ಅಮರಾವತಿ (ನ. 06): ಆಂಧ್ರ ಪ್ರದೇಶದಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶುಲ್ಕವನ್ನು ಶೇ.30 ರಷ್ಟುಕಡಿತಗೊಳಿಸಬೇಕು ಎಂದು ಸರ್ಕಾರ ಆದೇಶಿಸಿದೆ.

ಕೊರೋನಾ ವೈರಸ್‌ನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಆಂಧ್ರ ಪ್ರದೇಶ ಶಾಲಾ ಶಿಕ್ಷಣ ಮೇಲ್ವಿಚಾರಣಾ ಆಯೋಗ ನೀಡಿದ್ದ ಶಿಫಾರಸ್ಸಿನ ಅನ್ವಯ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಶಾಲೆಗಳಲ್ಲಿನ್ನು ಲೈಂಗಿಕ ಶಿಕ್ಷಣ..! ಪಠ್ಯ ಪುಸ್ತಕದಲ್ಲಿನ್ನು ಸೆಕ್ಸ್ ಪಾಠ

ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿಯ ಅನ್ವಯ ಲಾಕ್‌ಡೌನ್‌ನಿಂದಾಗಿ ಮಾಚ್‌ರ್‍ ಬಳಿಕ ಬಂದ್‌ ಆಗಿರುವ ಖಾಸಗಿ ಶಾಲೆಗಳು ಪ್ರವೇಶ ಶುಲ್ಕದ ಶೇ.70ರಷ್ಟನ್ನು ಮಾತ್ರವೇ ಪಡೆಯಬೇಕು. ಕಳೆದ ಏಳು ತಿಂಗಳ ಅವಧಿಯಲ್ಲಿ ಶಾಲೆಗಳು ಯಾವುದೇ ಪಠ್ಯೇತರ ಚಟುವಟಿಕೆಗಳನ್ನು ನಡೆಸಿಲ್ಲ. ಅಲ್ಲದೇ ಶಾಲಾ ಕಟ್ಟಡಗಳ ನಿರ್ವಹಣೆಗೆ ಅತಿ ಕಡಿಮೆ ಹಣ ವೆಚ್ಚ ಮಾಡಿವೆ. ಹೀಗಾಗಿ ಖಾಸಗಿ ಶಾಲೆಗಳು ಪ್ರವೇಶ ಶುಲ್ಕವನ್ನು ಕೂಡ ಕಡಿತಗೊಳಿಸಬೇಕು. ಜೊತೆಗೆ ಈಗಿನ ಆನ್‌ಲೈನ್‌ ಶಿಕ್ಷಣವನ್ನು ಮುಂದುವರಿಸಬೇಕು ಎಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.