Asianet Suvarna News Asianet Suvarna News

ಕನ್ನಡಿಗರನ್ನು ಬೆಂಬಲಿಸಿ ಫೋನ್‌ಪೇ ಜತೆಗಿನ ಒಪ್ಪಂದದಿಂದ ಹೊರಬರ್ತಾರಾ ಸುದೀಪ್? ಕಿಚ್ಚನ ಟೀಂನಿಂದ ಅಪ್ಡೇಟ್‌

ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಅಭಿಯಾನ ಆರಂಭವಾಗಿದೆ. ಇದೀಗ ನಟ ಸುದೀಪ್ ಇದಕ್ಕೆ ಬೆಂಬಲವಾಗಿ ನಿಂತಿದ್ದು, ಫೋನ್‌ಪೇ ಜತೆಗಿನ ಒಪ್ಪಂದದಿಂದ ಹೊರಬರುತ್ತಾರಾ ಕಿಚ್ಚ ಸುದೀಪ್? 

kannadigas reservation kiccha sudeep likely to break ties with phonepe gow
Author
First Published Jul 21, 2024, 1:41 PM IST | Last Updated Jul 22, 2024, 12:40 PM IST

ಬೆಂಗಳೂರು (ಜು.21): ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿರೋಧ ಮಾಡಿರುವ ಫೋನ್ ಪೇ ವಿರುದ್ಧ ಬಾಯ್ಕಾಟ್ ಅಭಿಯಾನ  ಶುರುವಾಗಿವೆ. ಫೋನ್ ಪೇ ವಿರುದ್ಧದ ಕನ್ನಡಿಗರ ಅಭಿಯಾನಕ್ಕೆ ನಟ ಸುದೀಪ್  ಬೆಂಬಲವಾಗಿ ನಿಂತಿದ್ದು, ಫೋನ್‌ಪೇ ಜತೆಗಿನ ಒಪ್ಪಂದದಿಂದ ಹೊರಬರುತ್ತಾರಾ ಕಿಚ್ಚ ಸುದೀಪ್ ಎಂಬ ಪ್ರಶ್ನೆ ಎದ್ದಿದೆ.

ಫೋನ್ ಪೇಗೆ ಕರ್ನಾಟಕದಲ್ಲಿ ನಟ ಸುದೀಪ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಚ್ಚ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಬಗ್ಗೆ ಫೋನ್ ಪೇ ಸಿಇಒ ಉದ್ಧಟತನ, Uninstall Phonepe ಅಭಿಯಾನ ಟ್ರೆಂಡಿಂಗ್

ಕನ್ನಡಿಗರ ವಿರುದ್ಧ ನಿಂತಿರೋ ಕಂಪನಿಯ ಪರ ಪ್ರಚಾರ ಮಾಡದಿರೋ ನಿಲುವಿಗೆ  ಸುದೀಪ್ ಬಂದಿದ್ದಾರೆ ಎನ್ನಲಾಗಿದೆ. ಕನ್ನಡಿಗರ ಕ್ಷಮೆ ಕೇಳದಿದ್ದರೆ ಫೋನ್ ಪೇ ಅಗ್ರಿಮೆಂಟ್ ಕ್ಯಾನ್ಸಲ್ ಗೆ ನಿರ್ಧಾರ ಮಾಡಲಾಗಿದೆ. ನಾಳೆ ಈ ಬಗ್ಗೆ ನಟ ಸುದೀಪ್ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ.

ಕನ್ನಡಿಗರ ಉದ್ಯೋಗ ಮೀಸಲಾತಿಗೆ  ಫೋನ್ ಪೇ ಸಿಇಓ ಸಮೀರ್ ನಿಗಮ್  ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಸಿಡಿದೆದ್ದ ಕನ್ನಡಿಗರು ಫೋನ್ ಪೇ ವಿರುದ್ಧ ಅನ್ ಇನ್ಸ್ಟಾಲ್ ಅಭಿಯಾನ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ  ಸುದೀಪ್ ಕನ್ನಡಿಗರಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎಂದು ಸುದೀಪ್ ತಂಡದಿಂದ ಮಾಹಿತಿ ಲಭ್ಯವಾಗಿದೆ.

ವಿಧಾನಸೌಧದಲ್ಲಿ ಚೆಸ್‌ ಹಬ್ಬ, ಶಾಸಕರು ಚಕ್ಕರ್-ಸ್ಟೀಕರ್ ಹಾಜರ್, ಕಪ್‌ ಮುಡಿಗೇರಿಸಿಕೊಂಡ ಶಾಸಕ ಧರ್ಮಸಿಂಗ್‌

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ.  ಕಂಪನಿ, ಹಣಕ್ಕಿಂತಾ ಕನ್ನಡಿಗನಾಗಿ ನನ್ನ ಸ್ವಾಭಿಮಾನ ಮುಖ್ಯ ಎನ್ನುವುದು ಸುದೀಪ್ ಅವರ ನಿರ್ಧಾರವಾಗಿದೆ. ಈ ಕಾರಣದಿಂದ ಸದ್ಯವೇ ನಟ ಕಿಚ್ಚ ಸುದೀಪ್ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಹಲವು ಉದ್ಯಮಿಗಳು ವಿರೋಧಿಸಿದ್ದರು. ಹೀಗಾಗಿ ಕೈಗಾರಿಕೋದ್ಯಮಿಗಳ ವಿರುದ್ಧ ಪ್ರತಿಭಟನೆ ಕೂಡ ನಡೆದಿತ್ತು. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು. ಹೀಗಾಗಿ  ಕನ್ನಡಿಗರ ವಿರೋಧಿ ಸಮೀರ್ ನಿಗಮ್  ಒಡೆತನದ ಫೋನ್ ಪೇಯನ್ನು ಮೊಬೈಲ್ ನಿಂದ ಅನ್‌ ಇನ್ಸ್ಟಾಲ್‌ ಮಾಡಿ ಆತನಿಗೆ ಬುದ್ಧಿ ಕಲಿಸಿ ಎಂಬ ಅಭಿಯಾನ ನಡೆಯುತ್ತಿದೆ.

Latest Videos
Follow Us:
Download App:
  • android
  • ios