ದೇಶದಾದ್ಯಂತ ಬಾಂಬ್‌ ಬೆದರಿಕೆ ಬೆನ್ನಲ್ಲೇ ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್ ಬೆದರಿಕೆ

ಬೆಂಗಳೂರಿನ ಖಾಸಗಿ ಶಾಲೆಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಮೇಲ್ ಹಾಕಿರೋ ಘಟನೆ ನಡೆದಿದೆ.

Bengaluru school receives bomb threat mail gow

ಬೆಂಗಳೂರು (ಮೇ.14): ಬೆಂಗಳೂರಿನ ಖಾಸಗಿ ಶಾಲೆಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆ ಮೇಲ್ ಹಾಕಿರೋ ಘಟನೆ ನಡೆದಿದೆ. ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜೈನ್ ಹೆರಿಟೈಸ್ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ದುಷ್ಕರ್ಮಿಗಳು ಮಧ್ಯರಾತ್ರಿ ಬಾಂಬ್ ಬೆದರಿಕೆ ಮೇಲ್ ಕಳಿಸಿದ್ದಾರೆ.

ಸುಮಾರು 12.20ರ ಸಮಯದಲ್ಲಿ ಬಾಂಬ್ ಬೆದರಿಕೆಯ ಮೇಲ್  ಬಂದಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

KPSC Recruitment 2024 ಜಲಸಂಪನ್ಮೂಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ನೇಮಕಾತಿ

ಕಳೆದೆರಡು ದಿನಗಳಿಂದ ದೇಶದಾದ್ಯಂತ ಬಾಂಬ್ ಬೆದರಿಕೆ: ಕಳೆದ ಕೆಲವು ದಿನಗಳ ಹಿಂದೆ ದೆಹಲಿ, ಬೆಂಗಳೂರಿನ ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ರವಾನೆಯಾಗಿತ್ತು. ರಾಜಸ್ಥಾನದ ಜೈಪುರ ಮತ್ತು ಉತ್ತರ ಪ್ರದೇಶದ ಲಖನೌನ ಕೆಲ ಶಾಲೆಗಳಿಗೆ ಕೂಡ ಇ ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಸಂದೇಶ ರವಾನಿಸಿದ್ದರು. 

ಜೈಪುರದ ನಾಲ್ಕು ಮತ್ತು ಲಖನೌನ ಮೂರು ಶಾಲೆಗಳಿಗೆ ಕಿಡಿಗೇಡಿಗಳು ಬೆದರಿಕೆ ಸಂದೇಶವನ್ನು ಕಳುಹಿಸಿದ್ದರು. ಶಾಲೆ ಆವರಣದಲ್ಲಿ ಸ್ಫೋಟಕ ಟಿಸುವ ಬಗ್ಗೆ ಇ ಮೇಲ್ ಸಂದೇಶ ಬಂದಿತ್ತು. ಆದರೆ ಅದೃಷ್ಟವಶಾತ್ ಪೊಲೀಸರ ತನಿಖೆ ವೇಳೆ ಯಾವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ.

10ನೇ ಕ್ಲಾಸಲ್ಲಿ ಜಸ್ಟ್‌ ಪಾಸಾದರೂ ಬ್ಯಾನರ್‌ ಕಟ್ಟಿ ಸಂಭ್ರಮಾಚರಣೆ..!

ಈ ತಿಂಗಳ ಆರಂಭದಲ್ಲಿ ದೆಹಲಿಯ ಸುಮಾರು 250 ಶಾಲೆಗಳಿಗೆ ಇದೇ ರೀತಿಯಲ್ಲಿಯೇ ಬಾಂಬ್ ಬೆದರಿಕೆಯ ಇಮೇಲ್ ಬಂದಿತ್ತು. ಭಾನುವಾರವಷ್ಟೇ ರಾಷ್ಟ್ರ ರಾಜಧಾನಿಯ 20 ಆಸ್ಪತ್ರೆ, ದೆಹಲಿ ಮತ್ತು ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೂ ಬೆದರಿಕೆ ಕರೆ ಬಂದಿತ್ತು.

Latest Videos
Follow Us:
Download App:
  • android
  • ios