ಬಡಮಕ್ಕಳಿಗೆ ಗುಡ್ ನ್ಯೂಸ್ ಬೆಂಗಳೂರಿನಲ್ಲಿ ಸಂಜೆ ಶಾಲೆ ಆರಂಭ
* ಬೆಂಗಳೂರಿನ ಬಡಮಕ್ಕಳಿಗೆ ಇದು ಗುಡ್ ನ್ಯೂಸ್
* ಸಂಜೆ ಕಾಲೇಜು ಆಯ್ತುಇದೀಗ ಬೆಂಗಳೂರಿನಲ್ಲಿ ಸಂಜೆ ಶಾಲೆ ಆರಂಭ
* ಬೆಂಗಳೂರಿನ 8 ವಲಯಗಳಲ್ಲೂ ಸಂಜೆ ತರಗತಿ ವ್ಯವಸ್ಥೆ
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು, (ಜೂನ್.30): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುರುವಾಗಲಿದೆ ಸಂಜೆ ಹೈಸ್ಕೂಲ್. ಬಿಬಿಎಂಪಿಯ ಶಿಕ್ಷಣ ಇಲಾಖೆಯಿಂದ ಇಂತಹದೊಂದು ಹೊಸ ಪ್ರಯೋಗಕ್ಕೆ ಸದ್ಯದಲ್ಲೇ ಬಿಬಿಎಂಪಿ ವತಿಯಿಂದ ಸಂಜೆ ತರಗತಿ ಆರಂಭವಾಗಲಿದೆ. ಬಿಬಿಎಂಪಿ ವ್ಯಾಪ್ತಿಯ ಒಂದೊಂದು ವಲಯಕ್ಕೆ ಒಂದು ಈವ್ನಿಂಗ್ ಸ್ಕೂಲ್ ಆರಂಭ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ಬೆಂಗಳೂರಿನ 8 ವಲಯಗಳಲ್ಲೂ ಸಂಜೆ ತರಗತಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿದೆ. ಒಂದು ವೇಳೆ ಈ ಯೋಜನೆ ಸಕ್ಸಸ್ ಆದ್ರೆ ಈವನಿಂಗ್ ಕಾಲೇಜು ತೆರೆಯಲು ಚಿಂತನೆ ನಡೆಸಿದ್ದೇವೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಉಮೇಶ್ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಒಂದೊಂದು ಸಂಜೆ ಶಾಲೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿರುವ ಬಿಬಿಎಂಪಿ ಶಿಕ್ಷಣದಿಂದ ವಂಚಿತರಾದವರಿಗೆ ಈ ಯೋಜನೆ ಅನುಕೂಲವಾಗಲಿದೆ.
ಉದ್ಯೋಗ, ವಾಸಕ್ಕಷ್ಟೇ ಅಲ್ಲ, ವ್ಯಾಸಂಗಕ್ಕೂ ಬೆಂಗಳೂರೇ ನಂಬರ್ 1: ಸಮೀಕ್ಷೆ
ಬಿಬಿಎಂಪಿ ಸಂಜೆ ತರಗತಿಯ ವಿಶೇಷತೆಗಳೇನು..?
8, 9 ಮತ್ತು 10ನೇ ತರಗತಿಯ ಪ್ರೌಢ ಶಾಲಾ ಮಕ್ಕಳಿಗೆ ಮಾತ್ರ ಸಂಜೆ ಕ್ಲಾಸ್ ಇದು ಯಶಸ್ವಿಯಾದ್ರೆ ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೂ ಸಂಜೆ ಕಾಲೇಜುನ್ನ ವಿಸ್ತರಿಸಲಾಗುತ್ತೆ.ಆಲ್ಲದೆ ಮೊದಲು ವಲಯಕ್ಕೊಂದು ಪ್ರಾಯೋಗಿಕವಾಗಿ ಓಪನ್ ಮಾಡಿ ಸೂಕ್ತ ಸ್ಥಳ ಸಿಕ್ಕ ಬಳಿಕ ಪ್ರತೀ ವಾರ್ಡಿಗೊಂದು ಸಂಜೆ ತರಗತಿ ನಡೆಸಲು ಚಿಂತನೆ ನಡೆದಿದೆ.ಆಲ್ಲದೆ ಸಂಜೆ ತರಗತಿಗೆ ಬರುವವರೆಗೆ ಇಸ್ಕಾನ್ ನಿಂದ ಉಚಿತ ಊಟ ಕೊಡಲಾಗುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ದುಗದ್ದಲವಿಲ್ಲದ ಸ್ಥಳದಲ್ಲಿ ಶಾಲೆ ಆರಂಭ ಮಾಡಲು ಶಿಕ್ಷಕರು, ಹೆಣ್ಣು ಮಕ್ಕಳ ಭದ್ರತೆಯ ದೃಷ್ಟಿಯಿಂದ ಸೆಕ್ಯೂರಿಟಿ ವ್ಯವಸ್ಥೆ ಕಲ್ಪಿಸಲಾಗುತ್ತೆ. ಪ್ರತಿ ಶಾಲೆಗೆ 20 ಲಕ್ಷ ವೆಚ್ಚದಲ್ಲಿ ಅನುಕೂಲ ಪುಟ್ಟ ಮನೆ, ಪಠ್ಯ ಪುಸ್ತಕ, ವಸತಿ ಇಲ್ಲದೇ ಹಿಂದುಳಿದ ಮಕ್ಕಳಿಗೆ ಅನುಕೂಲ ಸಂಜೆ ಶಾಲೆಯಿಂದ ಅನುಕೂಲವಾಗಲಿದೆ ಅಂತ ಉಮೇಶ್ ತಿಳಿಸಿದ್ದಾರೆ.ಸಧ್ಯ ಸಂಜೆ ಶಾಲೆ ಪ್ರಸ್ತಾವನೆಯನ್ನ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಸದ್ಯಕ್ಕೆ ವಲಯಕ್ಕೊಂದರಂತೆ ಎಂಟು ಶಾಲೆ ಆರಂಭ ಮಾಡಲಾಗುತ್ತೆ.ಮುಂದೆ ಪಿಯು, ಡಿಗ್ರಿ ಸಂಜೆ ಕಾಲೇಜು ಆರಂಭಿಸಲಾಗುವುದು ಎಂದು ಬಿಬಿಎಂಪಿ ಶಿಕ್ಷಣ ವಿಭಾಗ ಸಹಾಯಕ ಆಯುಕ್ತ ಉಮೇಶ್ ಹೇಳಿದ್ದಾರೆ.
ವ್ಯಾಸಂಗಕ್ಕೂ ಬೆಂಗಳೂರೇ ನಂಬರ್ 1: ಸಮೀಕ್ಷೆ
ಮುಂಬೈ (Mumbai), ಬೆಂಗಳೂರು (Bengaluru), ಚೆನ್ನೈ (Chennai) ಮತ್ತು ದೆಹಲಿ (Delhi) ಯು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಟಾಪ್ 140 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅಸ್ಕರ್ ಕ್ಯೂಎಸ್ ಶ್ರೇಯಾಂಕಗಳ ಪ್ರಕಾರ, ವಾಣಿಜ್ಯ ನಗರಿ ಮುಂಬೈ, ಭಾರತದಲ್ಲಿ ಅತ್ಯುನ್ನತ ಶ್ರೇಣಿಯ ನಗರವಾಗಿ ಸ್ಥಾನ ಪಡೆದಿದೆ. 140 ನಗರಗಳ ಪೈಕಿ ಮುಂಬೈ 103ನೇ ಸ್ಥಾನ, ಬೆಂಗಳೂರು 114ನೇ ಸ್ಥಾನ, ಚೆನ್ನೈ 125ನೇ ಸ್ಥಾನಗಳಿಸಿವೆ. ಜಾಗತಿಕ ಶ್ರೇಯಾಂಕವನ್ನು ಹೊಂದಿರುವ ಮುಂಬೈ, 'ಕೈಗೆಟುಕುವಿಕೆ' ಪ್ಯಾರಾಮೀಟರ್‌ನಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿದೆ. ಆದರೆ 'ವಿದ್ಯಾರ್ಥಿ ಮಿಶ್ರಣ' ಮತ್ತು 'ಅಪೇಕ್ಷಣೀಯತೆ'ಯಲ್ಲಿ ಹೆಣಗಾಡುತ್ತಿದೆ.
ಭಾರತವು ಈ ವರ್ಷ ಎರಡು ಹೊಸ ಪ್ರವೇಶಗಳೊಂದಿಗೆ ತನ್ನ ಪ್ರಾತಿನಿಧ್ಯವನ್ನು ದ್ವಿಗುಣಗೊಳಿಸಿದೆ ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿನ ಒಟ್ಟಾರೆ ವಿದ್ಯಾರ್ಥಿ ಸಮೂಹದ ಒಂದು ಸಣ್ಣ ಭಾಗವನ್ನು ಮಾತ್ರ ಪ್ರತಿನಿಧಿಸುತ್ತಾರೆ. ಉನ್ನತ ಶಿಕ್ಷಣದ ಮೇಲಿನ ಅಖಿಲ ಭಾರತ ಸಮೀಕ್ಷೆ (AISHE) 2018-19 ರ ಪ್ರಕಾರ, ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ 47,427. 2023 ರ ಅಂತ್ಯದ ವೇಳೆಗೆ ಭಾರತವು 2,00,000 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಇದು ಪ್ರಸ್ತುತ ಒಟ್ಟು ನಾಲ್ಕು ಪಟ್ಟು ಹೆಚ್ಚು.