚೀನಾ (China) ದ ಜಿಯಾಂಗ್ಸು ಪ್ರಾಂತ್ಯದ ಪ್ರಾಥಮಿಕ ಶಾಲೆ (School) ಯೊಂದರಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಹೆಸರು ಝು. ಆಕೆ ಕ್ಲಾಸ್ ತೆಗೆದುಕೊಳ್ತಿದ್ದ ವೇಳೆ ಕ್ಲಾಸ್ ನಲ್ಲಿದ್ದ ಇಬ್ಬರು ಹುಡುಗಿಯರು ಆಹಾರ ಸೇವನೆ ಮಾಡ್ತಿದ್ದರು. ಅದನ್ನು ನೋಡಿ ಕೋಪಗೊಂಡ ಝು, ಕಪಾಳಮೋಕ್ಷ ಮಾಡುವ ಮೂಲಕ ತನ್ನನ್ನು ತಾನೇ ಶಿಕ್ಷಿಸಿಕೊಳ್ಳುವಂತೆ ಹೇಳಿದ್ದಾರೆ. ಆದ್ರೆ ಹುಡುಗಿಯರು ಗಟ್ಟಿಯಾಗಿ ಕಪಾಳಮೋಕ್ಷ ಮಾಡಿಕೊಂಡಿಲ್ಲ. ಇದ್ರಿಂದ ಮತ್ತಷ್ಟು ಕೋಪಗೊಂಡ ಶಿಕ್ಷಕಿ, ಕ್ಲಾಸ್ ನಲ್ಲಿರುವ ಹುಡುಗರಿಗೆ ಕಪಾಳಮೋಕ್ಷ ಮಾಡ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕೆಲ ಹುಡುಗ್ರು ಹೌದು ಎಂದು ತಲೆ ಆಡಿಸಿದ್ದಾರೆ. ಆ ನಂತ್ರ ಶಿಕ್ಷಕಿ, ಹುಡುಗಿಯರಿಗೆ ಕಪಾಳಮೋಕ್ಷ ಮಾಡುವಂತೆ ಸೂಚನೆ ನೀಡಿದ್ದಾರೆ. ಸಿಕ್ಕಿದ್ದೇ ಅವಕಾಶ ಅಂತ ಹುಡುಗ್ರು, ಹುಡುಗಿಯರಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಪಾಲಕರಿಂದ ತೀವ್ರ ವಿರೋಧ : ಮನೆಗೆ ಬಂದ ಹುಡುಗಿಯರ ಮುಖ ಕೆಂಪಾಗಿದ್ದನ್ನು ಪಾಲಕರು ನೋಡಿದ್ದಾರೆ. ವಿಚಾರಿಸಿದಾಗ ವಿಷ್ಯ ತಿಳಿದಿದೆ. ಆ ನಂತ್ರ ಶಿಕ್ಷಕಿ ವಿರುದ್ಧ ಪಾಲಕರು ಶಾಲೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಐದಾರು ಬಾರಿ ಮಗಳಿಗೆ ಕಪಾಳಮೋಕ್ಷ ಮಾಡಲಾಗಿದೆ. ಶಿಕ್ಷಕಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು, ಹೊಡೆದ ಹುಡುಗರು ಕ್ಷಮೆ ಕೇಳಬೇಕು. ಹುಡುಗರು ಹುಡುಗಿಯರಿಗೆ ಹೊಡೆದು ಮಹಾನ್ ಕೆಲಸ ಮಾಡಿಲ್ಲ ಎಂಬುದನ್ನು ಅವರಿಗೆ ಹೇಳಬೇಕು ಎಂದು ವಿದ್ಯಾರ್ಥಿನಿ ಪಾಲಕರು ಆಗ್ರಹಿಸಿದ್ದಾರೆ. ಇನ್ನು ಕಪಾಳಮೋಕ್ಷ ಮಾಡಿದ ಹುಡುಗನ ಪಾಲಕರು, ಮಗ ಚಿಕ್ಕವಾಗಿದ್ದು, ಶಿಕ್ಷಕಿ ಹೇಳಿದಂತೆ ಕೇಳಿದ್ದಾನೆ ಎಂದಿದ್ದಾರೆ.
ಸಮುದಾಯಕ್ಕೆ ಹಬ್ಬಿದ ಸೋಂಕು: ಕೊಚ್ಚಿಯಲ್ಲಿ ಜ್ವರವಿರುವ ಶೇ.30ರಷ್ಟು ಜನರಲ್ಲಿ ಕೋವಿಡ್ ಸೋಂಕು
ಕ್ಷಮೆ ಕೇಳಿದ ಶಿಕ್ಷಕಿ : ಗಲಾಟೆ ತಾರಕಕ್ಕೇ ಏರುತ್ತಿದ್ದಂತೆ ಶಿಕ್ಷಕಿ ಗ್ರೂಪ್ ನಲ್ಲಿ ಕ್ಷಮೆ ಕೇಳಿದ್ದಾರೆ. ನಾನು ಇದ್ರ ಬಗ್ಗೆ ಆಳವಾಗಿ ಆಲೋಚನೆ ಮಾಡಿರಲಿಲ್ಲ. ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.
ಆಡಳಿತ ಮಂಡಳಿ ಹೇಳಿದ್ದೇನು? : ಕೌಟುಂಬಿಕ ವಿಷ್ಯದ ಕಾರಣ ಶಿಕ್ಷಕಿ ಡಿಸ್ಟರ್ಬ್ ಆಗಿದ್ರು. ಹಾಗಾಗಿ ಅವರು ಈ ರೀತಿ ವರ್ತಿಸಿದ್ದಾರೆ. ಅವರನ್ನು ಕೆಲಸದಿಂದ ತೆಗೆಯಲಾಗಿದೆ. ಮುಂದೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.
ಚೀನಾದಲ್ಲಿ ಇದೇ ಮೊದಲ ಘಟನೆ ಅಲ್ಲ : ಚೀನಾ ಶಾಲೆಯಲ್ಲಿ ಇಂಥ ಘಟನೆ ಅನೇಕ ಬಾರಿ ವರದಿ ಆಗಿದೆ. ವರ್ಷದ ಆರಂಭದಲ್ಲಿ ಮಧ್ಯ ಹುನಾನ್ ಪ್ರಾಂತ್ಯದಲ್ಲಿ, ಶಿಕ್ಷಕರೊಬ್ಬರು ಒಂಬತ್ತು ವರ್ಷದ ಬಾಲಕಿಯ ತಲೆಯ ಮೇಲೆ ಮೆಟಲ್ ಸ್ಕೇಲ್ ನಿಂದ ಹೊಡೆದಿದ್ದರು. ಘಟನೆಯಲ್ಲಿ ಬಾಲಕಿ ತೀವ್ರ ಗಾಯಗೊಂಡಿದ್ದಳು.
Year Ender 2023: ಈ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಏನೇನಾಯ್ತು? ಜನರನ್ನು ಕಾಡಿದ ವಿಚಿತ್ರ ಕಾಯಿಲೆಗಳಿವು