Asianet Suvarna News Asianet Suvarna News

CBSE SRESHTA Scholarship: ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಶ್ರೇಷ್ಠ ಸ್ಕಾಲರಶಿಪ್ ಆರಂಭಿಸಿದ ಸಿಬಿಎಸ್ಇ

  • ಪರಿಶಿಷ್ಟ ಜಾತಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾ ಶ್ರೇಷ್ಠ ಯೋಜನೆ ಜಾರಿ.
  • 9, 11ನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿ ವೆಚ್ಚ ಈ ಯೋಜನೆಯಲ್ಲಿ
CBSE launches Scholarship for reserved class students
Author
Bengaluru, First Published Mar 11, 2022, 4:05 PM IST

ಬೆಂಗಳೂರು(ಮಾ.11):ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (Central Board of Secondary Education - CBSE )ಯು, ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳನ್ನು ನಿಯಂತ್ರಿಸುತ್ತದೆ. ಇದು ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಶಿಕ್ಷಣ ಮಂಡಳಿಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ನಿರ್ವಹಿಸುತ್ತದೆ. ಭಾರತದಲ್ಲಿ ಅಂದಾಜು 20 ಸಾವಿರಕ್ಕೂ ಹೆಚ್ಚು ಶಾಲೆಗಳು ಸಿಬಿಎಸ್‌ಇ ಜೊತೆ ಸಂಯೋಜನೆಗೊಂಡಿವೆ. ಸಿಬಿಎಸ್ಇ ಶಾಲೆಗಳಲ್ಲಿ ಓದುವ ಬಡ ಹಾಗೂ ಪ್ರತಿಭಾವಂತ  ಮಕ್ಕಳಿಗಾಗಿ ಸರ್ಕಾರ ಯೋಜನೆಯೊಂದನ್ನು ಜಾರಿಗೊಳಿಸಿದೆ. ಪರಿಶಿಷ್ಟ ಜಾತಿ ಸಮುದಾಯಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಶ್ರೇಷ್ಟ (SHRESHTA) ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯು 9 ಮತ್ತು 11 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳ ಬಹುತೇಕ ಎಲ್ಲಾ ಶೈಕ್ಷಣಿಕ ವೆಚ್ಚಗಳನ್ನು ಒಳಗೊಂಡಿರುವ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು,  ಉದ್ದೇಶಿತ ಪ್ರದೇಶಗಳಲ್ಲಿನ ಪ್ರೌಢಶಾಲೆಗಳಲ್ಲಿ SC ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣಕ್ಕಾಗಿ ಯೋಜನೆ(SHRESHTA)ಯನ್ನು ಪ್ರಾರಂಭಿಸುತ್ತಿದೆ. ಈ ಯೋಜನೆಯನ್ನು 2022-23 ಶೈಕ್ಷಣಿಕ ವರ್ಷದಿಂದ  ಆರಂಭಿಸಲಾಗುತ್ತಿದೆ. ಶ್ರೇಷ್ಠ (SHRESHTA) ಯೋಜನೆಯು ಪರಿಶಿಷ್ಟ ಜಾತಿ ಸಮುದಾಯಗಳ 9 ಮತ್ತು 11 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳ ಬಹುತೇಕ ಎಲ್ಲಾ ಶೈಕ್ಷಣಿಕ ವೆಚ್ಚಗಳನ್ನು ಒಳಗೊಂಡಿರುವ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ.ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ - cbse.gov.in ನಲ್ಲಿ ಅಧಿಸೂಚನೆಯನ್ನು ಪರಿಶೀಲಿಸಬಹುದು.

KEA ASSISTANT PROFESSOR EXAM: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ

ಈ ಶ್ರೇಷ್ಠ ಯೋಜನೆಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು, ರಾಷ್ಟ್ರೀಯ ಪ್ರವೇಶ ಪರೀಕ್ಷೆ(NETS) ಬರೆಯಬೇಕಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳನ್ನು ಯೋಜನೆಗೆ ದಾಖಲಿಸಕೊಳ್ಳಲಾಗುತ್ತದೆ. ಶ್ರೇಷ್ಠ ಯೋಜನೆಗಾಗಿ ರಾಷ್ಟ್ರೀಯ ಪ್ರವೇಶ ಪರೀಕ್ಷೆ(NETS) ಯು ಕಂಪ್ಯೂಟರ್ ಆಧಾರಿತ (CBT) ಮೋಡ್‌ನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ರಾಷ್ಟ್ರೀಯ ಮಟ್ಟದ ಪರೀಕ್ಷೆಯಾಗಿದೆ. ಶ್ರೇಷ್ಠ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು CBSE ಅಂಗಸಂಸ್ಥೆ ಶಾಲೆಗಳಿಗೆ ಪ್ರವೇಶಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ಈ ಯೋಜನೆಯು ಶಾರ್ಟ್‌ಲಿಸ್ಟ್ ಮಾಡಿದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಶಾಲೆಗಳಿಗೆ ನೇರವಾಗಿ ವಿದ್ಯಾರ್ಥಿವೇತನವನ್ನು ವಿತರಿಸುತ್ತದೆ. ವಿದ್ಯಾರ್ಥಿವೇತನವು ಶಾಲಾ ಶುಲ್ಕ (ಬೋಧನಾ ಶುಲ್ಕ ಇತ್ಯಾದಿ ಸೇರಿದಂತೆ) ಮತ್ತು ಹಾಸ್ಟೆಲ್ ಶುಲ್ಕ (ಮೆಸ್ ಶುಲ್ಕಗಳು ಇತ್ಯಾದಿ ಸೇರಿದಂತೆ) ಒಳಗೊಂಡಿರುತ್ತದೆ ಎಂದು CBSE ಮತ್ತಷ್ಟು ಮಾಹಿತಿ ನೀಡಿದೆ. 12 ನೇ ತರಗತಿಯವರೆಗಿನ CBSE ಯೊಂದಿಗೆ ಸಂಯೋಜಿತವಾಗಿರುವ ವಸತಿ ಶಾಲೆ(ಸ್ವತಂತ್ರ) ಗಳಿಗೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ. ಕಳೆದ 3 ವರ್ಷಗಳಲ್ಲಿ 10 ಮತ್ತು 12 ನೇ ತರಗತಿಯಲ್ಲಿ 75 % ಉತ್ತೀರ್ಣತೆ ಅಥವಾ ಹೆಚ್ಚಿನ ಶೇಕಡಾವಾರು 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಾಲೆಗಳು ಕಾರ್ಯನಿರ್ವಹಿಸಬೇಕು ಎಂದು ಸಿಬಿಎಸ್ಇ ಹೇಳಿದೆ.

 Gadag Horticulture Training Center: ಗದಗ ತೋಟಗಾರಿಕೆ ಕೇಂದ್ರದಲ್ಲಿ ತರಬೇತಿಗೆ ಅರ್ಜಿ ಆಹ್ವಾನ

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶ್ರೇಷ್ಠ ಯೋಜನೆಯ ಲಾಭವನ್ನು ಪರಿಶಿಷ್ಟ ‌ಜಾತಿ ಸಮುದಾಯದ ಮಕ್ಕಳು ಪಡೆಯಬಹುದು. ಮಾರ್ಚ್ 25 ರೊಳಗೆ ಅಧಿಕೃತ ವೆಬ್ ಸೈಟ್ ನಲ್ಲಿ ಒದಗಿಸಲಾದ ಲಿಂಕ್‌ನಲ್ಲಿ ಆನ್‌ಲೈನ್ ಒಪ್ಪಿಗೆಯನ್ನು ಸಲ್ಲಿಸುವಂತೆ ಆಸಕ್ತ ವಸತಿ ಶಾಲೆಗಳನ್ನು ಸಿಬಿಎಸ್ಇ ಬೋರ್ಡ್ ಕೇಳಿದೆ. ಇದಲ್ಲದೆ, ಮಂಡಳಿಯು ವೀಡಿಯೊ ಕಾನ್ಫರೆನ್ಸ್ ಮೋಡ್‌ನಲ್ಲಿ ಸ್ಪಷ್ಟೀಕರಣ ನೀಡಲು ಸೂಚಿಸಿದೆ. ಕೊಟ್ಟಿರುವ ಗಡುವಿನೊಳಗೆ ತಮ್ಮ ಒಪ್ಪಿಗೆಯನ್ನು ಸಲ್ಲಿಸುವ ಎಲ್ಲಾ ಪ್ರಾಂಶುಪಾಲರಿಗೆ ಈ ಯೋಜನೆಯ ಕಾರ್ಯವನ್ನು ವಿವರಿಸೋದಾಗಿ ತಿಳಿಸಿದೆ. ಭಾರತೀಯ ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ದೇಶದಲ್ಲಿ ಮಹಾಪರಿನಿರ್ವಾಣ ದಿವಸ್ ಎಂದು ಆಚರಿಸಲಾಗುತ್ತದೆ. ಇದು ಡಿಸೆಂಬರ್ 6 ರಂದು ಬರುತ್ತದೆ. SRESHTA ಯೋಜನೆಯನ್ನು ಈ ದಿನದಂದು ರೂಪಿಸಲಾಯಿತು.

Follow Us:
Download App:
  • android
  • ios