ಮಂಗ್ಳೂರು ಸರ್ಕಾರಿ ಉರ್ದು ಶಾಲೆಯಲ್ಲಿ ಬಿಹಾರಿ ಮಕ್ಕಳ ಕನ್ನಡ ಕಲಿಕೆ: ಅಕ್ಷರ ಕ್ರಾಂತಿಗೆ ಮುಂದಾದ ಶಿಕ್ಷಕಿ..!

ಶಿಕ್ಷಕಿಯೊಬ್ಬರ ವಿಶೇಷ ಪ್ರಯತ್ನದ ಫಲವಾಗಿ 53 ಬಿಹಾರಿ ಮಕ್ಕಳು ಅಕ್ಷರ ಕಲಿಕೆ ಆರಂಭಿಸಿದ್ದಾರೆ. ಮಂಗಳೂರು ನಗರದ ದಕ್ಷಿಣ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ವೆಸ್ಟ್ ಉರ್ದು ಶಾಲೆಗೆ, ಈ ತಿಂಗಳಷ್ಟೇ ಮುಖ್ಯ ಶಿಕ್ಷಕಿಯಾಗಿ ಹಾಜರಾಗಿರುವ ಗೀತಾ ಜುಡಿತ್ ಸಲ್ದಾನಾ ಅಕ್ಷರ ಕ್ರಾಂತಿಗೆ ಮುಂದಾಗಿದ್ದಾರೆ. 
 
Bihari children's Kannada learning in Mangaluru Government School grg

ಮಂಗಳೂರು(ಸೆ.24):  ಕನ್ನಡ ಮಾಧ್ಯಮ ಶಾಲೆಯಲ್ಲಿ ಬಿಹಾರದ ಮಕ್ಕಳು ಕನ್ನಡ ಕಲಿಯುವ ಅಪರೂಪದ ವಿದ್ಯಮಾನ ಒಂದೆಡೆಯಾದರೆ, ಶಾಲೆಯ ಮೆಟ್ಟಿಲನ್ನೇ ಏರದೇ ಅನಕ್ಷರಸ್ಥರಾಗಿಯೇ ಬೆಳೆಯಬೇಕಿದ್ದ ಮಕ್ಕಳು ಅಕ್ಷರ ಕಲಿಯುವ ಶಿಕ್ಷಣ ಕ್ರಾಂತಿಯ ಹೊಸ ಅಧ್ಯಾಯಕ್ಕೆ ಮಂಗಳೂರಿನ ಶಾಲೆಯೊಂದು ಸಾಕ್ಷಿಯಾಗಿದೆ. 

ಶಿಕ್ಷಕಿಯೊಬ್ಬರ ವಿಶೇಷ ಪ್ರಯತ್ನದ ಫಲವಾಗಿ 53 ಬಿಹಾರಿ ಮಕ್ಕಳು ಅಕ್ಷರ ಕಲಿಕೆ ಆರಂಭಿಸಿದ್ದಾರೆ. ಮಂಗಳೂರು ನಗರದ ದಕ್ಷಿಣ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಳಾರ ವೆಸ್ಟ್ ಉರ್ದು ಶಾಲೆಗೆ, ಈ ತಿಂಗಳಷ್ಟೇ ಮುಖ್ಯ ಶಿಕ್ಷಕಿಯಾಗಿ ಹಾಜರಾಗಿರುವ ಗೀತಾ ಜುಡಿತ್ ಸಲ್ದಾನಾ ಅಕ್ಷರ ಕ್ರಾಂತಿಗೆ ಮುಂದಾಗಿದ್ದಾರೆ. 

ನಮ್ಮೂರಿಗೆ ರಾಧಿಕಾ ಟೀಚರ್ ಬೇಡ: ಶಾಲೆಗೆ ಬೀಗ ಜಡಿದ ಗ್ರಾಮಸ್ಥರು!

ಈ ಶಾಲೆಯಲ್ಲಿ ತಿಂಗಳ ಹಿಂದಷ್ಟೇ ಕೇವಲ 5 ಮಕ್ಕಳಿದ್ದರು. ಈಗ 53 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಸೆ.2ರಂದು ಈ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಅಧಿಕಾರ ಸ್ವೀಕಾರ ಮಾಡಿದ ದಿನವೇ 40ಕ್ಕೂ ಅಧಿಕ ಬಿಹಾರಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಸಿ ದಾಖಲೆ ನಿರ್ಮಿಸಿದ್ದಾರೆ. ಫಿಶ್ ಮಿಲ್ ಕಾರ್ಮಿಕರು, ಮೀನುಗಾರಿಕಾ ದಕ್ಕೆ, ಸ್ಲಂ ನಿವಾಸಿಗಳು, ಭಿಕ್ಷುಕರ ಮಕ್ಕಳನ್ನು ಪೋಷಕರ ಮನವೊಲಿಸಿ ಅಕ್ಷರ ದೀಕ್ಷೆ ಕೊಡಿಸಿದ್ದಾರೆ.

Latest Videos
Follow Us:
Download App:
  • android
  • ios