ಪಠ್ಯದಿಂದ ಟಿಪ್ಪು ಮಾಹಿತಿ ಕೈ ಬಿಡುವ ಬಗ್ಗೆ ಸಮಿತಿ ಪರಿಶೀಲನೆ: ಸಚಿವ ನಾಗೇಶ್
* ಶಾಸಕ ಅಪ್ಪಚ್ಚು ನೀಡಿರುವ ಮಾಹಿತಿ ಸಮಿತಿಗೆ
* ಸಮಿತಿ ಪರಿಶೀಲನೆ ನಡೆಸಿ ಶಿಫಾರಸು ಮಾಡಲಿದೆ
* ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಣ
ಬೆಂಗಳೂರು(ಮಾ.30): ಟಿಪ್ಪು ಸುಲ್ತಾನ್ ಕುರಿತು ಶಾಲಾ ಪಠ್ಯದಲ್ಲಿ ಇರುವ ಸತ್ಯವಲ್ಲದ ಹಾಗೂ ಅನಗತ್ಯವಾದ ಕೆಲ ವಿಚಾರಗಳನ್ನು ಕೈಬಿಡುವ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಅಪ್ಪಚ್ಚು ರಂಜನ್ ಅವರು ಬ್ರಿಟಿಷ್(British) ಲೈಬ್ರರಿಯಲ್ಲಿರುವ ಕೆಲ ಪುಸ್ತಕಗಳನ್ನು(Books) ಅಧ್ಯಯನ ಮಾಡಿ ಪೂರಕ ಮಾಹಿತಿಯನ್ನು ನನಗೆ ತಂದುಕೊಟ್ಟಿದ್ದಾರೆ. ಅವುಗಳನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ(Textbook Revision Committee) ನೀಡಲಿದ್ದು, ಸಮಿತಿ ಪರಿಶೀಲನೆ ನಡೆಸಿ ಶಿಫಾರಸು ಮಾಡಲಿದೆ ಎಂದರು.
Datta Peetha: ಪರಿಷ್ಕೃತ ಶಾಲಾ ಪಠ್ಯದಲ್ಲಿ ದತ್ತಪೀಠದ ಬಗ್ಗೆ ಪಾಠ
ನಮ್ಮ ಬಿಜೆಪಿ(BJP) ಶಾಸಕ ಅಪ್ಪಚ್ಚು ರಂಜನ್ ಅವರು ಸೋಮವಾರ ನನ್ನನ್ನು ಭೇಟಿ ಮಾಡಿ ಟಿಪ್ಪು(Tipu Sultan) ಬಗ್ಗೆ ಮಾಹಿತಿ ಇರುವ ಒಂದಿಷ್ಟು ಪುಸ್ತಕಗಳನ್ನು ತಂದುಕೊಟ್ಟಿದ್ದಾರೆ. ಅಲ್ಲದೆ, ಬ್ರಿಟಿಷ್ ಲೈಬ್ರರಿಯ ಕೆಲ ಪುಸ್ತಕಗಳನ್ನು ಅಧ್ಯಯನ ಮಾಡಿ ರೂಪಕ ಮಾಹಿತಿಯನ್ನು ಸಲ್ಲಿಸಿದ್ದಾರೆ. ಟಿಪ್ಪು ಸುಲ್ತಾನ್ ಕುರಿತಾಗಿ ನಿಜಸಂಗತಿ ತಿಳಿಸುವ ಮಾಹಿತಿ ಅದರಲ್ಲಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮ ಶಾಲಾ ಪಠ್ಯ ಪುಸ್ತಕದಲ್ಲಿ ಕೇವಲ ಟಿಪ್ಪು ಒಳ್ಳೆಯವ, ಧೀರ ಶೂರ ಅಂತ ಒಂದು ಮುಖವನ್ನು ಮಾತ್ರ ತೋರಿಸಲಾಗುತ್ತಿದೆ. ಹೀಗೆ ಮಾಡಬೇಡಿ. ಟಿಪ್ಪು ಸುಲ್ತಾನ್ ಸಮಾಜಕ್ಕೆ ಏನೆಲ್ಲಾ ಕೆಟ್ಟದ್ದು ಮಾಡಿದ್ದರು ಎಂಬುದು ನಾನು ನೀಡಿರುವ ಪುಸ್ತಕಗಳಲ್ಲಿದೆ. ಇದೆಲ್ಲವನ್ನೂ ಪಠ್ಯ ಪರಿಷ್ಕರಣೆ ಪರಿಗಣಿಸಿ ಎಂದು ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣಾ ಸಮಿತಿ ಮುಂದೆ ಸತ್ಯ ಸಂಗತಿ ಪರಿಶೀಲಿಸಿ ಅಗತ್ಯ ಶಿಫಾರಸು ಮಾಡಲಿದೆ ಎಂದು ಅವರು ಹೇಳಿದರು.
ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸಲಾಗಿದೆ. ಅದನ್ನು ತೆಗೆದು ಹಾಕಿ, ಟಿಪ್ಪು ಕುರಿತಾದ ವಾಸ್ತವಗಳನ್ನು ತಿಳಿಸಬೇಕು ಎಂಬ ಚರ್ಚೆ ಶುರುವಾಗಿದೆ. ಪಠ್ಯ ಪುಸ್ತಕ ಪರಿಶೀಲನೆ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಶೀಘ್ರದಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ, ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ಗಿರುವ ‘ಮೈಸೂರು ಹುಲಿ’(The Tiger of Mysuru) ಎಂಬ ಬಿರುದನ್ನು ಕೈಬಿಡಬೇಕು ಎಂಬುದು ಸೇರಿದಂತೆ ಟಿಪ್ಪುವನ್ನು ವೈಭವೀಕರಿಸಿರುವ ಕೆಲ ಅಂಶಗಳನ್ನು ತೆಗೆದುಹಾಕಲು ಪಠ್ಯ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ತನ್ನ ವರದಿಯಲ್ಲಿ ಈಗಾಗಲೇ ಶಿಫಾರಸು ಮಾಡಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಸರ್ಕಾರ ಟಿಪ್ಪು ಪಠ್ಯ ಬದಲಾವಣೆ ಮಾಡುವುದೇ ಎಂಬ ಕುತೂಹಲ ಹುಟ್ಟಿದೆ.
Kalaburagi: ಭಗವದ್ಗೀತೆಗೆ ಕಾಂಗ್ರೆಸ್ ವಿರೋಧವಿಲ್ಲ: ಡಿ.ಕೆ.ಶಿವಕುಮಾರ್
ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟಿಲ್ಲ
ಬೆಂಗಳೂರು: ಶಾಲಾ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್(Tipu Sultan) ವಿಚಾರಗಳನ್ನು ಸಂಪೂರ್ಣ ಕೈಬಿಡಲಾಗುತ್ತಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ಪಠ್ಯದಲ್ಲಿ(Text) ನಡೆದಿದ್ದ ಇತಿಹಾಸ ತಿರುಚುವ ಪ್ರಯತ್ನಗಳು, ತಪ್ಪು, ದೋಷಗಳನ್ನು ಸರಿಪಡಿಸುವ ಕೆಲಸವನ್ನು ಮಾತ್ರ ನಾವು ಮಾಡುತ್ತಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದರು.
ವಿಧಾನಸೌಧದಲ್ಲಿ ಮಾ.25 ರಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದ ಅವರು, ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರವಾಗಿ ಮಾಹಿತಿ ಕೊಡುತ್ತೇನೆ. ಟಿಪ್ಪು ವಿಚಾರವನ್ನು ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರವಾದುದು. ಪಠ್ಯದಲ್ಲಿ ತಿರುಚಿದ್ದ ಇತಿಹಾಸವನ್ನು(History) ಸರಿಪಡಿಸಿದ್ದೇವೆ. ಕಡೆಗಣನೆಯಾಗಿದ್ದ ಇತಿಹಾಸದ ವಿಷಯಗಳನ್ನು ಸೇರ್ಪಡೆ ಮೂಲಕ ಪರಿಚಯಿಸುವ ಪ್ರಯತ್ನ ನಡೆದಿದೆ. ಮಕ್ಕಳು ಓದಲೇಬೇಕಾದ ಪಠ್ಯವನ್ನು ಮತ್ತೆ ತರುವ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದು ತಿಳಿಸಿದ್ದರು.