Asianet Suvarna News Asianet Suvarna News

ಆಪಲ್ ಬ್ಯಾಕ್ ಟು ಸ್ಕೂಲ್ ಆಫರ್: ಲ್ಯಾಪ್‌ಟ್ಯಾಪ್, ಐಪ್ಯಾಡ್ ಖರೀದಿ ಮೇಲೆ ರಿಯಾಯ್ತಿ!

*ಟೆಕ್ ದೈತ್ಯ ಆಪಲ್‌ನಿಂದ ಮಕ್ಕಳಿಗೆ ನೆರವಾಗಲು ಎಜ್ಯುಕೇಷನ್ ಡಿಸ್ಕೌಂಟ್ ಆಫರ್
*ಲ್ಯಾಪ್‌ಟ್ಯಾಪ್ ಸೇರಿ ಅನೇಕ ಆಪಲ್‌ ವಸ್ತುಗಳ ಮೇಲೆ ಆಕರ್ಷಕ ರಿಯಾಯ್ತಿ ದೊರೆಯಲಿದೆ
*ಇದಕ್ಕಾಗಿ ಕಂಪನಿಯು ಬ್ಯಾಕ್ ಟು ಸ್ಕೂಲ್ ಎಂಬ ಯೋಜನೆ ಪರಿಚಯಿಸುತ್ತಿದೆ.

Back To School, Apple announce education discounts on its devices
Author
Bengaluru, First Published Jun 29, 2022, 4:10 PM IST

ಬೇಸಿಗೆ ಕಳೆದು ಶಾಲೆ (School) ಹಾಗೂ ಕಾಲೇಜು (Collage) ಗಳ ಬಾಗಿಲು ತೆರೆಯುತ್ತಿದ್ದಂತೆ, ಟೆಕ್ ದೈತ್ಯ ಆ್ಯಪಲ್ (Apple) ಧಮಾಕಾ ಶುರುವಾಗಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ (Smartphone) ತಯಾರಕ ಕಂಪನಿ ಆ್ಯಪಲ್ (Apple), ವಿದ್ಯಾರ್ಥಿಗಳಿಗಾಗಿ ಹೊಸ ಪ್ಲಾನ್ ಜಾರಿಗೆ ತಂದಿದೆ. ಕಾಲೇಜು ಅಥವಾ ವಿವಿ ವಿದ್ಯಾರ್ಥಿಗಳಿಗೆಂದೇ ಆ್ಯಪಲ್, ವಾರ್ಷಿಕ ಶಿಕ್ಷಣ ರಿಯಾಯಿತಿಯನ್ನು ಘೋಷಿಸಿದೆ. ಹೊಸ ಪಠ್ಯಕ್ರಮವನ್ನು ಪ್ರಾರಂಭಿಸಲು ಸಿದ್ಧರಾಗಿರುವ ವಿದ್ಯಾರ್ಥಿಗಳಿಗಾಗಿ ತನ್ನ ಇಂಡಿಯಾ ಸ್ಟೋರ್ ಆನ್‌ಲೈನ್‌ನಲ್ಲಿ 'ಬ್ಯಾಕ್ ಟು ಸ್ಕೂಲ್' (Back to School) ಯೋಜನೆಯನ್ನು ಪರಿಚಯಿಸಿದೆ. ಶಿಕ್ಷಣ ರಿಯಾಯಿತಿಯ ಭಾಗವಾಗಿ ಈ ಟೆಕ್ ಕಂಪನಿಯು ವಿದ್ಯಾರ್ಥಿಗಳಿಗೆ ಹೊಸ ಪೀಳಿಗೆಯ ಮ್ಯಾಕ್‌ಬುಕ್‌ (MacBook) ಗಳು, ಐಪ್ಯಾಡ್‌ (iPad) ಗಳು, ಆಪಲ್ ಪೆನ್ಸಿಲ್ (Apple Pencil) ಮತ್ತು ಸ್ಮಾರ್ಟ್ ಕೀಬೋರ್ಡ್‌ (Smart Keyboard) ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಹೈಬ್ರಿಡ್ ಕಲಿಕೆಯನ್ನು ಪರಿವರ್ತಿಸುವ ಪ್ರಯತ್ನದಲ್ಲಿ, ಅದರ ವಾರ್ಷಿಕ ಶಿಕ್ಷಣದ ಕೊಡುಗೆಯು ಪ್ರಸ್ತುತ ಮತ್ತು ಹೊಸದಾಗಿ ಅಂಗೀಕರಿಸಲ್ಪಟ್ಟ ಕಾಲೇಜು/ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಅವರಿಗಾಗಿ ಖರೀದಿಸುವ ಪೋಷಕರು ಮತ್ತು ಎಲ್ಲಾ ಹಂತಗಳಲ್ಲಿನ ಶಿಕ್ಷಕರು ಮತ್ತು ಸಿಬ್ಬಂದಿಗೆ ಲಭ್ಯವಿದೆ. 

ಇದನ್ನೂ ಓದಿ: ನೀವು ಆರ್ಟ್ಸ್ ಸ್ಟೂಡೆಂಟಾ? ಕೋರ್ಸುಗಳು ಹಲವು, ಆಯ್ಕೆ ನಿಮಗೆ ಬಿಟ್ಟಿದ್ದು!

ಆ್ಯಪಲ್ ಸ್ಟೋರ್ ಆನ್‌ಲೈನ್‌ನ ವಿಶೇಷ ಶಿಕ್ಷಣ ವಿಭಾಗದಲ್ಲಿ ವಿದ್ಯಾರ್ಥಿಗಳು ರಿಯಾಯಿತಿಯನ್ನು ಪಡೆಯಬಹುದು. Mac, iPad, Apple ಪೆನ್ಸಿಲ್, ಸ್ಮಾರ್ಟ್ ಕೀಬೋರ್ಡ್, ಮತ್ತು AppleCare+ ನಲ್ಲಿ 20% ರಿಯಾಯಿತಿ ಸೇರಿದಂತೆ Apple ಸಾಧನಗಳು ಲಭ್ಯವಾಗಲಿವೆ.  ಕಾಲೇಜು ಅಥವಾ ವಿಶ್ವವಿದ್ಯಾನಿಲಯಕ್ಕಾಗಿ Mac ಅಥವಾ iPad ಅನ್ನು ಖರೀದಿಸುವವರು ಉಚಿತವಾಗಿ AirPod ಅನ್ನು ಪಡೆಯುತ್ತಾರೆ.  ಆ್ಯಪಲ್ ಆಫರ್‌ಗಳಲ್ಲಿ ಆಸಕ್ತಿ ಹೊಂದಿರುವವರು ಕಂಪನಿಯ ವೆಬ್‌ಸೈಟ್‌ನಲ್ಲಿ ತಮ್ಮ ಅರ್ಹತೆಯನ್ನು ಪರಿಶೀಲಿಸಬಹುದು. 

Apple Care+ ನಲ್ಲಿ ಕಂಪನಿಯು  ಶೇಕಡಾ 20 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಆದ್ದರಿಂದ ಯುವ ಬಳಕೆದಾರರು ತಮ್ಮ ಸಾಧನಗಳನ್ನು ರಕ್ಷಿಸಿಕೊಳ್ಳಬಹುದು. ಆದಾಗ್ಯೂ, ಪ್ರಚಾರದ ಅವಧಿ ಬಳಿಕ ಖರೀದಿಸಿದ ಸಾಧನಗಳು AppleCare+ ಸೇವೆಗೆ ಅರ್ಹವಾಗಿರುವುದಿಲ್ಲ. ಈಗಾಗಳೇ ಮೊನ್ನೆ ಜೂನ್ 24ರಿಂದ ಆ್ಯಪಲ್ ಕಂಪನಿಯ ಆಫರ್ ಶುರುವಾಗಿದ್ದು, ಸೆಪ್ಟೆಂಬರ್ 22 ರವರೆಗೆ ಆಫರ್ ಲಭ್ಯವಿರುತ್ತದೆ.  ಗ್ರಾಹಕರು (ವಿದ್ಯಾರ್ಥಿಗಳು, ಪೋಷಕರು ಅಥವಾ ಸಿಬ್ಬಂದಿ) ಮೂರನೇ ವ್ಯಕ್ತಿಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. 

ಲಭ್ಯವಿರುವ ಸಾಧನಗಳು ಮತ್ತು ಅವುಗಳ ಬೆಲೆಗಳನ್ನು ಹೀಗಿವೆ: MacBook Pro 13 - ಇದಕ್ಕೆ ₹10,000 ವರೆಗಿನ ರಿಯಾಯಿತಿ ಸಿಗಲಿದೆ.  ₹1,29,900ಗೆ ಲಭ್ಯವಾಗಲಿದೆ. ಇದರ ನಿಯಮಿತ ಬೆಲೆ ₹1,19,900. ಅದೇ ರೀತಿ, MacBook Pro 14 - ಇದು 19,490 ರವರೆಗಿನ ರಿಯಾಯಿತಿಯಲ್ಲಿ ₹1,75,410ಕ್ಕೆ ಲಭ್ಯವಿದೆ. ಇದರ ನಿಯಮಿತ ಬೆಲೆ ₹1,94,900 ರಿಂದ ಪ್ರಾರಂಭವಾಗುತ್ತದೆ. MacBook Pro 16 ಸುಮಾರು ₹23,990 ರಿಯಾಯಿತಿಯಲ್ಲಿ ₹2,15,910 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ - ನಿಯಮಿತ ಬೆಲೆ: ₹2,39,900 ರಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಪುಸ್ತಕ ಪ್ರಕಟಿಸಿ ಗಿನ್ನೆಸ್ ರೆಕಾರ್ಡ್ ಸೇರಿಸಿದ ಬ್ರಿಟನ್ 5ರ ಬಾಲೆ!

ಮ್ಯಾಕ್‌ಬುಕ್ ಏರ್ (M1) ₹10,000 ವರೆಗಿನ ರಿಯಾಯಿತಿಯಲ್ಲಿ ಲಭ್ಯವಿದೆ, ಈಗ ₹89,900 - ನಿಯಮಿತ ಬೆಲೆ: ₹99,900. ಮ್ಯಾಕ್‌ಬುಕ್ ಏರ್ (M2): ₹1,09,900 ರಿಂದ ಪ್ರಾರಂಭವಾಗುತ್ತದೆ - ನಿಯಮಿತ ಬೆಲೆ: ₹1,19,900 ರಿಂದ ಪ್ರಾರಂಭವಾಗುತ್ತದೆ. iMac: ₹1,07,910 ರಿಂದ ಪ್ರಾರಂಭವಾಗುತ್ತದೆ - ನಿಯಮಿತ ಬೆಲೆ: ₹1,19,900 ರಿಂದ ಆರಂಭ. Apple iPad Pro: ₹68,300 ರಿಂದ ಪ್ರಾರಂಭವಾಗುತ್ತದೆ - ನಿಯಮಿತ ಬೆಲೆ: ₹71,900 ರಿಂದ ಪ್ರಾರಂಭವಾಗುತ್ತದೆ. iPad Air: ₹50,780 ರಿಂದ ಪ್ರಾರಂಭವಾಗುತ್ತದೆ - ನಿಯಮಿತ ಬೆಲೆ: ₹54,900 ರಿಂದ ಪ್ರಾರಂಭವಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಏರ್‌ಪಾಡ್‌ಗಳನ್ನು ಹೆಚ್ಚುವರಿ ₹6,400 ಅಥವಾ ₹12,200 ಪಾವತಿಸುವ ಮೂಲಕ ಅಪ್‌ಗ್ರೇಡ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಈ ಯೋಜನೆಯಡಿ ಅರ್ಹ ಗ್ರಾಹಕರು ( ವಿದ್ಯಾರ್ಥಿಗಳು ಮತ್ತು ಶಿಕ್ಷಕರು) ಒಂದು ಮ್ಯಾಕ್ ಮತ್ತು ಒಂದು ಐಪ್ಯಾಡ್‌ ಪಡೆಯಬಹುದು.

Follow Us:
Download App:
  • android
  • ios