ಸ್ಪರ್ಧಾತ್ಮಕ ಪರೀಕ್ಷೆಗೂ ವೆಬ್‌ಕಾಸ್ಟ್ ನಿಗಾ, ಜು.28ರ ಪರೀಕ್ಷೆಗೆ ಟೆಂಡರ್‌ ಕರೆದ ಕೆಪಿಎಸ್‌ಸಿ

ಕೆಇಎ ಬಳಿಕ ಈಗ  ಕೆಪಿ ಎಸ್‌ಸಿ ಕೂಡ ನೇಮಕಾತಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳ ವಡಿಸಿ 'ವೆಬ್‌ಕಾಸ್ಟ್' ಮೂಲಕ ಲೈವ್ ನಿಗಾಕ್ಕೆ ಮುಂದಾಗಿದೆ.

CCTV Surveillance services for KPSC competitive examinations gow

ಬೆಂಗಳೂರು (ಜು.21): ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಬಳಿಕ ಈಗ ಕರ್ನಾಟಕ ಲೋಕಸೇವಾ ಆಯೋಗ(ಕೆಪಿ ಎಸ್‌ಸಿ) ಕೂಡ ನೇಮಕಾತಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳ ವಡಿಸಿ 'ವೆಬ್‌ಕಾಸ್ಟ್' ಮೂಲಕ ಲೈವ್ ನಿಗಾಕ್ಕೆ ಮುಂದಾಗಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಯಲ್ಲಿನ ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಜು.28 ರಂದು ನಡೆಯುವ ಪೂರ್ವಭಾವಿ ಪರೀಕ್ಷೆಯ ಮೇಲ್ವಿಚಾರಣೆಯನ್ನು ವೆಬ್‌ಕಾಸ್ಟ್ ಮಾಡಲು ಟೆಂಡರ್‌ ಕರೆಯಲಾಗಿದೆ.

ಕಲಬುರಗಿ ಮತ್ತು ರಾಯಚೂರಿನ 5 ಪರೀಕ್ಷಾ ಕೇಂದ್ರಗಳಲ್ಲಿ 1,972 ಅಭ್ಯರ್ಥಿಗಳು ಪರೀಕ್ಷೆ ಬರೆಯ ಲಿದ್ದಾರೆ. ಪ್ರತಿಯೊಂದು ಕೊಠಡಿಯಲ್ಲಿ ಒಂದು ಕ್ಯಾಮೆರಾಗೆ 24 ವಿದ್ಯಾರ್ಥಿಗಳು ಕವರ್‌ಆಗುವಂತೆ ಅಳವಡಿಸುವ ಕಲರ್ ಸಿಸಿ ಕ್ಯಾಮೆರಾ ವಿಡಿಯೋವನ್ನು ಕೆಪಿಎ ಸ್‌ಸಿ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸುವ ಕಮಾಂಡ್ ಸೆಂಟ‌ರ್ಗೆಗೆ ಸಂಪರ್ಕಿಸಲಾಗು ತ್ತದೆ. ಕಮಾಂಡ್ ಸೆಂಟರ್‌ನಲ್ಲಿ ಅಳವ ಡಿಸಿರುವ ಎಲ್‌ಇಡಿ ಪರದೆಯಲ್ಲಿ ಲೈವ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ.

ಕನ್ನಡಿಗರನ್ನು ಬೆಂಬಲಿಸಿ ಫೋನ್‌ಪೇ ಜತೆಗಿನ ಒಪ್ಪಂದ ಕಡಿದುಕೊಳ್ಳಲು ಮುಂದಾದ ಕಿಚ್ಚ ಸುದೀಪ್

ಕೆಪಿಎಸ್‌ಸಿ ವಿವಿಧ ಪರೀಕ್ಷೆಗಳ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ.

ಕಲ್ಯಾಣ ಕರ್ನಾಟಕ ವೃಂದದ 97 ಪಿಡಿಒ ಹುದ್ದೆಗಳಿಗೆ ನ.11 ಮತ್ತು ನ.17ಕ್ಕೆ ಕ್ರಮವಾಗಿ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ, ಉಳಿಕೆ ಮೂಲವೃಂದದ 150 ಪಿಡಿಒ ಹುದ್ದೆಗಳಿಗೆ ಡಿ.7 ಮತ್ತು ಡಿ.8ರಂದು ಕ್ರಮವಾಗಿ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಎಂಜಿನಿಯರಿಂಗ್ ,ಆರ್ಕಿಟೆಕ್ಚರ್ ಕೋರ್ಸ್‌ ಇನ್ನಷ್ಟು ದುಬಾರಿ: ಶುಲ್ಕ ಶೇ.10 ಹೆಚ್ಚಿಸಿ ಶಿಕ್ಷಣ ಇಲಾಖೆ ಆದೇಶ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಪತ್ರಾಂಕಿತ ವ್ಯವಸ್ಥಾಪಕರು, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಉಳಿಕೆ ಮೂಲವೃಂದದ ಹುದ್ದೆಗಳಿಗೆ ಸೆ.14 ಮತ್ತು 15ರಂದು ಕ್ರಮವಾಗಿ ಕನ್ನಡ ಭಾಷಾ ಪರೀಕ್ಷೆ, ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆ ಪರೀಕ್ಷೆ ನಡೆಯಲಿದೆ. ಇದೇ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅ.19 ಮತ್ತು 20 ರಂದು ಪರೀಕ್ಷೆ ನಡೆಯಲಿವೆ.

 

Latest Videos
Follow Us:
Download App:
  • android
  • ios