Asianet Suvarna News Asianet Suvarna News

ಭಾರತ ಮತ್ತು ಕೆನಡಾ ಶೈಕ್ಷಣಿಕ ಅಭಿವೃದ್ಧಿಗಾಗಿ ಒಪಿ ಜಿಂದಾಲ್‌ ವಿವಿ ಜೊತೆ ಕೆನಡಾ ಯಾರ್ಕ್‌ಒಪ್ಪಂದ

ಕೆನಡಾದ ಯಾರ್ಕ್‌ ವಿಶ್ವವಿದ್ಯಾಲಯ ಮತ್ತು ದೆಹಲಿಯ ಒಪಿ ಜಿಂದಾಲ್‌ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಹಯೋಗ ಮತ್ತು ವಿದ್ಯಾರ್ಥಿಗಳ ವಿನಿಮಯಕ್ಕೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ.

Canada  York sign partnership agreement and  OP Jindal Global University about memorandum of understanding gow
Author
First Published Sep 23, 2023, 8:58 AM IST

ಬೆಂಗಳೂರು (ಸೆ.23): ಕೆನಡಾದ ಯಾರ್ಕ್‌ ವಿಶ್ವವಿದ್ಯಾಲಯ ಮತ್ತು ದೆಹಲಿಯ ಒಪಿ ಜಿಂದಾಲ್‌ ವಿಶ್ವವಿದ್ಯಾಲಯಗಳ ನಡುವೆ ಶೈಕ್ಷಣಿಕ ಸಹಯೋಗ ಮತ್ತು ವಿದ್ಯಾರ್ಥಿಗಳ ವಿನಿಮಯಕ್ಕೆ ಮಹತ್ವದ ಒಪ್ಪಂದ. ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನೆ, ನಾವೀನ್ಯತೆ ವಿಚಾರಗಳಲ್ಲಿ ಉಭಯ ವಿವಿಗಳ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ಕಲ್ಪಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಯಾರ್ಕ್‌ ವಿವಿ ಕುಲಪತಿ ಡಾ.ರೋಂಡಾ ಎಲ್‌ ಲೆಂಟನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದ್ದು, ಕೆನಡಾದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಇದರಿಂದ ನಿರ್ಭೀತರಾಗಿ ಕೆನಡಾದಲ್ಲಿ ವ್ಯಾಸಂಗ ಮಾಡಬಹುದು ಎಂದು ಭರವಸೆ ನೀಡಿದರು.

ಕೂಲಿ ಹೊರುತ್ತಿದ್ದ ವ್ಯಕ್ತಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಲು ನೆರವಾಯ್ತು ರೈಲು ನಿಲ್ದಾಣದ

ಭಾರತ ಮತ್ತು ಕೆನಡಾ ದೇಶದ ಶೈಕ್ಷಣಿಕ ಅಭಿವೃದ್ಧಿಗಾಗಿ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ಜತೆಗೆ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ಹೊಟೇಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆನಡಾದಲ್ಲಿ ನಡೆಯುತ್ತಿರುವ ಕೆಲವು ರಾಜತಾಂತ್ರಿಕ ಸಮಸ್ಯೆಗಳನ್ನು ನಾವು ಬಗೆಹರಿಸಲು ಸಾಧ್ಯವಿಲ್ಲಘಿ. ಆದರೆ, ಇದನ್ನು ನಮ್ಮ ಸರಕಾರ ಸಾಧ್ಯವಾದಷ್ಟು ಬೇಗ ಇತ್ಯರ್ಥ ಮಾಡಿಕೊಳ್ಳಲಿದ್ದುಘಿ, ಇದರಿಂದ ವಿದ್ಯಾರ್ಥಿಗಳು ಆತಂಕ ಪಡಬೇಕಾಗಿಲ್ಲ ವಿದ್ಯಾರ್ಥಿಗಳಿಗೆ ವಿಸಾ ಮತ್ತು ವಲಸೆ ಪ್ರಮಾಣ ಪತ್ರ ಸೇರಿದಂತೆ ಎಲ್ಲವನ್ನು ನಮ್ಮಲ್ಲಿರುವ ಅಕಾರಿಗಳು ಮಾಡಿಕೊಡಲಿದ್ದುಘಿ, ವಿದ್ಯಾರ್ಥಿಗಳು ಯಾವುದೇ ಸಮಸ್ಯೆಘಿ, ಆತಂಕ ಇಲ್ಲದೆಯೇ ನಿರ್ಭೀತರಾಗಿ ಕೆನಡಾದಲ್ಲಿ ವ್ಯಾಸಂಗ ಮಾಡಬಹುದಾಗಿದೆ ಎಂದರು.

ಒಟ್ಟಾರೆ ನಮ್ಮ ವಿವಿಯಲ್ಲಿ ವಿವಿಧ ದೇಶಗಳ 50 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದುಘಿ, ಇದರಲ್ಲಿ ೨ ಸಾವಿರ ವಿದ್ಯಾರ್ಥಿಗಳು ಭಾರತೀಯರಾಗಿದ್ದಾರೆ. ಇವರಿಗೆ ಇದುವರೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲಘಿ. ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಜಿಂದಾಲ್ ವಿವಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದುಘಿ, ಶೈಕ್ಷಣಿಕ ಕಾರ್ಯಕ್ರಮಗಳು, ಸಂಶೋಧನಾ ನಾವೀನ್ಯತೆ, ಶೈಕ್ಷಣಿಕ ಚಟುವಟಿಕೆಗಳು, ಸಮ್ಮೇಳನಗಳನ್ನು ನಡೆಸಲು ಇದು ಸಹಾಯವಾಗಲಿದೆ ಎಂದರು.

6 ನೇ ತರಗತಿಯಲ್ಲಿ ಮದುವೆ, ನೀಟ್‌ ಪರೀಕ್ಷೆಯಲ್ಲಿ ಗೆದ್ದು ವೈದ್ಯನಾಗಲು ಹೊರಟವನಿಗೆ 20 ವರ್ಷಕ್ಕೆ ಮಗು

ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯ ಸಂಸ್ಥಾಪಕ ಕುಲಪತಿ ಡಾ.ಸಿ.ರಾಜ್ ಕುಮಾರ್ ಮಾತನಾಡಿ, ಕೆನಡಾ ವಿವಿ ಜತೆಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿದೆ. ವಿದ್ಯಾರ್ಥಿಗಳು ನಮ್ಮಲ್ಲಿ ಪ್ರವೇಶ ಪಡೆದು, ಕೆನಡಾದಲ್ಲಿ ಇಂಟರ್‌ಶಿಫ್ ಮಾಡಬಹುದಾಗಿದೆ. ಟಾಪ್ ೧೦೦ ವಿವಿಗಳಲ್ಲಿ ಯಾರ್ಕ್ ವಿವಿ ಕೂಡ ಒಂದಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಐಡೆಂಟಿಟಿ ಸಿಗಲಿದೆ ಎಂದರು.

Follow Us:
Download App:
  • android
  • ios