Asianet Suvarna News Asianet Suvarna News

ರಾಯಚೂರು: ವೈದ್ಯರ ನಿರ್ಲಕ್ಷಕ್ಕೆ ಯುವತಿ ಸಾವು, ರಿಮ್ಸ್‌ ಮುಂದೆ ಕುಟುಂಬಸ್ಥರ ಪ್ರತಿಭಟನೆ

ವೈದ್ಯರ ನಿರ್ಲಕ್ಷದಿಂದ ಯುವತಿ ಸಾವನ್ನಪ್ಪಿದ್ದಾಳೆ ಅಂತ ಆರೋಪಿಸಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ.  ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

Young Woman Dies due to RIMS Doctors Negligence in Raichur grg
Author
First Published Dec 31, 2022, 12:47 PM IST

ರಾಯಚೂರು(ಡಿ.31):  ಮೂಗಿನ ಸಮಸ್ಯೆ ಅಂತ ಆಸ್ಪತ್ರೆಗೆ ದಾಖಲಾದ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ  ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಇಂದು(ಶನಿವಾರ) ನಡೆದಿದೆ. ರಾಯಚೂರು ನಗರದ ರಾಜೇಶ್ವರಿ (18) ಮೃತ ಯುವತಿಯಾಗಿದ್ದಾಳೆ. ವೈದ್ಯರ ಯಡವಟ್ಟಿಗೆ ಯುವತಿ ಮೃತಪಟ್ಟಿದ್ದಾಳೆ ಅಂತ ರಿಮ್ಸ್ ಮುಂದೆ ನೂರಾರು ಜನರು ಪ್ರತಿಭಟನೆ ನಡೆಸಿ ಆಕ್ರೋಶವನ್ನ ಹೊರಹಾಕಿದ್ದಾರೆ. 

ವೈದ್ಯರ ನಿರ್ಲಕ್ಷದಿಂದ ಯುವತಿ ಸಾವನ್ನಪ್ಪಿದ್ದಾಳೆ ಅಂತ ಆರೋಪಿಸಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ.  ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ರಾಜೇಶ್ವರಿ ರಿಮ್ಸ್‌ನಲ್ಲಿ ನರ್ಸಿಂಗ್ ಸೀಟ್ ಪಡೆದಿದ್ದ‌ಳು. ಜ. 10ಕ್ಕೆ ನರ್ಸಿಂಗ್ ಅಡ್ಮಿಷನ್ ಮಾಡಿಸಬೇಕಿದ್ದಳು ಮೃತ ರಾಜೇಶ್ವರಿ. 

Raichuru: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಪ್ರೇಮಿಗಳು ಆತ್ಮಹತ್ಯೆ!

ಮೂಗಿನ ಸಮಸ್ಯೆ ಅಂತ ರಾಜೇಶ್ವರಿ ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಳು. ನಾಲ್ಕು ದಿನ ದಾಖಲು ಮಾಡಿಕೊಂಡು ವೈದ್ಯರು ಆಪರೇಷನ್ ಮಾಡಿದ್ದರು. ಆದರೆ, ಇದೀಗ ರಾಜೇಶ್ವರಿ ಮೃತಪಟ್ಟಿದ್ದಾಳೆ. ಹೀಗಾಗಿ ವೈದ್ಯ ರಾಜಶೇಖರ್ ಪಾಟೀಲ್ ಮೇಲೆ ಕುಟುಂಬಸ್ಥರು ನೇರ ಆರೋಪ ಮಾಡಿದ್ದಾರೆ. ರಿಮ್ಸ್‌ನಲ್ಲಿ ಸೀಟ್ ಸಿಕ್ಕಿದೆ ಎಂಬ ಕಾರಣಕ್ಕೆ ರಾಜೇಶ್ವರಿ ಆಸ್ಪತ್ರೆಗೆ ದಾಖಾಲಾಗಿದ್ದಳು.  ಪೋಷಕರು ರಿಮ್ಸ್ ‌ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳು ಸಭೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. 
 

Follow Us:
Download App:
  • android
  • ios