SSLCಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ BBMP ಭರ್ಜರಿ ಕೊಡುಗೆ
* SSLCಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ BBMP ಭರ್ಜರಿ ಕೊಡುಗೆ
* ಪ್ರೋತ್ಸಾಹ ಧನದ ರೂಪದಲ್ಲಿ ಕ್ಯಾಶ್ ಪ್ರೈಸ್
* ಬಿಬಿಎಂಪಿ ವಿದ್ಯಾ ಇಲಾಖೆಯಡಿ ತಲಾ 25 ಸಾವಿರ ಪ್ರೋತ್ಸಾಹಧನ
ಬೆಂಗಳೂರು, ಮೇ.21): 2021-22ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ (SSLC Result) ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಭರ್ಜರಿ ಕೊಡುಗೆ ಘೋಷಿಸಿದೆ.
ಹೌದು..ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದವರಿಗೆ 25 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ.
ಬಿಬಿಎಂಪಿ ಇಲಾಖೆಯಡಿ ಒಟ್ಟು 33 ಪ್ರೌಢಶಾಲೆಗಳಿದ್ದು, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 1,991 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 1,419 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ. 71 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗ ಹಾಜರಾಗಿದ್ದ 1,991 ವಿದ್ಯಾರ್ಥಿಗಳ ಪೈಕಿ ಉತ್ತೀರ್ಣರಾಗಿರುವ 472 ವಿದ್ಯಾರ್ಥಿಗಳಲ್ಲಿ 41 ಹಾಗೂ 951 ವಿದ್ಯಾರ್ಥಿನಿಯರಲ್ಲಿ 103 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಬಿಬಿಎಂಪಿ ವಿದ್ಯಾ ಇಲಾಖೆಯಡಿ ತಲಾ 25 ಸಾವಿರ ಪ್ರೋತ್ಸಾಹಧನ ನೀಡಿ ಗೌರವಿಸಲು ತೀರ್ಮಾನಿಸಿದೆ.
SSLC Exam Revaluation: ಫಲಿತಾಂಶದಿಂದ ತೃಪ್ತಿಯಿಲ್ಲವೇ? ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೀಗೆ
ಶ್ರೀರಾಮಪುರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಸಿ. ಉಜ್ಜಲ 625 ಕ್ಕೆ 616 ಅಂಕ ಪಡೆಯುವ ಮೂಲಕ ಬಿಬಿಎಂಪಿ ವ್ಯಾಪ್ತಿಯ ಪ್ರೌಢಶಾಲೆಗಳ ಪೈಕಿ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ. ಇನ್ನೂ ಒಟ್ಟು ಪರೀಕ್ಷಾ ಫಲಿತಾಂಶದಲ್ಲಿ ಶಾಂತಿನಗರ ಪ್ರೌಢಶಾಲೆಯು ಶೇಕಡ 100 ರಷ್ಟು ಸಾಧನೆ ಮಾಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿದೆ. ಭೈರವೇಶ್ವರನಗರ ಪ್ರೌಢಶಾಲೆ ಶೇಕಡ 91.52 ರಷ್ಟು ಸಾಧನೆ ಮಾಡಿ ದ್ವಿತೀಯ ಸ್ಥಾನ ಪಡೆದರೆ, ಹೇರೋಹಳ್ಳಿ ಪ್ರೌಢಶಾಲೆ ಶೇಕಡ 90.12 ರಷ್ಟು ವಿದ್ಯಾರ್ಥಿಗಳು ಪಾಸ್ ಆಗುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ.
ಇನ್ನೂ ಬಿಬಿಎಂಪಿ ವ್ಯಾಪ್ತಿಯ ಮರ್ಫಿಟೌನ್ ಸಿಜಿಹೆಸ್‌ಎಸ್ ಶಾಲೆ ಶೂನ್ಯ ಸಾಧನೆ ಮಾಡಿದೆ. ಮರ್ಫಿಟೌನ್ ಸಿಜಿಹೆಸ್‌ಎಸ್ ಶಾಲೆಯಿಂದ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 19 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದರೆ. ಮತ್ತು ಕೆಜಿ ನಗರದ ಸಿಜಿಹೆಚ್‌ಎಸ್ ಶಾಲೆಗಳು ಫಲಿತಾಂಶದಲ್ಲಿ ಶೂನ್ಯ ಸಾಧನೆ ಮಾಡಿದೆ. ಈ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇಬ್ಬರು ಅನುತ್ತೀರ್ಣರಾಗಿದ್ದಾರೆ.
SSLC Result 2022 Declared ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ
ಮೇ 19 ರಂದು ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು. ರಾಜ್ಯಾದ್ಯಂತ 2021-22ನೇ ಸಾಲಿನಲ್ಲಿ ಶೇಕಡವಾರು 85.63 ರಷ್ಟು ಫಲಿತಾಂಶ ಬಂದಿದೆ. ಈ ಬಾರಿ 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 2021-22ನೇ ಸಾಲಿನ ಪರೀಕ್ಷೆಗೆ 8,73,884 ವಿದ್ಯಾರ್ಥಿಗಳು ಹಾಜರಾಗಿದ್ದರು.
ಗ್ರೇಸ್ ಅಂಕ ಪಡೆದು 40,000 ಎಸ್ಸೆಸ್ಸೆಲ್ಸಿ ಮಕ್ಕಳು ಪಾಸ್..!
ರಾಜ್ಯದಲ್ಲಿರುವ 15335 ಪ್ರೌಢ ಶಾಲೆಗಳ ಪೈಕಿ ಈ ಬಾರಿ 3920 ಶಾಲೆಗಳಲ್ಲಿ ಎಲ್ಲ ಮಕ್ಕಳೂ ಪಾಸಾಗಿ ಶೇ.100ರಷ್ಟು ಫಲಿತಾಂಶ ಬಂದಿದ್ದರೆ 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಶೇ.100ರಷ್ಟು ಫಲಿತಾಂಶದ ಶಾಲೆಗಳ ಪೈಕಿ ಅನುದಾನರಹಿತ ಖಾಸಗಿ ಶಾಲೆಗಳ ಸಂಖ್ಯೆ ಅತಿ ಹೆಚ್ಚು 1991, ಸರ್ಕಾರಿ ಶಾಲೆಗಳ ಸಂಖ್ಯೆ 1462 ಮತ್ತು ಅನುದಾನಿತ ಖಾಸಗಿ ಶಾಲೆಗಳ ಸಂಖ್ಯೆ 467ರಷ್ಟಿದೆ. ಶೂನ್ಯ ಫಲಿತಾಂಶ ಪಡೆದ ಶಾಲೆಗಳಲ್ಲಿ ಸರ್ಕಾರಿ ಶಾಲೆ 2, ಅನುದಾನಿತ 3, ಅನುದಾನ ರಹಿತ 15 ಶಾಲೆಗಳಿವೆ.
ಶಾಲಾವಾರು ಒಟ್ಟಾರೆ ಫಲಿತಾಂಶದಲ್ಲಿ ಕೂಡ ಖಾಸಗಿ ಶಾಲಾ ಮಕ್ಕಳ ಸಾಧನೆಯೇ ಅತ್ಯುತ್ತಮವಾಗಿದೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಶೇ.92.29 ಮಂದಿ ಉತ್ತೀರ್ಣರಾಗಿದ್ದಾರೆ. ನಂತರದ ಸಾಲಿನಲ್ಲಿ ಸರ್ಕಾರಿ ಶಾಲಾ ಮಕ್ಕಳಲ್ಲಿ ಶೇ.88ರಷ್ಟು ಹಾಗೂ ಅನುದಾನಿತ ಶಾಲೆಯ ಶೇ.87.84 ರಷ್ಟುಮಕ್ಕಳು ತೇರ್ಗಡೆ ಹೊಂದಿದ್ದಾರೆ.