ರಾಜ್ಯಪಾಲರಲ್ಲ, ಬಂಗಾಳದ ವಿವಿಗಳಿಗೆ ಇನ್ನು ಮಮತಾ ಬ್ಯಾನರ್ಜಿಯೇ ಚಾನ್ಸಲರ್!
ರಾಜ್ಯದಿಂದ ನಡೆಸಲ್ಪಡುವ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನುಸ ಚಾನ್ಸಲರ್ ಆಗಿ ನೇಮಕ ಮಾಡುವ ಶಿಫಾರಸಿಗೆ ಪಶ್ಚಿಮ ಬಂಗಾಳ ಸಚಿವ ಸಂಪುಟ ಒಪ್ಪಿಗೆ ನೀಡಿದ.ೆ ಅದರೊಂದಿಗೆ ಖಾಸಗಿ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರನ್ನು ವಿಸಿಟರ್ ಸ್ಥಾನದಿಂದ ಹೊರಹಾಕುವ ಶಿಫಾರಸನ್ನು ಕೂಡ ಕ್ಯಾಬಿನೆಟ್ ಒಪ್ಪಿದೆ. ಪಶ್ಚಿಮ ಬಂಗಾಳ ಸಚಿವ ಬ್ರತ್ಯಾ ಬಸು ಈ ಕುರಿತಾಗಿ ಹೇಳಿಕೆ ನೀಡಿದ ಕೆಲ ದಿನಗಳಲ್ಲೇ ಇದು ಜಾರಿಯಾಗಿರುವುದು ವಿಶೇಷ.
ಕೋಲ್ಕತ (ಜೂನ್ 6): ರಾಜ್ಯ ಸರ್ಕಾರಗಳಿಂದ ನಡೆಸಲ್ಪಡುವ ವಿಶ್ವವಿದ್ಯಾನಿಲಯಗಳ (State Universities) ವಿಚಾರದಲ್ಲಿ ಪಶ್ಚಿಮ ಬಂಗಾಳ (West Bengal ) ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲಿದೆ. ಪ್ರಮುಖ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು, ಖಾಸಗಿ ವಿವಿಗಳಲ್ಲಿ ರಾಜ್ಯಪಾಲರ ವಿಸಿಟರ್ ಸ್ಥಾನವನ್ನು ತೆಗೆದುಹಾಕುವ ಶಿಫಾರಸಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರೊಂದಿಗೆ, ಬಂಗಾಳ ಕ್ಯಾಬಿನೆಟ್ (West Bengal cabinet)ಮುಖ್ಯಮಂತ್ರಿಯನ್ನು ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿ (Chancellor) ಮಾಡುವ ಪ್ರಸ್ತಾವನೆಯನ್ನು ಅನುಮೋದಿಸಿತು.
ಈ ಮಸೂದೆಯನ್ನು ಕ್ಯಾಬಿನೆಟ್ ಒಪ್ಪಿದೆ. ಹಾಗೇನಾದರೂ ವಿಧಾನಸಭೆಯಲ್ಲೂ ಇದು ಪಾಸ್ ಆದಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal Chief Minister Mamata Banerjee ) ರಾಜ್ಯಪಾಲರ ಬದಲಿಗೆ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯಾಗುತ್ತಾರೆ.
ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದೆ ರಾಜ್ಯಪಾಲ ಜಗದೀಪ್ ಧನಕರ್ (Governor Jagdeep Dhankar ) ಅವರನ್ನು ಖಾಸಗಿ ವಿಶ್ವವಿದ್ಯಾಲಯಗಳ ವಿಸಿಟರ್ ಮತ್ತು ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ತೆಗೆದುಹಾಕಿತ್ತು. ಈಗಿನಂತೆ, ಮಸೂದೆಯನ್ನು ಜಾರಿಗೆ ತರಲು ಮತ್ತು ಕಾಯಿದೆಯಾಗಲು ರಾಜ್ಯಪಾಲರ ದೃಢೀಕರಣದ ಅಗತ್ಯವಿದೆ.
ಯಾವ ಕಾರಣಕ್ಕಾಗಿ ಈ ಬದಲಾವಣೆಯನ್ನು ಮಾಡಲಾಗಿದೆ ಎನ್ನುವುದು ಇನ್ನೂ ತಿಳಿದಿಲ್ಲ. ವರದಿಗಳ ಪ್ರಕಾರ, ವಿಶ್ವವಿದ್ಯಾನಿಲಯಗಳಾದ್ಯಂತ ಉಪಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಬ್ಯಾನರ್ಜಿ ನೇತೃತ್ವದ ಸರ್ಕಾರ ಮತ್ತು ರಾಜ್ಯಪಾಲ ಜಗದೀಪ್ ಧನಕರ್ ಅವರ ಘರ್ಷಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ತಮ್ಮ ಒಪ್ಪಿಗೆಯಿಲ್ಲದೆ ಸರ್ಕಾರವು 24 ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಿಸಿದೆ ಎಂದು ಧಂಕರ್ ಆರೋಪಿಸಿದಾಗ ಭಿನ್ನಾಭಿಪ್ರಾಯ ಪ್ರಾರಂಭವಾಯಿತು ಎಂದು ವರದಿಯಾಗಿದೆ.
ವಿಶ್ವವಿದ್ಯಾನಿಲಯದ ಕುಲಪತಿಗಳು ಇತರ ಕರ್ತವ್ಯಗಳ ಜೊತೆಗೆ ಉಪಕುಲಪತಿಗಳ ನೇಮಕಾತಿಯಲ್ಲಿ ಪ್ರಧಾನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವಿಶ್ವವಿದ್ಯಾನಿಲಯಗಳ ಆಂತರಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಕಾಗದ ಅಥವಾ ಮಾಹಿತಿಯನ್ನು ವಿಸಿಟರ್ ಸಹ ಬೇಡಿಕೆಯಿಡಬಹುದು ಎಂದು ನಿಯಮಗಳು ಸೂಚಿಸುತ್ತವೆ. ಪ್ರಸ್ತುತ ಕಾನೂನಿನ ಅಡಿಯಲ್ಲಿ, ರಾಜ್ಯಪಾಲರು ಎಲ್ಲಾ ರಾಜ್ಯ-ಚಾಲಿತ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿರುತ್ತಾರೆ ಮತ್ತು ಮುಖ್ಯಮಂತ್ರಿಯಲ್ಲ.
ಪಶ್ಚಿಮ ಬಂಗಾಳದ ಸಚಿವ ಸಂಪುಟವು ಮುಖ್ಯಮಂತ್ರಿಯನ್ನು ಕುಲಪತಿಯನ್ನಾಗಿ ಮಾಡಬೇಕೇ ಹೊರತು ರಾಜ್ಯಪಾಲರಲ್ಲ ಎಂಬ ಪ್ರಸ್ತಾವನೆಯನ್ನು ಅನುಮೋದಿಸುವ ಮೊದಲು, ಪಶ್ಚಿಮ ಬಂಗಾಳದ ಸಚಿವ ಬ್ರತ್ಯಾ ಬಸು ಅವರು ಈ ಪ್ರಸ್ತಾವನೆಯನ್ನು ವಿಧಾನಸಭೆಗೆ ಕೊಂಡೊಯ್ಯುವ ನಿರೀಕ್ಷೆಯಿದೆ ಎಂದು ಘೋಷಿಸಿದರು ಇದರಿಂದ ಕೆಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ಸಾಧ್ಯವಾಗಲಿದೆ.
ಪಶ್ಚಿಮ ಬಂಗಾಳ ರಾಜ್ಯಾಪಾಲ ಜಗದೀಪ್ ಧನ್ಕರ್‌ಗೆ ಮಲೇರಿಯಾ, ದೆಹಲಿ ಏಮ್ಸ್ ಆಸ್ಪತ್ರೆ ದಾಖಲು!
ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನಕರ್ ಅವರು ತಮ್ಮ ರಾಜ್ಯದಲ್ಲಿ ಕಾನೂನಿನ ಆಡಳಿತವಿಲ್ಲ, ಏಕೆಂದರೆ ಅದನ್ನು "ಸರ್ವಾಧಿಕಾರಿ" ಆಳುತ್ತಿದ್ದಾರೆ ಎನ್ನುವ ಮೂಲಕ ಸ್ಪಷ್ಟವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಉಲ್ಲೇಖಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿ ಭೀಕರ ಪರಿಸ್ಥಿತಿ ಮತ್ತು ಸವಾಲುಗಳನ್ನು ಕಂಡಿದ್ದೇನೆ ಎಂದು ಹೇಳಿದರು. "ಗವರ್ನರ್ ಆಗಿರುವ ಭಯಾನಕ ಪರಿಸ್ಥಿತಿ ಮತ್ತು ಸವಾಲುಗಳನ್ನು ನಾನು ನೋಡಿದ್ದೇನೆ. ಸಾಂವಿಧಾನಿಕ ವ್ಯವಸ್ಥೆಯನ್ನು ಮೀರಿದ ಆಡಳಿತವನ್ನು ನಾನು ನೋಡಿದ್ದೇನೆ. ಈ ಸರ್ವಾಧಿಕಾರಿಯ ಕಾರಣದಿಂದಾಗಿ ಕಾನೂನಿನ ನಿಯಮವಿಲ್ಲದ ಪರಿಸ್ಥಿತಿಯನ್ನು ನಾನು ನೋಡಿದ್ದೇನೆ" ಎಂದು ರಾಜ್ಯಪಾಲ ಧನ್ ಕರ್ ಅವರು ಉದಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದರು. ಈ ವೇಳೆ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಬಂಗಾಳ ರಾಜ್ಯಪಾಲರ ಮೇಲೆ ದೀದಿ ಭ್ರಷ್ಟಾಚಾರ ಆರೋಪ!
ಪಶ್ವಿಮ ಬಂಗಾಳದಲ್ಲಿ ಈಗ ಇರುವ ಆಡಳಿತವು ಪ್ರಜಾಪ್ರಭುತ್ವ ಮಾದರಿಗೆ ಹೊಂದಾಣಿಕೆ ಆಗುವುದಿಲ್ಲ. ಅದರಲ್ಲೂ ವಿಧಾನಸಭೆ ಚುನಾವಣೆ ಬಳಿಕ ಕೋಲ್ಕತದಲ್ಲಿ ನಡೆದ ಹಿಂಸಾಚಾರದ ಕುರಿತಾಗಿ ಈವರೆಗೂ ವರದಿ ನನ್ನ ಬಳಿಗೆ ಬಂದಿಲ್ಲ ಎಂದು ಹೇಳಿದ್ದಾರೆ.