ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 16 ಅಥವಾ 17 ಆಗಿರುತ್ತದೆ. ಫ್ರೌಢಾವಸ್ಥೆ ದಾಟಿ ಇನ್ನೇನು ಕಾಲೇಜು ಮೆಟ್ಟಿಲು ಏರೋಕೆ ಸಿದ್ಧರಾಗಿರ್ತಾರೆ. ಶೈಕ್ಷಣಿಕ ಜೀವನದ ಅತ್ಯಂತ ಪ್ರಮುಖ ಘಟ್ಟ ೧೦ನೇ ತರಗತಿ. ಈ ಹಂತವನ್ನು ಯಶಸ್ವಿಯಾಗಿ ಪೂರೈಸಲು ಹಗಲು ರಾತ್ರಿ ಕಷ್ಟ ಪಟ್ಟು ಓದುತ್ತಾರೆ. ಆದ್ರೆ ಇಲ್ಲೊಬ್ಬ ಹುಡುಗ ತನ್ನ 11ನೇ ವಯಸ್ಸಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯೋಕೆ ಹೊರಟಿದ್ದಾನೆ.

ಕೊರೋನಾ ಮುಗಿದಾಯ್ತು ಆನ್‌ಲೈನ್ ಕ್ಲಾಸ್ ಮಾತ್ರ ಮುಗಿಯಂಗಿಲ್ಲ!

ಚತ್ತೀಸ್‌ಗಢದ ದುರ್ಗ್ ಜಿಲ್ಲೆಯ 11 ವರ್ಷದ ಬಾಲಕನಿಗೆ 10 ನೇ ತರಗತಿ ಮಂಡಳಿ ಪರೀಕ್ಷೆಗೆ ಹಾಜರಾಗಲು ಅನುಮತಿ ಸಿಕ್ಕಿದೆ. ಸದ್ಯ ಮೈಲ್‌ಸ್ಟೋನ್ ಸ್ಕೂಲ್ ಬಿಲೈನಲ್ಲಿ ೫ನೇ ತರಗತಿ ಓದುತ್ತಿರೋ ಲಿವ್‌ಜೋತ್ ಸಿಂಗ್ ಅರೋರಾಗೆ ಸೆಕೆಂಡರಿ ಎಜ್ಯುಕೇಷನ್ ಆಫ್ ಚತ್ತೀಸ್‌ಗಢ ಬೋರ್ಡ್ (ಸಿಜಿಬಿಎಸ್‌ಇ), ಆತನ ಬುದ್ಧಿಮತ್ತೆ (ಐಕ್ಯೂ)ಪರೀಕ್ಷೆಯ ವರದಿ ಆಧಾರದ ಮೇಲೆ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಅನುಮತಿ ಕೊಟ್ಟಿದೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚತ್ತೀಸ್‌ಗಢ ರಾಜ್ಯದಲ್ಲಿ ಇದು ಬಹುಶಃ ಮೊದಲ ಪ್ರಕರಣವಾಗಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಯೊಬ್ಬ 10ನೇ ತರಗತಿ ಮಂಡಳಿಯ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ ಅಂತಾರೆ ಆ ಅಧಿಕಾರಿ.

ವಿದ್ಯಾರ್ಥಿಗಳ ಉಪಗ್ರಹ ಉಡಾವಣೆಗೆ ಸಿದ್ಧ; ವೆಚ್ಚ ಎಷ್ಟು ಗೊತ್ತಾ?

ಅಧಿಕೃತ ಮಾಹಿತಿ ಪ್ರಕಾರ, 2020-21ನೇ ಸಾಲಿನ 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಬಯಸುತ್ತೇನೆ ಎಂದು ಲಿವ್‌ಜೋತ್ ಸಿಜಿಬಿಎಸ್ಇಗೆ ಅರ್ಜಿಯನ್ನು ಸಲ್ಲಿಸಿದ್ದ. ಬಳಿಕ ದುರ್ಗ್ ಜಿಲ್ಲಾಸ್ಪತ್ರೆಯಲ್ಲಿ ಲಿವ್‌ಜೋತ್ ಐಕ್ಯೂ ಪರೀಕ್ಷೆಗೆ ಒಳಗಾಗಿದ್ದಾನೆ. ಆಗ ಅವನ ಐಕ್ಯೂ 16 ವರ್ಷದ ಬಾಲಕನಿಗೆ ಸಮನಾಗಿದೆ ಎಂದು ತಿಳಿದುಬಂದಿದೆ. ಮಾನವನ ಬುದ್ಧಿಮತ್ತೆಯನ್ನು ನಿರ್ಣಯಿಸಲು ವಿನ್ಯಾಸಗೊಳಿಸಲಾದ ಪ್ರಮಾಣೀಕೃತ ಪರೀಕ್ಷೆ ಐಕ್ಯೂ ಟೆಸ್ಟ್‌ನಲ್ಲಿ ಉತ್ತಮ ಸ್ಕೋರ್ ಗಳಿಸಿದ್ದಾನೆ. ಇದನ್ನ ಆಧರಿಸಿ  ಸೆಕೆಂಡರಿ ಎಜ್ಯುಕೇಷನ್ ಆಫ್ ಚತ್ತೀಸ್‌ಗಡ್ ಬೋರ್ಡ್ ೧೦ನೇ ತರಗತಿ ಪರೀಕ್ಷೆ ಬರೆಯಲು ಲಿವ್‌ಜೋತ್‌ಗೆ ಪರ್ಮಿಷನ್ ನೀಡಿದೆ.

11 ವರ್ಷದ ಪರೀಕ್ಷೆಯ ಫಲಿತಾಂಶಗಳು ಮತ್ತು ಐಕ್ಯೂ ಪರೀಕ್ಷಾ ಅಂಕಗಳನ್ನು ರಾಜ್ಯ ಪರೀಕ್ಷಾ ಮಂಡಳಿ ಹಾಗೂ ಫಲಿತಾಂಶ ಸಮಿತಿಯ ಮುಂದೆ ಹಾಜರುಪಡಿಸಲಾಯಿತು. ನಂತರ ಈ ವರ್ಷದ ಮಂಡಳಿಯ 10ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಲು ಬಾಲಕನಿಗೆ ಅವಕಾಶ ನೀಡಲಾಯಿತು.

ಟ್ವಿಟರ್‌ ಮೂಲಕ ಯುಜಿಸಿ ಎನ್ಇಟಿ ಎಕ್ಸಾಮ್ ಡೇಟ್ ಪ್ರಕಟಿಸಿದ ಕೇಂದ್ರ ಸಚಿವ

ತಮ್ಮ ಮಗ ಈಗಾಗಲೇ 10ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ತಯಾರಾಗಲು ಪ್ರಾರಂಭಿಸಿದ್ದಾನೆ. ಅದರಲ್ಲೂ ಅನುಮತಿ ಸಿಕ್ಕ ನಂತರ ಮತ್ತಷ್ಟು ಉತ್ಸುಕನಾಗಿದ್ದಾನೆ ಅಂತಾರೆ ಲಿವ್‌ಜೋತ್ ಅವರ ತಂದೆ ಗುರ್ವಿಂದರ್ ಸಿಂಗ್ ಅರೋರಾ. ಲಿವ್‌ಜೋತ್ ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ಅವನು 3ನೇ ತರಗತಿಯಲ್ಲಿದ್ದಾಗ, ಗಣಿತದ ಸಮಸ್ಯೆಗಳನ್ನು ಸೆಕೆಂಡುಗಳಲ್ಲಿ ಪರಿಹರಿಸೋದನ್ನ ಗಮನಿಸಿದ್ದೇವು. ನಂತರ ನಾವು ಚಿಕ್ಕ ಹುಡುಗನೊಬ್ಬನಿಗೆ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗಿದೆ ಎಂಬ ಸುದ್ದಿ ನೋಡಿದ್ದೆವು. ಬಳಿಕ ಇವನ ಮೇಲೆ ಯಾವುದೇ ಒತ್ತಡ ಹೇರದೆ ಬೋರ್ಡ್ ಪರೀಕ್ಷೆಗೆ ತಯಾರಿ ಮಾಡಲು ಪ್ರಾರಂಭಿಸಿದ್ದೇವೆ ಅಂತಾರೆ ಗುರ್ವಿಂದರ್ ಸಿಂಗ್.