ಕೋರ್ಸ್‌ನ ಅಂತಿಮ ವರ್ಷದಲ್ಲಿರೋವಾಗ ಕ್ಯಾಂಪಸ್ ಸೆಲೆಕ್ಷನ್ ನಡೆಯೋದು, ಅಲ್ಲಿ ದೊಡ್ಡ ದೊಡ್ಡ ಕಂಪನಿಗಳಿಂದ ಆಫರ್ ಸಿಗೋದು ಸಾಮಾನ್ಯ. ಪ್ರತಿ ವರ್ಷ ಅದೆಷ್ಟೋ ಕಾಲೇಜು ವಿದ್ಯಾರ್ಥಿಗಳು ಹೀಗೆ ಕ್ಯಾಂಪಸ್‌ನಲ್ಲೇ ನೌಕರಿ ಗಿಟ್ಟಿಸಿಕೊಳ್ತಾರೆ. ಆದ್ರೆ ಈ ವರ್ಷದ ಪರಿಸ್ಥಿತಿ ಹಾಗಿಲ್ಲ. ಯಾಕಂದ್ರೆ ಕೊರೊನಾದಿಂದಾಗಿ ಕಾಲೇಜು ತರಗತಿಗಳು ಸಂಪೂಣವಾಗಿ ಇನ್ನೂ ಆರಂಭವಾಗಿಲ್ಲ.

ಹೀಗಾಗಿ ಈ ವರ್ಷ ಎಲ್ಲವೂ ಆನ್‌ಲೈನ್ ಮಯ. ಜಾಬ್ ಮೇಳವಿರಲಿ, ಕ್ಯಾಂಪಸ್ ಇಂಟರ್‌ವಿವ್ಯೂ ಇರಲಿ ಎಲ್ಲವೂ ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ಹೀಗೆ ಆನ್‌ಲೈನ್ ಮೂಲಕ ಮುಂಬೈನ ವಿದ್ಯಾರ್ಥಿಯೊಬ್ಬ ದೊಡ್ಡ ಸಂಭಾವನೆಯ ನೌಕರಿ ಗಿಟ್ಟಿಸಿಕೊಂಡು ದೇಶದ ಜನರ ಗಮನ ಸೆಳೆದಿದ್ದಾನೆ.

ಈ ಅಕ್ಕ-ತಂಗಿ ಎಲ್ಲರಂತಲ್ಲ, ಗಣಿತ ಎಂದರೆ ಇವರಿಗೆ ಲೆಕ್ಕವೇ ಅಲ್ಲ

ಸೇಂಟ್ ಕ್ಸೇವಿಯರ್ ಕಾಲೇಜಿನ ಅಂತಿಮ ವರ್ಷದ ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಎಂಎಸ್) ವಿದ್ಯಾರ್ಥಿ, ವಾರ್ಷಿಕ ₹30 ಲಕ್ಷ ಸಂಭಾವನೆ ನೀಡುವ ಕೆಲಸವನ್ನು ಪಡೆದುಕೊಂಡಿದ್ದಾನೆ. ನಗರ ಕಾಲೇಜುಗಳಲ್ಲಿ ಆನ್‌ಲೈನ್‌ನಲ್ಲಿ ನಡೆಸಲಾಗುವ ಉದ್ಯೋಗ ಮೇಳದ ಮೂಲಕ ಆ ವಿದ್ಯಾರ್ಥಿ ನೌಕರಿ ಗಳಿಸಿಕೊಂಡಿದ್ದಾನೆ.

ವಿವಿಧ ಉದ್ಯೋಗಗಳಿಗೆ ನಡೆಯುವ ಮೇಳದಲ್ಲಿ ಮುಂಬೈ ವಿಶ್ವವಿದ್ಯಾನಿಲಯ (ಎಂಯು)ಕ್ಕೆ ಸೇರುವ ನಗರ ಕಾಲೇಜುಗಳು, ಹಲವು ಹುದ್ದೆಗಳನ್ನ ಬುಟ್ಟಿಗೆ ಹಾಕಿಕೊಳ್ಳೋ ಮೂಲಕ  ಎಲ್ಲರನ್ನ ಆಕರ್ಷಿಸಿವೆ. ಕೆಲವು ಕಾಲೇಜುಗಳಲ್ಲಿ ವಾರ್ಷಿಕ ಪ್ಯಾಕೇಜುಗಳು ಕಳೆದ ವರ್ಷದ ಪ್ಯಾಕೇಜ್‌ಗೆ ಹೊಂದಿಕೆಯಾಗಿಲ್ಲ. ಆದ್ರೆ ಹಲವಾರು ಕಾಲೇಜುಗಳು ಹಿಂದಿನ ವರ್ಷಕ್ಕಿಂತ ಉತ್ತಮವಾಗಿ ಸಾಧನೆ ಮಾಡಿವೆ.

SSLC ಪರೀಕ್ಷೆ ಬರೆಯಲು 11 ವರ್ಷದ ವಿದ್ಯಾರ್ಥಿ ರೆಡಿ

ಈ ಸಲ ಹಲವು ದೊಡ್ಡ ಕಂಪನಿಗಳು ತಮ್ಮ ನೇಮಕಾತಿ ಕಾರ್ಯಕ್ರಮವನ್ನು ಬದಲಾಯಿಸಿಲ್ಲ, ಆದರೂ ಸಣ್ಣ ಕಂಪನಿಗಳು ಲಾಕ್‌ಡೌನ್ ಮತ್ತು ಆರ್ಥಿಕ ಮಂದಗತಿಯ ಒತ್ತಡದಿಂದ ಪ್ರಭಾವಿತವಾಗಿವೆ.ಆದಾಗ್ಯೂ, ಫಾಸ್ಟ್ ಮೂವಿಂಗ್ ಕನ್‌ಸ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಮತ್ತು ಕನ್ಸಲ್ಟೆನ್ಸಿಯಂತಹ ಕ್ಷೇತ್ರಗಳ ಕಂಪನಿಗಳು ಈ ವರ್ಷ ಗರಿಷ್ಠ ಸಂಖ್ಯೆಯ ಉದ್ಯೋಗಗಳನ್ನು ನೀಡುವಲ್ಲಿ ಯಶಸ್ವಿಯಾಗಿವೆ ಅಂತಾರೆ ಕ್ಸೇವಿಯರ್ ಕಾಲೇಜಿನ ಬಿಎಂಎಸ್ ಮುಖ್ಯಸ್ಥ ಸೋನಿ ಗಾರ್ಗ್.

ಮಾಟುಂಗಾದ ಆರ್.ಎ. ಪೋಡರ್ ಕಾಲೇಜಿನಲ್ಲಿ, ಅಂತಿಮ ವರ್ಷದ ಪದವಿಪೂರ್ವ ವಿದ್ಯಾರ್ಥಿಗೆ ಮೊದಲ ಹಂತದ ನಿಯೋಜನೆಗಳಲ್ಲಿ ವಾರ್ಷಿಕ ₹ 11 ಲಕ್ಷ ಪ್ಯಾಕೇಜ್ ನೀಡಲಾಗಿದೆ. ಈ ವರ್ಷದ ಸಂಬಳ ಪ್ಯಾಕೇಜ್‌ನಲ್ಲಿ ಹಲವು ವಿದ್ಯಾರ್ಥಿಗಳು ತೃಪ್ತರಾಗಿದ್ರೆ, ಇನ್ನು ಹೆಚ್ಚಿನವರು ಉತ್ತಮವಾದ ಉದ್ಯೋಗ ವಿವರಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳುತ್ತಾರೆ ಪ್ಲೇಸ್‌ಮೆಂಟ್ ತಂಡದ ಅಧಿಕಾರಿಗಳು.

ಟ್ವಿಟರ್‌ ಮೂಲಕ ಯುಜಿಸಿ ಎನ್ಇಟಿ ಎಕ್ಸಾಮ್ ಡೇಟ್ ಪ್ರಕಟಿಸಿದ ಕೇಂದ್ರ ಸಚಿವ

ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ, ಹಿಂದಿನ ವರ್ಷಗಳಿಗಿಂತ ಈ ವರ್ಷ ಹಣಕಾಸು ಪ್ರೊಫೈಲ್‌ಗಳ ಸಂಖ್ಯೆಯಲ್ಲಿ ಏರಿಕೆ ಮತ್ತು ಮಾರ್ಕೆಟಿಂಗ್ ಪ್ರೊಫೈಲ್‌ಗಳಲ್ಲಿ ಇಳಿಕೆ ಕಂಡುಬಂದಿದೆ. ಜೊತೆಗೆ ನಮ್ಮ ಅನೇಕ ಕಂಪನಿಗಳು ಈ ವರ್ಷ ನೇಮಕ ಮಾಡುವುದನ್ನು ನಿರಾಕರಿಸಿದವು ಅಥವಾ ನೇಮಕಾತಿ ಯೋಜನೆಗಳಿಗೆ ಬಂದಾಗ ಅನಿಶ್ಚಿತತೆ ಮತ್ತು ವಿಳಂಬವನ್ನು ಪ್ರದರ್ಶಿಸಿದ್ವು ಎಂದು ಕಾಲೇಜು ಸಂಸ್ಥೆಯ ವಕ್ತಾರ. ಕಳೆದ ವರ್ಷ, ಇದೇ ಸಂಸ್ಥೆಯ ವಿದ್ಯಾರ್ಥಿಯೊಬ್ಬರು ಪಡೆದ ಅತ್ಯಧಿಕ ಪ್ಯಾಕೇಜ್ ವಾರ್ಷಿಕ 13 ಲಕ್ಷ ರೂಪಾಯಿ.

ಇನ್ನು ಚರ್ಚ್‌ಗೇಟ್‌ನ ಜೈ ಹಿಂದ್ ಕಾಲೇಜಿನಲ್ಲಿ ಸದ್ಯ ಉದ್ಯೋಗ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿದ್ದು, ಈ ಸಲ ಸಿಕ್ಕಿರುವ ಅತ್ಯಧಿಕ ಸಂಬಳದ ಪ್ಯಾಕೇಜ್ ಕಳೆದ ವರ್ಷಕ್ಕೆ ಹೋಲುತ್ತದೆ.ಎಡು-ಟೆಕ್ ಮತ್ತು ಫಿನ್-ಟೆಕ್ ಕಂಪನಿಗಳು ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಪ್ರಕ್ರಿಯೆಯನ್ನು ಮುಂದುವರೆಸಿವೆ. ಪ್ರತಿ ವರ್ಷದಂತೆ, ವಿದ್ಯಾರ್ಥಿಗಳು ಹಲವು ಉದ್ಯೋಗಗಳನ್ನು ಆರಿಸಿಕೊಂಡಿದ್ದು ಉತ್ತಮ ಪ್ಯಾಕೇಜ್ ಜೊತೆಗೆ ಹೆಚ್ಚಿನ ಅಧ್ಯಯನಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಸಹ ಸಿಕ್ಕಿದೆ.