ಶಾಲೆಗಳಲ್ಲಿನ್ನು ಲೈಂಗಿಕ ಶಿಕ್ಷಣ..! ಪಠ್ಯ ಪುಸ್ತಕದಲ್ಲಿನ್ನು ಸೆಕ್ಸ್ ಪಾಠ
ಸಾರ್ವಜನಿಕ ಶಾಲೆಗಳಲ್ಲಿ ಇನ್ನು ಲೈಂಗಿಕ ಅರಿವು | ಪಠ್ಯ ಪುಸ್ತಕದಲ್ಲಿನ್ನು ಸೆಕ್ಸ್ ಪಾಠ
ಲೈಂಗಿಕ ಶಿಕ್ಷಣಕ್ಕೆ ವಾಷಿಂಗ್ಟನ್ ಮತದಾರರು ಅಸ್ತು ಎಂದಿದ್ದಾರೆ
ಸಾರ್ವಜನಿಕ ಶಾಲೆಗಳಲ್ಲಿ ಇನ್ನು ಲೈಂಗಿಕ ಅರಿವು ಮಕ್ಕಳಿಗೆ ಸಿಗಲಿದೆ
ಜನಾಭಿಪ್ರಾಯ ಸಂಗ್ರಹದಲ್ಲಿ ಶಾಲೆಯಲ್ಲಿ ಲೈಂಗಿಕ ಶಿಕ್ಷಣ ನೀಡುವುದಕ್ಕೆ ಶೇ.58 ಮಂದಿ ಒಲವು ತೋರಿಸಿದ್ದಾರೆ
ಭಾವನೆಗಳ ನಿಯಂತ್ರಣ, ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಲಾಗುತ್ತದೆ
ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ವಾಷಿಂಗ್ಟನ್‌ನಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು.
ಶೇಕಡಾ 58ರಷ್ಟು ಮತದಾರರು ಈ ನಿರ್ಧಾರಕ್ಕೆ ಅಸ್ತು ಎಂದಿದ್ದಾರೆ.
ಸಾರ್ವಜನಿಕ ಶಾಲೆಗಳಲ್ಲಿನ್ನು ಲೈಂಗಿಕ ಶಿಕ್ಷಣ ಪಠ್ಯದ ಭಾಗವಾಗಲಿದೆ.
2021-22 ಶೈಕ್ಷಣಿಕ ವರ್ಷದಿಂದ 6ರಿಂದ 12ನೇ ತರಗತಿ ಮಕ್ಕಳಿಗೆ ಈ ಪಠ್ಯ ಪರಿಚಯಿಸಲಾಗುತ್ತದೆ.
ಶಾಲೆ ಹಾಗೂ ಜೀವನದಲ್ಲಿ ಭಾವನೆಗಳ ನಿರ್ವಹಣೆ, ವ್ಯಕ್ತಿತ್ವ ವಿಕಸನ, ಬಾಂಧವ್ಯ ವೃದ್ಧಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಶಿಕ್ಷಣ ನೀಡಲಾಗುವುದು.
ಮಕ್ಕಳ ಕೌಶಲ್ಯಾಭಿವೃದ್ಧಿಗೂ ಒತ್ತು ನೀಡಲಾಗುತ್ತದೆ.
ಮನುಷ್ಯ ತನ್ನ ಭಾವನೆಗಳನ್ನು ತಾನು ಸರಿಯಾಗಿ ಅರ್ಥ ಮಾಡಿಕೊಂಡು, ನಿರ್ವಹಿಸುವುದ ಕಲಿಯಬೇಕು.
ಆಗ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಅದನ್ನೇ ಲೈಂಗಿಕ ಶಿಕ್ಷಣದಲ್ಲಿ ಕಲಿಸಲಾಗುತ್ತದೆ.