Asianet Suvarna News Asianet Suvarna News

ಅತಿ ಕಿರಿಯ ಆಪ್‌ ಡೆವಲಪರ್: ಗಿನ್ನೆಸ್ ದಾಖಲೆ ಬರೆದ ಹರಿಯಾಣದ ಹುಡುಗ!

*12 ವರ್ಷದ ಕಾರ್ತಿಕೇಯ್ ಜಖರ್ ಜಗತ್ತಿನ ಅತಿ ಕಿರಿಯ ಆಪ್ ಡೆವಲಪರ್
*ಗಿನ್ನೆಸ್ ಬುಕ್ ದಾಖಲೆ ಸೇರಿದ ಹರಿಯಾಣದ ಈ ಬಾಲಕ
*ಯಾವುದೇ ಕೋರ್ಸು ಮಾಡದೇ ಆಪ್ ಡೆವಲಪ್ ಮಾಡಿದ ಪ್ರತಿಭಾವಂತ
 

Boy from Haryana is youngest app developer and it is a Guinness recorder
Author
Bengaluru, First Published Aug 10, 2022, 1:17 PM IST

ಆಪ್‌ಗಳನ್ನ ಡೆವಲಪ್ ಮಾಡೋದು ಅಂದ್ರೆ ಅಷ್ಟು ಸುಲಭವಲ್ಲ. ಅದಕ್ಕಾಗಿ ಸ್ಪೆಷಲ್ ಕೋರ್ಸ್ಗಳನ್ನ ಮಾಡಬೇಕು. ಕಂಪ್ಯೂಟರ್ ಪ್ರೊಗ್ರಾಮಿಂಗ್ ಕೋರ್ಸ್, ಆ್ಯಪ್ ಡೆವಲಪ್ ಕೋರ್ಸ್, ಹೀಗೆ ಹಲವು ಕೋರ್ಸ್ಗಳನ್ನ ಮಾಡಿ ಆ್ಯಪ್, ಪ್ರೋಗ್ರಾಮ್ ಡೆವಲಪ್ ಮಾಡ್ತಾರೆ. ಆದ್ರೆ ಹರಿಯಾಣದಲ್ಲಿ 8ನೇ ತರಗತಿ ಓದುತ್ತಿರುವ ಬಾಲಕ, ಯಾವುದೇ ಕೋರ್ಸ್ ಮಾಡದೇ ಜಗತ್ತಿನ ಅತ್ಯಂತ ಕಿರಿಯ ಆ್ಯಪ್ ಡೆವಲಪರ್ ಎನ್ನಿಸಿಕೊಂಡಿದ್ದಾನೆ. ಕೇವಲ 12 ವರ್ಷ ವಯಸ್ಸಿನ ಕಾರ್ತಿಕೇಯ ಜಖರ್ (Kartikeya Jakhar), ಮೂರು ಆ್ಯಪ್ಗಳನ್ನ ಅಭಿವೃದ್ಧಿಪಡಿಸೋ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ದಾಖಲೆ ನಿರ್ಮಿಸಿದ್ದು, ಜಗತ್ತಿನ ಅತ್ಯಂತ ಕಿರಿಯ ಆ್ಯಪ್ ಡೆವಲಪರ್ ಆಗಿ ಎಲ್ಲರ ಗಮನ ಸೆಳೆದಿದ್ದಾನೆ. ಜಜ್ಜರ್‌ನ ಜವಾಹರ್ ನವೋದಯ ವಿದ್ಯಾಲಯದಲ್ಲಿ 8ನೇ ತರಗತಿ ಓದುತ್ತಿರುವ ಕಾರ್ತಿಕೇಯ, ಮೂರು ಆ್ಯಪ್‌ಗಳನ್ನು ರಚಿಸಿದ್ದಾನೆ. ವಿಶೇಷ ಅಂದ್ರೆ ಕಾರ್ತಿಕೇಯ, ಆ್ಯಪ್ ಡೆವಲಪಿಂಗ್ ಕಲಿಯಲು ಯಾವುದೇ ಕೋರ್ಸ್ಗೆ ಸೇರಿಲ್ಲ. ಯೂಟ್ಯೂಬ್ ವೀಡಿಯೊಗಳನ್ನು ನೋಡಿ, ಅದರ ಮಾರ್ಗದರ್ಶನದಲ್ಲೇ ಆ್ಯಪ್ಗಳನ್ನ ಅಭಿವೃದ್ಧಿಪಡಿಸಿದ್ದಾನೆ ಕಾರ್ತಿಕೇಯ.  ಅಂದಹಾಗೇ ಕಾರ್ತಿಕೇಯನಿಗೆ ಈ ಆ್ಯಪ್ ಅಭಿವೃದ್ಧಿಯಲ್ಲಿ ಆಸಕ್ತಿ ಬೆಳೆದಿದ್ದು ಆಕಸ್ಮಿಕ.  ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕಾರ್ತಿಕೇಯನ ತಂದೆ, ಆನ್‌ಲೈನ್ ತರಗತಿಗಳಿಗಾಗಿ 10 ಸಾವಿರ ರೂ. ಮೌಲ್ಯದ ಫೋನ್ ಖರೀದಿಸಿ ಕೊಟ್ಟಿದ್ರು. ಆಗಾಗ ಅದರಲ್ಲಿ ಸಾಕಷ್ಟು ಸಮಸ್ಯೆಗಳು ಬರೋಕೆ ಶುರುವಾದವು. ತನ್ನ ಫೋನ್ನಲ್ಲಾಗುತ್ತಿರುವ ಸಮಸ್ಯೆ ಸರಿಪಡಿಸಲು ಕಾರ್ತಿಕೇಯ, YouTube ಅನ್ನು ನೋಡಿ ಖುದ್ದು ತಾನೇ ತನ್ನ ಮೊಬೈಲ್ ಸಮಸ್ಯೆಗಳನ್ನ ಪರಿಹರಿಸಿಕೊಳ್ತಿದ್ದ. ಇಷ್ಟೇ ಅಲ್ಲದೇ ಯೂಟ್ಯೂಬ್ ಮಾರ್ಗದರ್ಶನದಲ್ಲೇ ತನ್ನ ಅಧ್ಯಯನವನ್ನು ಮುಂದುವರೆಸಿ, ಆ್ಯಪ್ ಡೆವಲಪರ್ ಆಗಿದ್ದಾನೆ.

ಇದನ್ನೂ ಓದಿ: ಪಿಎಂ ಯಂಗ್ ಅಚೀವರ್ಸ್ ವಿದ್ಯಾರ್ಥಿ ವೇತನಕ್ಕೆ ಆಹ್ವಾನ 

"ನಾನು ಮೂರು ಅಪ್ಲಿಕೇಶನ್‌ಗಳನ್ನು ಮಾಡಿದ್ದೇನೆ. ಮೊದಲನೆಯದು ಲೂಸೆಂಟ್ ಜಿಕೆ ಆನ್‌ಲೈನ್‌ನಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದೆ.ಎರಡನೆಯದು ಕೋಡಿಂಗ್ (Coding) ಮತ್ತು ಗ್ರಾಫಿಕ್ ಡಿಸೈನಿಂಗ್ (Graphic Design) ಕಲಿಸುವ ರಾಮ್ ಕಾರ್ತಿಕ್ ಲರ್ನಿಂಗ್ ಸೆಂಟರ್ ಮತ್ತು ಮೂರನೆಯದು ಶ್ರೀ ರಾಮ್ ಕಾರ್ತಿಕ್ ಡಿಜಿಟಲ್ ಎಜುಕೇಶನ್.  ಈ  ಅಪ್ಲಿಕೇಶನ್‌ಗಳು ಸದ್ಯ 45,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ’ ಅಂತ ಹೆಮ್ಮೆಯಿಂದ ಹೇಳುತ್ತಾರೆ ಕಾರ್ತಿಕೇಯ ಜಖರ್.  ಕಾರ್ತಿಕೇಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿ ಪಡೆದಿದ್ದಾಗಿ ಹೇಳಿದ್ದಾನೆ. ಅಲ್ಲದೇ ಮುಂದೊಂದು ದಿನ ದೇಶಕ್ಕೆ ಸೇವೆ ಸಲ್ಲಿಸುವ ಭರವಸೆ ವ್ಯಕ್ತಪಡಿಸಿದ್ದಾನೆ. 

8ನೇ ತರಗತಿಯ ವಿದ್ಯಾರ್ಥಿ ಜಾಖರ್ ಇಷ್ಟು ಚಿಕ್ಕ ವಯಸ್ಸಿನಲ್ಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾರ್ತಿಕ್ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ವಿದ್ಯಾರ್ಥಿವೇತನ ಗಳಿಸಿದ್ದಾರೆ. ಅದೇ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್ಸಿ ಓದುತ್ತಿದ್ದಾರೆ.

ಇದನ್ನೂ ಓದಿ: ಯುಜಿಸಿ ಹೊಸ ಪೋರ್ಟಲ್‌ನಲ್ಲಿ ಹೊಸ ಕೋರ್ಸು: ಉಚಿತವಾಗಿಯೇ ಲಭ್ಯ

ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ಟ್ವಿಟರ್‌ನಲ್ಲಿ ಕಾರ್ತಿಕೇಯ ಅವರ ಸಾಧನೆಯನ್ನು ಅಭಿನಂದಿಸಿದ್ದಾರೆ. "ಕ್ರೀಡೆ, ಅಧ್ಯಯನ ಮತ್ತು ಕಲೆಗಳ ನಂತರ, ಈಗ ನನ್ನ ಮಕ್ಕಳು ತಂತ್ರಜ್ಞಾನದಲ್ಲಿ ಹರಿಯಾಣದ ಹೆಸರನ್ನು ಪ್ರಪಂಚದಾದ್ಯಂತ ಬೆಳಗುತ್ತಿದ್ದಾರೆ. ಜಜ್ಜರ್‌ನ 12 ವರ್ಷದ ವಿದ್ಯಾರ್ಥಿ ಕಾರ್ತಿಕೇಯ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಕಲಿಕೆಯ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಕಿರಿಯ ಅಪ್ಲಿಕೇಶನ್ ಡೆವಲಪರ್ ಆಗಿದ್ದಾರೆ. ಅವರ ಇಡೀ ಕುಟುಂಬಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು’ ಅಂತ ಸಿಎಂ ಖಟ್ಟರ್ ಟ್ವೀಟ್ ಮಾಡಿದ್ದಾರೆ. ಇನ್ನು ತಮ್ಮ ಮಗನ ಸಾಧನೆಗಳ ಬಗ್ಗೆ ಪೋಷಕರು ತುಂಬಾ ಹೆಮ್ಮೆ ವ್ಯಕ್ತಪಡಿಸುತ್ತಾರೆ. 

Follow Us:
Download App:
  • android
  • ios