Asianet Suvarna News Asianet Suvarna News

ಸಿಇಟಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

ಸಿಇಟಿ ಪರೀಕ್ಷೆಯ ದಿನಾಂಕ ಪ್ರಕಟವಾಗಿದೆ. ಇಂದು(ಶನಿವಾರ) ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿಎನ್ ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದ್ದಾರೆ.

cet exam Time Table released By Ashwath narayan here Is full information rbj
Author
Bengaluru, First Published Feb 20, 2021, 7:27 PM IST

ಬೆಂಗಳೂರು, (ಫೆ.20): ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳಾಪಟ್ಟಿ ಪ್ರಕಟವಾಗಿದೆ.

ಜುಲೈ 7 ರಿಂದ ಪರೀಕ್ಷೆಗಳು ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಅಧಿಕೃತ ಘೋಷಣೆ: ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಫೈನಲ್ 

ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳು ಕನ್ನಡ ಪರೀಕ್ಷೆಯನ್ನು ಬರೆಯಲಿದ್ದಾರೆ. ರಾಜ್ಯದಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ, ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಹಾಗೂ ಇತರೆ ರಾಜ್ಯಗಳ ಸಿಇಟಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಪರೀಕ್ಷಾ ವೇಳಾಪಟ್ಟಿ:
* 7-7-2021 ಬುಧವಾರ ಬೆಳಗ್ಗೆ 10.30ರಿಂದ 11.50: ಜೀವವಿಜ್ಞಾನ

* 7-7-2021 ಬುಧವಾರ ಮಧ್ಯಾಹ್ನ 2.30ರಿಂದ 3.50: ಗಣಿತ

* 8-7-2021 ಗುರುವಾರ ಬೆಳಗ್ಗೆ 10.30ರಿಂದ 11.50: ಭೌತ ವಿಜ್ಞಾನ

( 8-7-2021 ಗುರುವಾರ ಮಧ್ಯಾಹ್ನ 2.30ರಿಂದ 3.50: ರಸಾಯನವಿಜ್ಞಾನ

* 9-7-2021 ಶುಕ್ರವಾರ ಬೆಳಗ್ಗೆ 11.30ರಿಂದ 12.30: ಕನ್ನಡ ಕನ್ನಡ ಪರೀಕ್ಷೆ ನಡೆಯಲಿದೆ.

Follow Us:
Download App:
  • android
  • ios