ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಕ್ ಟು ವಿಲೇಜ್ ಸಕ್ಸಸ್, ಶಾಲೆಗೆ ಮರಳಿದ ಮಕ್ಕಳು
ಶಾಲೆಯನ್ನು ಅರ್ಧಕ್ಕೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರಲು ಕಣಿವೆ ರಾಜ್ಯದಲ್ಲಿ ವಿಶಿಷ್ಟ ಕಾರ್ಯಕ್ರಮ
ಬ್ಯಾಕ್ ಟು ವಿಲೇಜ್ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಸಾವಿರಾರು ಮಕ್ಕಳು ಶಾಲೆಗೆ ಮರಳಿದ್ದಾರೆ
ಸದಾ ಪ್ರತಿಭಟನೆ, ಭಯೋತ್ಪಾದನೆ ಪೀಡಿತ ರಾಜ್ಯದಲ್ಲಿ ಸರ್ಕಾರದ ಈ ಕಾರ್ಯಕ್ರಮ ಗಮನ ಸೆಳೆದಿದೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹಳ್ಳಿಗಳಿಗೆ ಹಿಂದಿರುಗಿ ಯೋಜನೆ (ಬ್ಯಾಕ್ ಟು ವಿಲೇಜ್- Back To Village) ಯೋಜನೆ ಬಹಳಷ್ಟು ಜನಪ್ರಿಯವಾಗಿದೆ. ಈ ಯೋಜನೆ ಮೂಲಕ ಸುಮಾರು 14,000 ಮಕ್ಕಳು ಮರಳಿ ಶಾಲೆ (School) ಸೇರಿದ್ದಾರೆ ಎಂಬ ಖುಷಿ ಸಂಗತಿಯೊಂದು ಹೊರಬಿದ್ದಿದೆ. ಜಮ್ಮು ಮತ್ತು ಕಾಶ್ಮೀರನಲ್ಲಿ ಬ್ಯಾಕ್-ಟು-ವಿಲೇಜ್ ಕಾರ್ಯಕ್ರಮದ ಮೂಲಕ ಶಾಲೆ ಬಿಟ್ಟಿದ್ದ ಮಕ್ಕಳೆಲ್ಲ ಮತ್ತೆ ಶಾಲೆಗೆ ಸೇರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಅವರು ಹೇಳಿದರು. ಅಕ್ಟೋಬರ್ 27 ರಿಂದ ನವೆಂಬರ್ 3 ರ ನಡುವೆ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ (Arunkumar Mehhta) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ಪ್ರಸ್ತುತಪಡಿಸಲಾಗಿದೆ. ಶಾಲೆ ತೊರೆದಿದ್ದ ಸುಮಾರು 13,977 ಮಕ್ಕಳು ಮರಳಿ ಶಾಲೆಗೆ ಬಂದಿರುವುದು ಬ್ಯಾಕ್ ಟು ವಿಲೇಜ್ ಕಾರ್ಯಕ್ರಮದ ದೊಡ್ಡ ಸಾಧನೆಯಾಗಿದೆ ಎಂದ ಮುಖ್ಯ ಕಾರ್ಯದರ್ಶಿ, ಶಾಲೆಗೆ ಸೇರಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಭರವಸೆ ನೀಡಿದ್ದಾರೆ.
ಶಿಕ್ಷಣವು ಲಾಭ ಗಳಿಸುವ ವ್ಯಾಪಾರವಲ್ಲ: ಸುಪ್ರೀಂ ಕೋರ್ಟ್
ಕೋಳಿ ಸಾಕಾಣಿಕೆ, ವಸತಿ, ಸಾರಿಗೆ ಮತ್ತು ಆರೋಗ್ಯದಂತಹ ಕ್ಷೇತ್ರಗಳಲ್ಲಿ ಒಟ್ಟು 277 ಸಹಕಾರ ಸಂಘಗಳನ್ನು ನೋಂದಾಯಿಸಲಾಗಿದೆ. ಬ್ಯಾಕ್ ಟು ವಿಲೇಜ್ (Back to Village) ಯೋಜನೆಯ ಭಾಗವಾಗಿ ಸುಮಾರು 8.46 ಲಕ್ಷ ಜನರನ್ನು 'ಅಪ್ಕಿ ಜಮೀನ್ ಆಪ್ಕಿ ನಿಗ್ರಾನಿ' ಪೋರ್ಟಲ್‌ಗೆ ಪರಿಚಯಿಸಲಾಗಿದ್ದು, ಮೂಲ ದಾಖಲೆಗಳನ್ನು ಪೋರ್ಟಲ್ (Portal) ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರಾಡಳಿತ ಪ್ರದೇಶದಲ್ಲಿ ಈವರೆಗೆ ಬ್ಯಾಕ್ ಟು ವಿಲೇಜ್ ಯೋಜನೆ ಶೇ. 88ರಷ್ಟು ಪೂರ್ಣಗೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ 95,959 PMJAY- SEHAT ಗೋಲ್ಡನ್ ಕಾರ್ಡ್(ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ) ಮತ್ತು 49,526 ಕುಟುಂಬಗಳಿಗೆ ಆರೋಗ್ಯ ವಿಮೆಯನ್ನು ಮಾಡಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯು 5,159 ವಿಕಲಚೇತನರ ಕಾರ್ಡ್‌ಗಳನ್ನು (ಯುಡಿಐಡಿ) ಡಿಜಿಟಲೀಕರಣಗೊಳಿಸಿದೆ. ಹಾಗೂ 30,231 ಅಂಗನವಾಡಿ ಫಲಾನುಭವಿಗಳು ಮತ್ತು 11,313 ‘ಲಾಡ್ಲಿ ಬೇಟಿ’ ಫಲಾನುಭವಿಗಳನ್ನು ಆಧಾರ್‌ನೊಂದಿಗೆ ಜೊಡಣೆ ಮಾಡಿ ಅನುಕೂಲ ಮಾಡಿಕೊಡಲಾಗಿದೆ.
ಅಂದ ಹಾಗೇ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಕ್ ಟು ವಿಲೇಜ್ ಪ್ರೋಗ್ರಾಂ (B2V) ಜನರು ತಮ್ಮ ಗ್ರಾಮಗಳ ಅಭಿವೃದ್ಧಿಯ ಬೇಡಿಕೆಗಳನ್ನು ಪರಿಹರಿಸಲು ರೂಪಿಸಲಾಗಿದೆ. ಆದ್ರೆ ಕೇವಲ ಜನರ ಸಮಸ್ಯೆಗಳನ್ನ ಪರಿಹರಿಸುವುದಷ್ಟೇ ಅಲ್ಲ, ನಮ್ಮ ಪಂಚಾಯತ್ ಸಂಸ್ಥೆಗಳನ್ನು ಬಲಪಡಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಗ್ರಾಮ ಸಭೆಗಳಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳುತ್ತಿದ್ದಾರೆ. ಬ್ಯಾಕ್ ಟು ವಿಲೇಜ್ (B2V) ಕಾರ್ಯಕ್ರಮವು ಪ್ರಜಾಪ್ರಭುತ್ವದ ಮಾದರಿಯಾಗಿದ್ದು, ಜನರು ಅಸಮಾಧಾನ ಅಥವಾ ಕೋಪವನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆಯಾಗಿದೆ. ಇದು ಸಾಕಷ್ಟು ಉತ್ತೇಜನಕಾರಿಯಾಗಿದೆ.
ಕೋವಿಡ್ ನಂತರದ ಡಿಜಿಟಲ್ ಬದುಕಿನಿಂದಾಗಿ ಕಾರ್ಪೋರೇಟ್‌ಗಳಿಗೆ ಭಾರೀ ಆದಾಯ: ಪ್ರೊ. ಮೊಹಾಂತಿ
ಆದ್ರೆ ಈ B2V ಕಾರ್ಯಕ್ರಮದಲ್ಲಿ ಜನರು ಹೆಚ್ಚು ಭಾಗವಹಿಸುವಂತೆ ಮಾಡಲು ಸರ್ಕಾರವು ತಜ್ಞರಿಂದ ಸಲಹೆಗಳನ್ನು ಪಡೆಯಬೇಕು. ಹೆಚ್ಚುವರಿಯಾಗಿ, ಜನರು, ಸಂಶೋಧನಾ ಸಂಸ್ಥೆಗಳು, ಎನ್‌ಜಿಒಗಳಿಂದ ಮುಕ್ತ ಸಲಹೆಗಳನ್ನು ಪಡೆಯಬೇಕು. ನಗರಗಳು ಅಥವಾ ಪಟ್ಟಣಗಳಲ್ಲಿ ವಾಸಿಸುವ ಜನರಿಗಾಗಿ ಅಕ್ಟೋಬರ್ 2020 ರಲ್ಲಿ ಸರ್ಕಾರವು ಪ್ರಾರಂಭಿಸಿದ ಮೈ ಟೌನ್ ಮೈ ಪ್ರೈಡ್ ಕಾರ್ಯಕ್ರಮವನ್ನು ಸರ್ಕಾರವು ಮರುಪರಿಶೀಲಿಸಬೇಕು ಎಂಬ ಆಗ್ರಹಗಳು ಕೇಳಿಬರ್ತಿವೆ. ಸರ್ಕಾರದ ಈ ಬ್ಯಾಕ್ ಟು ವಿಲೇಜ್ ಕಾರ್ಯಕ್ರಮದಿಂದಾಗಿ ಸಾಕಷ್ಟು ಸುಧಾರಣೆಯನ್ನು ಕಾಣಲಾಗುತ್ತಿದೆ. ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದ ಮಕ್ಕಳು ಶಾಲೆಗೆ ಮರಳುತ್ತಿರುವುದು ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.