ಅವ್ಯವಸ್ಥೆಯ ಆಗರ ಅಂಬೇಡ್ಕರ್ ವಸತಿ ಶಾಲೆ: 'ಹಸಿವು ಆಗ್ತಿದೆ ಊಟ ಕೊಡಿ ಸಾರ್' ಅಂತಿರೋ ಮಕ್ಕಳು!

  • ಊಟಕ್ಕಾಗಿ ಮಕ್ಕಳು ತಟ್ಟೆ ಹಿಡಿದು ಪ್ರತಿಭಟನೆ
  • ಆಶಿಹಾಳ ತಾಂಡಾದ ಮಕ್ಕಳ ನಿತ್ಯದ ಗೋಳು ಕೇಳುವರೇ ಇಲ್ವಾ?
  • ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿನ ವಸತಿ ಶಾಲೆಯ ಗೋಳು
  • ಅವ್ಯವಸ್ಥೆಯ ಆಗರವಾಗಿದೆ ಅಂಬೇಡ್ಕರ್ ವಸತಿ ಶಾಲೆ
Ambedkar Residential School in Ashihal tanda lingasugur raichur rav

ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ಡಿ.31) : ಗ್ರಾಮೀಣ ಪ್ರದೇಶಗಳಲ್ಲಿನ ಬಡ ಮಕ್ಕಳು ಶಾಲೆ ಬಿಟ್ಟು.. ಕೂಲಿ ಕೆಲಸಗಳಿಗೆ ಹೋಗುವುದನ್ನ ತಪ್ಪಿಸಲು ಬಡ ಮಕ್ಕಳಿಗೋಸ್ಕರ ವಸತಿ ಶಾಲೆಗಳನ್ನು ಸರ್ಕಾರ ಆರಂಭಿಸಿದೆ. ವಸತಿ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕಾಹಾರ ನೀಡಿ ಅದೇ ಶಾಲೆಯಲ್ಲಿಯೇ ‌ಮಕ್ಕಳಿಗೆ ಪಾಠ - ಬೋಧನೆ ಮಾಡುತ್ತಾರೆ. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಆದ್ರೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಆಶಿಹಾಳ ತಾಂಡಾದಲ್ಲಿನ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳ ಗೋಳು ಹೇಳತೀರದಾಗಿದೆ. ವಸತಿ ಶಾಲೆಯ ಸಮಸ್ಯೆಗಳಿಂದ ಬೇಸತ್ತ ಮಕ್ಕಳು ಸಮಸ್ಯೆಗೆ ಪರಿಹಾರ ಒದಗಿಸಿ ಮತ್ತು ಪೌಷ್ಟಿಕಾಹಾರ ನೀಡಿ ಅಂತ ತಟ್ಟೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.‌

 ಅವ್ಯವಸ್ಥೆಯ ಆಗರವಾಗಿದೆ ವಸತಿ ಶಾಲೆ:

ಬಡಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಕ್ಕಳು ಖುಷಿಯಿಂದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರ ವಸತಿ ‌ಶಾಲೆಗಳನ್ನ ಆರಂಭಿಸಿದೆ. ಆದ್ರೆ ಗ್ರಾಮೀಣ ಪ್ರದೇಶಗಳಲ್ಲಿ ಇರುವ ವಸತಿ ಶಾಲೆಗಳಿಗೆ ಸರಿಯಾಗಿ ವಾರ್ಡನ್(Warden) ಗಳು ಭೇಟಿ ನೀಡುತ್ತಿಲ್ಲ. ಇರುವುದರಿಂದ ವಸತಿ ಶಾಲೆ(Hostel)ಯಲ್ಲಿ ಹತ್ತಾರು ‌ಸಮಸ್ಯೆಗಳು‌ ಚಿಕ್ಕ ‌ಮಕ್ಕಳು ಎದುರಿಸುವಂತೆ ಆಗಿದೆ.  

ರಾಯಚೂರು: ವೈದ್ಯರ ನಿರ್ಲಕ್ಷಕ್ಕೆ ಯುವತಿ ಸಾವು, ರಿಮ್ಸ್‌ ಮುಂದೆ ಕುಟುಂಬಸ್ಥರ ಪ್ರತಿಭಟನೆ

 ಖಾಸಗಿ ಕಟ್ಟಡದಲ್ಲಿ ನಡೆದ ಸರ್ಕಾರಿ ವಸತಿ ಶಾಲೆ: 

ರಾಯಚೂರು(Raichur) ಜಿಲ್ಲೆ ಲಿಂಗಸೂಗೂರು(lingasugur) ತಾಲೂಕಿನ ಆಶಿಹಾಳ ತಾಂಡಾ(Ashihal tanda)ದ ಅಂಬೇಡ್ಕರ್ ವಸತಿ ಶಾಲೆಯೂ ಖಾಸಗಿ ಶಾಲೆಯಲ್ಲಿ ನಡೆಯುತ್ತಿದೆ. ಕಟ್ಟಡವೂ ಸರಿಯಾಗಿ ಕ್ಲಿನ್ ಮಾಡದೇ ಇರುವುದರಿಂದ ಇಡೀ ವಸತಿ ಶಾಲೆ ಅವ್ಯವಸ್ಥೆ ಆಗರವಾಗಿದ್ದು,  ಇಲ್ಲಿ ಯಾರೂ ಹೇಳೋರು, ಕೇಳೋರು ಇಲ್ಲದಂತಾಗಿದೆ. 128 ಮಕ್ಕಳು 1 ರಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಿತ್ಯವೂ ಮಕ್ಕಳಿಗೆ ಹಲವು ಸಮಸ್ಯೆಗಳ ಮಧ್ಯೆಯೇ ಮಕ್ಕಳು ದಿನದೂಡುತ್ತಿದ್ದಾರೆ.

ಸಿಲಿಂಡರ್ ಗ್ಯಾಸ್ಸೂ ಇಲ್ಲ..ಕಟ್ಟಿಗೆಯೂ ಇಲ್ಲ: 

ಅಂಬೇಡ್ಕರ್ ವಸತಿ ಶಾಲೆಯಲ್ಲಿನ 128 ಮಕ್ಕಳಿಗೆ ನಿತ್ಯ ಊಟ ಬೇಯಿಸಲು ಸರ್ಕಾರ ಗ್ಯಾಸ್ ಸಿಲಿಂಡರ್(Gas cylinder) ನೀಡಿದೆ. ಆದ್ರೆ ಈ ವಸತಿ ಶಾಲೆಗೆ ಗ್ಯಾಸ್ ಸಿಲಿಂಡರ್ ಬಂದಿಲ್ಲ. ಕಟ್ಟಿಗೆಯೂ ಖರೀದಿ ಮಾಡಿಲ್ಲ. ಹೀಗಾಗಿ ಮಕ್ಕಳಿಗೆ ಊಟ ಮಾಡಿ ಹಾಕಲು ಖುದ್ದು ಸಿಬ್ಬಂದಿಯೇ ಜಮೀನುಗಳಿಗೆ ಹೋಗಿ ಕಟ್ಟಗೆ ತಂದು ಊಟ ರೆಡಿ ಮಾಡುತ್ತಿದ್ದಾರೆ. ಆದ್ರೂ ವಾರ್ಡನ್ ವಸತಿ ಶಾಲೆಗೆ ಬಂದು ಮಕ್ಕಳ ಸಮಸ್ಯೆ ಆಲಿಸಲು ಮುಂದಾಗಿಲ್ಲ.

ಊಟದ ಕೋಣೆಯಲ್ಲಿ ‌ಕಬ್ಬಿಣದ ರಾಡ್ ಗಳು ಕಾಣುತ್ತಿವೆ:

ಬಡ ಮಕ್ಕಳಿಗೆ ಅನುಕೂಲವಾಗಲಿವೆಂದು ಸರ್ಕಾರ ಅಂಬೇಡ್ಕರ್ ವಸತಿ ಶಾಲೆ ಮಾಡಿದೆ. ಆದ್ರೆ ವಸತಿ ನಿರ್ವಹಣೆ ಆಗುತ್ತಿಲ್ಲ. ಹೀಗಾಗಿ 
ಊಟದ ಕೋಣೆಯ ಮೇಲ್ಛಾವಣಿ ಕಾಂಕ್ರೀಟ್ ಸಂಪೂರ್ಣ ಹಾಳಾಗಿದ್ದು, ಕಬ್ಬಿಣದ ರಾಡ್ ಗಳು ಕಾಣುತ್ತಿವೆ. ಮಕ್ಕಳು ಊಟ ಮಾಡುವ ವೇಳೆ ಸಿಮೆಂಟ್ ಉದ್ರಿ ಬೀಳುತ್ತೆ. ಒಂದು ವೇಳೆ  ಕಾಂಕ್ರೀಟ್ ಮಕ್ಕಳ ತಲೆ ಮೇಲೆ ಅಥವಾ ಊಟದ ತಟ್ಟೆಗೆ ಬಿದ್ದರೆ ಇದಕ್ಕೆ ಯಾರು ಹೋಣೆ ಎಂಬ ಮಾತುಗಳು ಪೋಷಕರ ಆರೋಪವಾಗಿದೆ. 

ಸಿಬ್ಬಂದಿ ಕೆಲಸಕ್ಕೆ ಬರೋದಿಲ್ಲ:

ವಸತಿ ಶಾಲೆಯ ಮಕ್ಕಳ ಪೋಷಣೆಗಾಗಿ ಸರ್ಕಾರ ಸಿಬ್ಬಂದಿಯನ್ನುನಿಯೋಜನೆ ಮಾಡಿದೆ. ಆದ್ರೆ ಸರ್ಕಾರದಿಂದ ನಿಯೋಜನೆಗೊಂಡ ಸರ್ಕಾರಿ ಸಿಬ್ಬಂದಿ ಸರಿಯಾಗಿ ಕೆಲಸಕ್ಕೆ ಬಾರದೇ ಅವರ ಬದಲಾಗಿ ಕೂಲಿಗಳನ್ನ ಕೆಲಸಕ್ಕೆ ಇಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಇನ್ನೂ ಮಕ್ಕಳ ಹಿತರಕ್ಷಣೆಗಾಗಿ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸಿಸಿಟಿವಿ ವ್ಯವಸ್ಥೆ ‌ಇದೆ. ಆದ್ರೂ ಸಿಸಿಟಿವಿ ಇದ್ದು ಇಲ್ಲದಂತೆ ಆಗಿದೆ. ಸಿಸಿಟಿವಿಗಳು ವರ್ಕ್ ಆಗಲ್ಲ.  ಇಷ್ಟು ಸಮಸ್ಯೆ ಗಳ ಮಧ್ಯೆಯೂ ಈ ವಸತಿ ನಿಲಯದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.  ಮಧ್ಯಾಹ್ನದ ಊಟ ಸಿಗದಕ್ಕೆ ಆಕ್ರೋಶಗೊಂಡ  ಚಿಕ್ಕ ಮಕ್ಕಳು ಊಟ ಕೊಡಿ ಹಸಿವು ಆಗಿದೆ ಎಂದು ತಟ್ಟೆ ಹಿಡಿದು ಪ್ರತಿಭಟನೆ ‌ಮಾಡಿ ಆಕ್ರೋಶ ಹೊರಹಾಕಿದ್ರು.

Raichur: ತುಂಗಭದ್ರಾ ಕಾಲುವೆಯಲ್ಲಿ ರಾತ್ರಿ ವೇಳೆ ನೀರು ಕಳ್ಳತನ: ಸುತ್ತಮುತ್ತ ‌144 ಸೆಕ್ಷನ್‌ ಜಾರಿ

ಒಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಸರ್ಕಾರಿ ನೌಕರರು ಹೊಂದಿರುವ ವಸತಿ ಶಾಲೆಯಲ್ಲಿಯೇ ಈ ಪರಿಸ್ಥಿತಿ ಇದ್ರೆ ಇನ್ನೂ ಬೇರೆ ವಸತಿ ಶಾಲೆಗಳ ಸಮಸ್ಯೆಗಳು ಆ ದೇವರಿಗೆ ಪ್ರೀತಿ. ಹೀಗಾಗಿ  ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ವಸತಿ ನಿಲಯ ಭೇಟಿ ನೀಡಿ ಪರಿಶೀಲನೆ ಮಾಡಿ ವಸತಿ ಶಾಲೆಯಲ್ಲಿನ ಸಮಸ್ಯೆ ಗಳು ಪರಿಹರಿಸಬೇಕಾಗಿದೆ.

Latest Videos
Follow Us:
Download App:
  • android
  • ios