Asianet Suvarna News Asianet Suvarna News

Hampi University chancellor: ವಿರೋಧದ ನಡುವೆಯೇ ಹಂಪಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸ.ಚಿ.ರಮೇಶ್‌ ಅವಧಿ ವಿಸ್ತರಣೆ

ಭ್ರಷ್ಟಾಚಾರ ಆರೋಪದ ನಡುವೆಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ.ಸ.ಚಿ.ರಮೇಶ್‌ ಅವರನ್ನು ಮುಂದುವರೆಸಿ, ರಾಜ್ಯಪಾಲರು, ಫೆ.21ರಂದು ಆದೇಶಿಸಿದ್ದಾರೆ.  
 

as per the Karnataka governor's order  Prof SC Ramesh continue as a Hampi Kannada University vice chancellor for one year gow
Author
Bengaluru, First Published Feb 22, 2022, 4:38 PM IST

ವಿಜಯನಗರ(ಫೆ.22): ಹಂಪಿ ಕನ್ನಡ ವಿಶ್ವವಿದ್ಯಾಲಯದ (Hampi Kannada University) ಕುಲಪತಿಯಾಗಿ (chancellor) ಪ್ರೊ.ಸ.ಚಿ.ರಮೇಶ್‌ ಅವರನ್ನು ಮುಂದುವರೆಸಿ, ರಾಜ್ಯಪಾಲರು, ಫೆ.21ರಂದು ಆದೇಶಿಸಿದ್ದಾರೆ.  ಪ್ರೊ.ಸ.ಚಿ.ರಮೇಶ್‌ (Prof SC Ramesh ) ಅವರ ಕನ್ನಡ ವಿವಿ ಕುಲಪತಿ ಹುದ್ದೆ ಅಧಿಕಾರಾವಧಿ ಫೆ. 21ರಂದು ಕೊನೆಗೊಂಡಿತ್ತು. ಇದೀಗ ರಮೇಶ ಅವರನ್ನೇ ಕುಲಪತಿಯನ್ನಾಗಿ ಒಂದು ವರ್ಷದ ಅವಧಿಗೆ ಮುಂದುವರೆಸಿ ಎಂದು ರಾಜ್ಯಪಾಲ ಗೆಹ್ಲೋಟ್ (governor gehlot) ಅವರು ಆದೇಶ ಹೊರಡಿಸಿದ್ದಾರೆ.

ಪ್ರೊ.ಸ.ಚಿ. ರಮೇಶ ವಿರುದ್ಧ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ನೌಕರರ ಸಂಘದವರು ಭ್ರಷ್ಟಾಚಾರ ಆರೋಪ ಹೊರಿಸಿದ್ದರು. ಮಾತ್ರವಲ್ಲ ಒಂದು ವರ್ಷದ ಅವಧಿಗೆ ಅಧಿಕಾರವನ್ನು ವಿಸ್ತರಣೆ ಮಾಡಲು ಆರು ತಿಂಗಳಿನಿಂದ  ತೀವ್ರ ಲಾಬಿ ನಡೆಸುತ್ತಿದ್ದಾರೆ  ಎಂದು ಆರೋಪಿಸಿದ್ದರು. ಈ ಸಂಬಂಧ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು , ಮುಖ್ಯಮಂತ್ರಿ ಮಾತ್ರವಲ್ಲ ಸಂಬಂಧಿಸಿದ ಎಲ್ಲಾ ಇಲಾಖೆಗೆ ಪತ್ರ ಬರೆದು ಆರೋಪಿಸಿದ್ದರು. ಮಾತ್ರವಲ್ಲ ಧರಣಿ ನಡೆಸಿ ಕೂಡ ಅವರ ಅಧಿಕಾರವಧಿ ಮುಂದುವರೆಸದಂತೆ ಮನವಿ ಮಾಡಿದ್ದರು.  ಜೊತೆಗೆ ಹೊಸ ಕುಲಪತಿ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು. ರಮೇಶ್ ಅವರ ಅಧಿಕಾರ ಅವಧಿ ವಿಸ್ತರಣೆ ಮಾಡಬಾರದು ಎಂದು ತಿಂಗಳಿನಿಂದೀಚೆಗೆ ಒತ್ತಾಯ ಕೇಳಿ ಬಂದಿತ್ತು.

ರಮೇಶ ಅವರ ಅಧಿಕಾರವಧಿಯಲ್ಲಿ ಮುಂಬಡ್ತಿ, ಪ್ರೊಬೇಷನರಿ ಘೋಷಣೆ, ಪಿಂಚಣಿ, ಶಿಷ್ಯವೇತನ, ಪಿಎಚ್‌.ಡಿ ಕೊಲೊಕ್ವಿಯಂಗೆ ಲಂಚ ಪಡೆಯಲಾಗಿದೆ ಎಂಬ ಗಂಭೀರ ಆರೋಪಗಳನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರೇ ಮಾಡಿದ್ದರು. ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಯುಜಿಸಿ ನಿಯಮ, ಮೀಸಲಾತಿ ನಿಯಮ ಪಾಲಿಸಿಲ್ಲ.  38 ತಿಂಗಳಿಂದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಿಲ್ಲ. ರಮೇಶ್ ವಿರುದ್ಧ ಆರೋಪ ಮಾಡಿರುವ ಪ್ರಾಧ್ಯಾಪಕರನ್ನು ವರ್ಗಾವಣೆ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿಸಿ, ಸೇಡಿನ ಕ್ರಮ ಜರುಗಿಸುತ್ತಿದ್ದಾರೆ ಎಂಬ ತೀವ್ರ ಆರೋಪ ಕೇಳಿ ಬಂದಿತ್ತು.  ಆದರೆ ಇದ್ಯಾವುದು ಕೂಡ ಕೈಗೂಡಿಲ್ಲ.  ಎರಡನೇ ಬಾರಿಗೆ  ಪ್ರೊ.ಸ.ಚಿ. ರಮೇಶ ಅವರು ಕುಲಪತಿಯಾಗಿ 1 ವರ್ಷ ಅಧಿಕಾರದಲ್ಲಿರಲಿದ್ದಾರೆ.

ಅಸ್ತಿತ್ವದಲ್ಲಿಲ್ಲದ ನರ್ಸಿಂಗ್ ಕಾಲೇಜಿಗೆ ಸೀಟು ಹಂಚಿದ ರಾಜ್ಯ ನರ್ಸಿಂಗ್ ಡಿಪ್ಲೊಮಾ ಪರೀಕ್ಷಾ ಮಂಡಳಿ!

2019ರ ಫೆಬ್ರವರಿ 20 ರಂದು ಅವರು ಮೊದಲ ಬಾರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ರಮೇಶ್ ಭಡ್ತಿ ಪಡೆದಿದ್ದರು. ಸೆಕ್ಷ ನ್‌ 13(1) ಪ್ರಕಾರ ಕರ್ನಾಟಕ ವಿಶ್ವವಿದ್ಯಾಲಯದ ಕಾಯಿದೆ-1991ರ ಅನ್ವಯ ಪ್ರೊ.ಸ.ಚಿ.ರಮೇಶ ಅವರನ್ನು ಮೂರು ವರ್ಷಗಳ ಅವಧಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಮೂರು ವರ್ಷದ ಅವರ ಅವಧಿ ಮುಗಿದ್ದು, ಅವರ ಹುದ್ದೆಯ ಅವಧಿಯನ್ನು 1 ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದೆ.

ಪ್ರೊ.ಸ.ಚಿ.ರಮೇಶ ಅವರು, ಹಂಪಿ ಕನ್ನಡ ವಿವಿ ಜಾನಪದ ವಿಭಾಗದ ಮುಖ್ಯಸ್ಥ ಮತ್ತು ಸಮಾಜ ವಿಜ್ಞಾನ ನಿಕಾಯದ ಡೀನ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು 1996ರಿಂದ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

Davanagere Child Marriage: ದಾವಣಗೆರೆಯಲ್ಲಿ ಬಾಲ್ಯ ವಿವಾಹದಿಂದ 5ನೇ ತರಗತಿ ವಿದ್ಯಾರ್ಥಿಯನ್ನು ಕಾಪಾಡಿದ ಶಿಕ್ಷಕರು

ಫೆ.24. 1961ರಲ್ಲಿ ಜನಿಸಿದ  ರಮೇಶ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ, ಜಾನಪದ ಮತ್ತು ಭಾರತೀಯ ಸಾಹಿತ್ಯದ ಕುರಿತಂತೆ ಡಿಪ್ಲೋಮಾ ಪದವಿ ಮಾಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಜಾನಪದ ಎಂ.ಫಿಲ್, ಮತ್ತು ಜಾನಪದ ಪಿಎಚ್.ಡಿ. ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಜಾಮಿಯ ಮಿಲಿಯ ವಿಶ್ವವಿದ್ಯಾಲಯ, ದೆಹಲಿಯಲ್ಲಿ 1996ರಲ್ಲಿ ಆಡಳಿತ ವಿಚಾರಕ್ಕೆ ಸಂಬಂಧಿಸಿ ಎಂ.ಡಿ.ಪಿ. ಯನ್ನು ಕೂಡ ಮಾಡಿದ್ದಾರೆ.

Follow Us:
Download App:
  • android
  • ios