ಮಗನಿಗೆ ಹೋಮ್‌ವರ್ಕ್ ಕೊಟ್ಟಿದ್ದಕ್ಕೆ ಸ್ಕೂಲ್ ಟೀಚರ್‌ಗೆ ನಿರಂತರ ಕರೆ: ಅಪ್ಪನ ಬಂಧನ
ಇಲ್ಲೊರ್ವ ತಂದೆ ಶಾಲೆಯಲ್ಲಿ ಮಗನಿಗೆ ನೀಡಿದ ಹೋಮ್ ವರ್ಕ್ ನೋಡಿ ಚಿಂತೆಗೀಡಾಗಿದ್ದಾನೆ. ಬರೀ ಇಷ್ಟೇ ಮಾಡಿದ್ದರೆ ತೊಂದರೆ ಇರಲಿಲ್ಲ, ಈತ ಹೋಮ್ ವರ್ಕ್ ನೀಡಿದ ಶಾಲಾ ಶಿಕ್ಷಕರಿಗೆ ಹಾಗೂ ಪೊಲೀಸ್ ಠಾಣೆಗೆ ನಿರಂತರ ಕರೆ ಮಾಡಿ ಕಿರಿಕಿರಿ ಮಾಡಿದ್ದು, ಈತನ ಫೋನ್ ಕಿರಿಕಿರಿ ತಾಳಲಾರದೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಓಹಿಯೋ: ಇತ್ತೀಚೆಗೆ ಮಕ್ಕಳ ಹೋಮ್ ವರ್ಕ್‌ನಿಂದ ಪೋಷಕರೇ ಕಂಗಾಲಾಗುವುದು ಸಾಮಾನ್ಯವಾಗಿದೆ. ಮಕ್ಕಳಿಗಿಂತ ಪೋಷಕರೇ ಮಕ್ಕಳಿಗೆ ನೀಡಿದ ಹೋಮ್‌ವರ್ಕ್ ನೋಡಿ ಆತಂಕಕ್ಕೀಡಾಗುತ್ತಾರೆ. ಪೋಷಕರು ಅನಕ್ಷರಸ್ಥರಾಗಿದ್ದರೆ ಕಥೆ ಮುಗಿದೇ ಹೋಯ್ತು. ಅದೇ ರೀತಿ ಇಲ್ಲೊರ್ವ ತಂದೆ ಶಾಲೆಯಲ್ಲಿ ಮಗನಿಗೆ ನೀಡಿದ ಹೋಮ್ ವರ್ಕ್ ನೋಡಿ ಚಿಂತೆಗೀಡಾಗಿದ್ದಾನೆ. ಬರೀ ಇಷ್ಟೇ ಮಾಡಿದ್ದರೆ ತೊಂದರೆ ಇರಲಿಲ್ಲ, ಈತ ಹೋಮ್ ವರ್ಕ್ ನೀಡಿದ ಶಾಲಾ ಶಿಕ್ಷಕರಿಗೆ ಹಾಗೂ ಪೊಲೀಸ್ ಠಾಣೆಗೆ ನಿರಂತರ ಕರೆ ಮಾಡಿ ಕಿರಿಕಿರಿ ಮಾಡಿದ್ದು, ಈತನ ಫೋನ್ ಕಿರಿಕಿರಿ ತಾಳಲಾರದೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಅಮೆರಿಕಾದ ಓಹಿಯೋದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಅಮೆರಿಕಾದ ಟುಡೇ ಡಾಟ್ಕಾಮ್ ವರದಿ ಪ್ರಕಾರ, ಆಡಂ ಸೈಜ್ಮೋರ್ ಎಂಬಾತನೇ ಹೀಗೆ ಶಾಲೆಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ಬಂಧಿತನಾದ ವ್ಯಕ್ತಿ. ಈತನ ಮಗ ಕ್ರೇಮರ್ ಎಲಿಮೆಂಟರಿ ಶಾಲೆಯಲ್ಲಿ ಓದುತ್ತಿದ್ದು, ಶಾಲೆಯಲ್ಲಿ ಮಗನಿಗೆ ಹೋಮ್‌ವರ್ಕ್ ನೀಡಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಾದ ಜೇಸನ್ ಮೆರ್ಜ್ ಅವರಿಗೆ ಒತ್ತಾಯಿಸಿದ್ದಾರೆ. ಅಲ್ಲದೇ ಅವರು ಕರೆ ರಿಸೀವ್ ಮಾಡಲು ನಿರಾಕರಿಸಿದ ನಂತರವೂ ಅವರಿಗೆ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಪಾಲಕರ ಹೃದಯಾಘಾತಕ್ಕೆ ಕಾರಣವಾಗ್ತಿದೆ ಮಕ್ಕಳ ಹೋಮ್ ವರ್ಕ್ ಮಾಡೋ ಕೆಲಸ!
ಅಲ್ಲದೇ ಈ ಬಗ್ಗೆ ದೂರು ನೀಡಲು ಆಕ್ಸ್‌ಫರ್ಡ್‌ನ ಪೊಲೀಸರಿಗೂ ಒಂದು ಗಂಟೆಯಲ್ಲಿ 18 ಬಾರಿ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಯನ್ನು ತಲುಪಲು ಸಾಧ್ಯವಾಗದೇ ಇದ್ದಾಗ ಪೊಲೀಸ್ ಅಧಿಕಾರಿಯನ್ನು ಮನೆಯಲ್ಲೇ ಭೇಟಿ ಮಾಡುವುದಕ್ಕೂ ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಇದೊಂದು ವಿಚಿತ್ರ ಘಟನೆ ಶಾಲೆಯಲ್ಲಿ ಮಕ್ಕಳಿಗೆ ಅಸಹಜವೆನಿಸುವ ಮನೆಕೆಲಸ ನೀಡುವುದಿಲ್ಲ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಆಕ್ಸ್‌ಫರ್ಡ್ ಪೊಲೀಸ್ ಇಲಾಖೆಯ ಡಿಟೆಕ್ಟಿವ್ ಸಾರ್ಜೆಂಟ್ ಆಡಮ್ ಪ್ರೈಸ್ ಹೇಳಿದ್ದಾರೆ. ಇನ್ನು ಹೀಗೆ ಕರೆ ಮಾಡಿದ ವ್ಯಕ್ತಿ ಒಂದು ಹುಡುಗ ಹಾಗೂ ಹುಡುಗಿಯ ಸಿಂಗಲ್ ಪೇರೆಂಟ್ ಆಗಿದ್ದು, ಅವರು ತಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮವಾದುದನ್ನೇ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಪೊಲೀಸರು ಸೈಜ್ಮೋರ್ ಮನೆಗೆ ಬಂದು ಆತನ ವಿರುದ್ಧ ದೂರವಾಣಿ ಕರೆ ಮೂಲಕ ಕಿರುಕುಳ ನೀಡಿದ ಪ್ರಕರಣ ದಾಖಲಿಸಿದ್ದಾರೆ. ಆದರೆ ಆತ ಆರೋಪ ನಿರಾಕರಿಸಿದ್ದಾನೆ. ಆದರೆ ಇಂತಹ ಪ್ರಕರಣಗಳಲ್ಲಿ 6 ತಿಂಗಳವರೆಗೆ ಜೈಲು ಹಾಗೂ 1ಸಾವಿರ ಡಾಲರ್ ದಂಡ ವಿಧಿಸಲಾಗುತ್ತದೆ.
ಅಬ್ಬಬ್ಬಾ, ಹೋಂ ವರ್ಕ್ ತಪ್ಪಿಸಿಕೊಳ್ಳಲು ಈ ಬಾಲಕ ಹೀಗ್ ಮಾಡೋದಾ?