CET Exam Date 2023: ಮೇ 20, 21ರಂದು ನಡೆಯಲಿದೆ ಸಿಇಟಿ ಪರೀಕ್ಷೆ
ವೃತ್ತಿಪರ ಕೋರ್ಸುಗಳ ಕಲ್ಪಿಸುವ ಸಿಇಟಿ ಪರೀಕ್ಷೆಯನ್ನು ಈ ಬಾರಿ ಮೇ 20 ಮತ್ತು ಮೇ.16, 21ರಂದು ನಡೆಸಲು ಉದ್ದೇಶಿಸಲಾಗಿದೆ.
ಬೆಂಗಳೂರು (ಫೆ.24): ವೃತ್ತಿಪರ ಕೋರ್ಸುಗಳ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ ) ಈ ಬಾರಿ ಮೇ 20 ಮತ್ತು ಮೇ.16, 21ರಂದು ನಡೆಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆ ಮೇ 22 ರಂದು ನಡೆಯಲಿದೆ.
ಕರ್ನಾಟಕದ ಕಾಲೇಜನ್ನು ಆಯ್ಕೆ ಮಾಡದ ಸಿಇಟಿ ಟಾಪರ್ಸ್!
ಕರ್ನಾಟಕ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣ ಸಮಯದ ಎಂಜಿನಿಯರಿಂಗ್, ತಂತ್ರಜ್ಞಾನ, ಬಿ-ಫಾರ್ಮಾ, ಡಿ-ಫಾರ್ಮಾ, ಕೃಷಿ ಶಿಕ್ಷಣ (ಕೃಷಿ ವಿಜ್ಞಾನ) ಮತ್ತು ಪಶುವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ಆಫ್‌ಲೈನ್ ಪರೀಕ್ಷೆಯಾಗಿದೆ. ಪ್ರವೇಶ ಪರೀಕ್ಷೆಯನ್ನು ನಡೆಸಲು ಮತ್ತು ಅರ್ಹತೆಯನ್ನು ನಿರ್ಧರಿಸಲು, ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ಸೀಟುಗಳ ಸರ್ಕಾರಿ ಪಾಲುಗಾಗಿ ಮೊದಲ ವರ್ಷದ ಅಥವಾ ಪೂರ್ಣ ಸಮಯದ ವೃತ್ತಿಪರ ಕೋರ್ಸ್‌ಗಳ ಮೊದಲ ಸೆಮಿಸ್ಟರ್ ಪ್ರವೇಶಕ್ಕಾಗಿ ಕರ್ನಾಟಕ ಸರ್ಕಾರ 1994 ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು.
Indian Army: ಸೈನಿಕರಾಗಲು ಆನ್‌ಲೈನ್ ಸಿಇಟಿ : ನೇಮಕಾತಿ ವೇಳೆ ಮೊಬೈಲ್‌ನಲ್ಲಿಯೂ ಪರೀಕ್ಷೆಗೆ ಅವಕಾಶ
ಸಿಇಟಿ ಪರೀಕ್ಷೆಯನ್ನು ಕರ್ನಾಟಕದಾದ್ಯಂತ ಬಹುತೇಕ ಎಲ್ಲಾ ಜಿಲ್ಲೆ - ನಗರಗಳಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ನಡೆಸಲಾಗುತ್ತದೆ. ಸಿಇಟಿ ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಎಂಬ 4 ವಿಷಯಗಳು ಸೇರಿವೆ.