CET Crisis : ಮುಂದಿನ ನಡೆ ಇಂದು ನಿರ್ಧಾರ?
- ಸಿಇಟಿ ಬಿಕ್ಕಟ್ಟು: ಮುಂದಿನ ನಡೆ ಇಂದು ನಿರ್ಧಾರ?
- ಹೈಕೋರ್ಚ್ ತೀರ್ಪು ಪಾಲನೆಯೋ? ತೀರ್ಪಿನ ವಿರುದ್ಧ ಮೇಲ್ಮನವಿಯೋ?
- ಉನ್ನತ ಶಿಕ್ಷಣ ಸಚಿವರಿಂದ ಇಂದು ಕಾನೂನು ತಜ್ಞರು, ಅಧಿಕಾರಿಗಳ ಸಭೆ
ಬೆಂಗಳೂರು (ಸೆ.5) : 2021-22ನೇ ಸಾಲಿನ ಸಿಇಟಿ ರಾರಯಂಕಿಂಗ್ ಪಟ್ಟಿಯನ್ನು ಹೈಕೋರ್ಚ್ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಮುಂದೇನು ಮಾಡಬೇಕೆಂಬ ಬಗ್ಗೆ ಕಾನೂನು ಸಲಹೆ ಪಡೆಯಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದ್ದು, ಹೈಕೋರ್ಚ್ ಆದೇಶ ಪಾಲಿಸಬೇಕೆ ಅಥವಾ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕೆ ಎಂಬುದರ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.ಈ ಸಂಬಂಧ ಸೋಮವಾರ ಬೆಳಗ್ಗೆ 8 ಗಂಟೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಮ್ಮ ನಿವಾಸದಲ್ಲಿ ಕಾನೂನು ತಜ್ಞರು ಹಾಗೂ ತಮ್ಮ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.
ಇಟಿ ಪ್ರಕರಣದಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡಲ್ಲ: ಸಿಎಂ ಬೊಮ್ಮಾಯಿ
ಹೈಕೋರ್ಚ್(High Court) ಆದೇಶದಂತೆ ಜು.30ರಂದು ಪ್ರಕಟಿಸಿದ್ದ ಪ್ರಸ್ತಕ ಸಾಲಿನ ಸಿಇಟಿ(CET Ranking) ರದ್ದುಪಡಿಸಿ 2020-21ನೇ ಸಾಲಿನಲ್ಲಿ ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ಪಾಸಾಗಿ ಪ್ರಸಕ್ತ ಸಾಲಿನಲ್ಲಿ ಪುನರಾವರ್ತಿತ ಅಭ್ಯರ್ಥಿಗಳಾಗಿ ಸಿಇಟಿ ಬರೆದಿರುವ ವಿದ್ಯಾರ್ಥಿಗಳಿಗೂ ಸಿಇಟಿ ಜೊತೆಗೆ ಪಿಯುಸಿ(PUC) ಫಲಿತಾಂಶವನ್ನೂ ಪರಿಗಣಿಸಿ ಹೊಸ Ranking ಪಟ್ಟಿಪ್ರಕಟಿಸುವುದಾ ಇಲ್ಲವೇ ಹೈಕೋರ್ಚ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದು ಒಳಿತಾ ಎಂಬ ಬಗ್ಗೆ ಸಚಿವರು ಸಲಹೆ ಪಡೆಯಲಿದ್ದಾರೆ. ಸಭೆಯಲ್ಲಿ ವ್ಯಕ್ತವಾಗುವ ಸಲಹೆಗಳನ್ನು ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
2020-21ನೇ ಸಾಲಿನಲ್ಲಿ ಕೋವಿಡ್(Covid) ಕಾರಣದಿಂದ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಅವರ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಪಾಸು ಮಾಡಿದ್ದ ಸರ್ಕಾರ ಅದೇ ಸಾಲಿನಲ್ಲಿ ನಡೆದ ಸಿಇಟಿಯಲ್ಲಿ ಆ ವಿದ್ಯಾರ್ಥಿಗಳಿಗೆ ಸಿಇಟಿ ಫಲಿತಾಂಶವನ್ನು ಮಾತ್ರ ಪರಿಗಣಿಸಿ ರಾರಯಂಕಿಂಗ್ ಪ್ರಕಟಿಸಿತ್ತು. ಈಗ ಆ ಸಾಲಿನ ಸುಮಾರು 21 ಸಾವಿರ ವಿದ್ಯಾರ್ಥಿಗಳು 2021-22ನೇ ಸಾಲಿನಲ್ಲಿ ಪುನರಾವರ್ತಿತ ಅಭ್ಯರ್ಥಿಗಳಾಗಿ ಸಿಟಿಇ ಬರೆದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ ಎಲ್ಲ ಮಕ್ಕಳಿಗೆ ಕಳೆದ ಸಾಲಿನಂತೆಯೇ ಪಿಯುಸಿ ಫಲಿತಾಂಶ ಪರಿಗಣಿಸಿದೆ ಸಿಇಟಿ ಫಲಿತಾಂಶವನ್ನು ಮಾತ್ರ ಆಧರಿಸಿ ರಾರಯಂಕಿಂಗ್ ಪ್ರಕಟಿಸಿದೆ.
ಈಗ ಕೋರ್ಚ್ ಆದೇಶದಂತೆ ರಾರಯಂಕಿಂಗ್‌ಗೆ ಪಿಯು ಫಲಿತಾಂಶ ಪರಿಗಣಿಸಿದರೆ 2020-21ನೇ ಸಾಲಿನ ಪಿಯು ವಿದ್ಯಾರ್ಥಿಗಳಲ್ಲಿ ಕಳೆದ ವರ್ಷ ಸಿಇಟಿ ಬರೆದವರಿಗೆ ಒಂದು ನಿಯಮ, ಈ ವರ್ಷ ಪುನರಾವರ್ತಿತರಾಗಿ ಸಿಇಟಿ ಬರೆದವರಿಗೆ ಮತ್ತೊಂದು ನಿಯಮ ಅನುಸರಿಸಿದಂತಾಗುತ್ತದೆ. ಅಲ್ಲದೆ, ಈಗ ಪ್ರಕಟಿಸಿರುವ ರಾರಯಂಕಿಂಗ್ ರದ್ದುಪಡಿಸಿ ಹೊಸ ರಾರಯಂಕಿಂಗ್ ಪಟ್ಟಿಪ್ರಕಟಿಸಿದರೆ ಪಟ್ಟಿಸಂಪೂರ್ಣ ಏರುಪೇರಾಗಲಿದೆ. ಈ ವರ್ಷ ಲಿಖಿತವಾಗಿ ಪಿಯುಸಿ ಪರೀಕ್ಷೆ ಬರೆದು ಪಾಸಾಗಿರುವವರಿಗೆ ಅನ್ಯಾಯವಾಗಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ರಾರಯಂಕಿಂಗ್ ಏರುಪೇರಾಗುವುದರಿಂದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆಗಳಿವೆ. ಈ ಎಲ್ಲಾ ಕಾರಣದಿಂದ ಏನು ಮಾಡುವುದು ಎಂಬುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಕಾನೂನು ತಜ್ಞರ ಸಲಹೆ ಪಡೆದು ಹೈಕೋರ್ಚ್ ಆದೇಶ ಪಾಲಿಸುವುದಾ ಇಲ್ಲವೇ ಮೇಲ್ಮನವಿ ಸಲ್ಲಿಸುವುದಾ ಎಂಬುದನ್ನು ಇಲಾಖೆ ನಿರ್ಧರಿಸಲಿದೆ. CET Rank: ಸಿಇಟಿ ರ‍್ಯಾಂಕ್ ಪಟ್ಟಿ ರದ್ದು: ಹೈಕೋರ್ಟ್ ಮಹತ್ವದ ಆದೇಶ