2025-26 ರಿಂದ ವರ್ಷಕ್ಕೆ ಎರಡು CBSE ಬೋರ್ಡ್ ಪರೀಕ್ಷೆ, ಪರಿಶೀಲಿಸಲು ಸೂಚನೆ
2025-26 ರಿಂದ ವರ್ಷಕ್ಕೆ ಎರಡು ಬಾರಿ CBSE ಬೋರ್ಡ್ ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸುವಂತೆ ಶಿಕ್ಷಣ ಸಚಿವಾಲವು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಸೂಚಿಸಿದೆ.
ಬೆಂಗಳೂರು (ಏ.27): 2025-26 ರಿಂದ ವರ್ಷಕ್ಕೆ ಎರಡು ಬಾರಿ CBSE ಬೋರ್ಡ್ ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸುವಂತೆ ಶಿಕ್ಷಣ ಸಚಿವಾಲವು ಕೇಂದ್ರೀಯ ಮಾಧ್ಯಮಿಕ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಸೂಚಿಸಿದೆ. ಆದರೆ ಸಿಬಿಎಸ್‌ಇಗೆ ಸೆಮಿಸ್ಟರ್ ವ್ಯವಸ್ಥೆಯನ್ನು ಜಾರಿಗೊಳಿಸುವ ಯೋಜನೆ ಸಮಂಜಸವಲ್ಲ ಎಂದು ಈಗಾಗಲೇ ತಳ್ಳಿಹಾಕಿದೆ.
2025-26ನೇ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಮೇ ತಿಂಗಳಲ್ಲಿ ಸಿಬಿಎಸ್‌ಇ ಹಾಗೂ ಶಿಕ್ಷಣ ಸಚಿವಾಲಯವು ಜಂಟಿಯಾಗಿ ಶಾಲಾ ಪ್ರಾಂಶುಪಾಲರ ಜೊತೆ ಮಾತುಕತೆಗಳನ್ನು ನಡೆಸಲಿದೆಯೆಂದು ವರದಿ ತಿಳಿಸಿದೆ.
ಪಿಯು ಪರೀಕ್ಷೆ 2: ನೋಂದಾಯಿಸಿದ ವಿಷಯಕ್ಕೆ ಮಾತ್ರ ಹಾಜರಾದರೆ ಸಾಕು
ಪದವಿ ಶಿಕ್ಷಣ ಪ್ರವೇಶಾತಿಯ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮವಾಗದಂತೆ ಮಂಡಳಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಪೂರಕವಾಗುವ ರೀತಿಯಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಿಬಿಎಸ್‌ಸಿ ತೊಡಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ 2024-25ನೇ ಸಾಲಿನಿಂದಲೇ ಶಿಕ್ಷಣ ಸಚಿವಾಲಯವು ನೂತನ ಪಠ್ಯಕ್ರಮ ಘೋಷಿಸಿತ್ತು. ಈ ಪ್ರಕಾರವಾಗಿ ಮಂಡಳಿ ಪರೀಕ್ಷೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯವಕಾಶ ಹಾಗೂ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸುವುದಕ್ಕೆ ಹಾಗೂ ಹೆಚ್ಚು ಅಂಕಗಳನ್ನು ಪಡೆಯಲು ಅವಕಾಶ ದೊರೆಯಲಿದೆ ಎಂಬುದು ಶಿಕ್ಷಣ ಇಲಾಖೆಯ ನಿಲುವಾಗಿದೆ. ಆದರೆ ಅದನ್ನು ಒಂದು ವರ್ಷ ಮುಂದೂಡಲಾಗಿದೆ.
ಮೇ 4 ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-2 ಮುಂದೂಡಿಕೆ, ಡೀಟೆಲ್ಸ್ ಇಲ್ಲಿದೆ
ಕಳೆದ ಅಕ್ಟೋಬರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, 'ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುವುದು. ಆದರೆ ಇದು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಸಂಪೂರ್ಣ ಐಚ್ಛಿಕವಾದದ್ದು. ಎಂಜಿನಿಯರಿಂಗ್ ಪ್ರವೇಶಕ್ಕೆ ನಡೆಯುವ ಜೆಇಇ ಪರೀಕ್ಷೆಯಂತೆ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆ ಇರಲಿದೆ. ಅವುಗಳಲ್ಲಿನ ಉತ್ತಮ ಅಂಕಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರು.