ಕೊಪ್ಪಳ: ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗೂ ತತ್ವಾರ!

  • ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗೂ ತತ್ವಾರ!
  • ಕೊಪ್ಪಳ ಜಿಲ್ಲಾದ್ಯಂತ ವಿದ್ಯಾರ್ಥಿನಿಯರ ಗೋಳು ಹೇಳ ತೀರದು
  • ಅನುದಾನ ಬಿಡುಗಡೆಯಾಗಿದ್ದರೂ ಪ್ಯಾಡ್‌ ವಿತರಣೆಯಾಗಿಲ್ಲ
  • ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಅಮಾನವೀಯ ಬದುಕು
Although the grant has been released sanitary pads have not been distributed in koppal grils hostels rav

ಕೊಪ್ಪಳ (ಫೆ.23) : ಸರ್ಕಾರಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಯರ ನಿಲಯಗಳಲ್ಲಿ ನಾಲ್ಕಾರು ತಿಂಗಳಿಂದ ಸ್ಯಾನಿಟರಿ ಪ್ಯಾಡ್‌ ವಿತರಣೆ ಮಾಡಿಲ್ಲ. ಇದು ಬಾಲಕಿಯರ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತದೆ. ಹೀಗಾಗಿ ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪಾಲಕರ ನೆರವಿನಿಂದ ಸ್ಯಾನಿಟರಿ ಪ್ಯಾಡ್‌ ತರಿಸಿಕೊಳ್ಳುತ್ತಿದ್ದಾರೆ.

ಇದು, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ(Department of Social Welfare) ಮತ್ತು ಬಿಸಿಎಂ ಇಲಾಖೆ(BCM Department)ಯ ವ್ಯಾಪ್ತಿಯಲ್ಲಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಯರ ನಿಲಯಗಳಲ್ಲಿ ಆಗುತ್ತಿರುವ ಸಮಸ್ಯೆಯಾಗಿದೆ.\

ಯಾವ ರೀತಿಯ ಸ್ಯಾನಿಟರಿ ಪ್ಯಾಡ್‌ ಒಳ್ಳೇದು ನೋಡಿ

ಕುಷ್ಟಗಿ ತಾಲೂಕಿನ ನೀಡಶೇಷಿ, ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಹಾಗೂ ಕನಕಗಿರಿ ಸಿದ್ದಾಪುರನಲ್ಲಿರುವ ಹಾಸ್ಟೆಲ್‌ಗಳಲ್ಲಿ ಪರಿಶೀಲನೆ ಮಾಡಲಾಗಿದ್ದು, ಇಲ್ಲಿ ಪೂರೈಕೆಯಾಗಿಯೇ ಇಲ್ಲ. ಇದಲ್ಲದೆ ಜಿಲ್ಲೆಯ ಶೇ.90 ರಷ್ಟುಹಾಸ್ಟೆಲ್‌ಗಳಿಗೆ ಪೂರೈಕೆಯಾಗಿಲ್ಲ. ಕಳೆದ ಆರು ತಿಂಗಳಿಂದಲೂ ಈ ಸಮಸ್ಯೆ ಇದೆ.

ಸ್ಯಾನಿಟರಿ ಪ್ಯಾಡ್‌()Sanitary pad(ಗಳನ್ನು ರಾಜ್ಯ ಸರ್ಕಾರವೇ ಪೂರೈಕೆ ಮಾಡುತ್ತಿಲ್ಲ. ಆದರೆ, ಕಳೆದೊಂದು ವರ್ಷದಿಂದ ಸ್ಥಳೀಯವಾಗಿಯೇ ಖರೀದಿ ಮಾಡಿಕೊಳ್ಳಲು ಅನುದಾನ ನೀಡುತ್ತಿದೆ. ಈ ಅನುದಾನ ಬಾರದಿರುವುದರಿಂದ ಸಮಸ್ಯೆಯಾಗಿದೆ ಎಂದು ಕೆಲವರು ಹೇಳಿದರೆ, ಅನುದಾನ ಬಂದಿದ್ದರೂ ಖರೀದಿಸದೆ ಖರ್ಚು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವೆಡೆ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ಸ್ಯಾನಿಟರಿ ಪ್ಯಾಡ್‌ಗಳನ್ನು ಪಡೆದು ಕೆಲ ಹಾಸ್ಟೆಲ್‌ಗಳಲ್ಲಿ ವಿತರಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಮಗ್ರ ತನಿಖೆಯಾಗಲಿ:

ಈ ಬಗ್ಗೆ ಜಿಲ್ಲೆಯಲ್ಲಿರುವ ಹಾಸ್ಟೆಲ್‌(Hostel)ಗಳಲ್ಲಿ ಸಮಗ್ರ ತನಿಖೆಯಾಗಬೇಕು. ಮಕ್ಕಳ ಆರೋಗ್ಯದೊಂದಿಗೆ ಆಟವಾಡುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.

ಈ ಕುರಿತಂತೆ ಕನ್ನಡಪ್ರಭ ಪತ್ರಿಕೆ ಅನೇಕ ವಿದ್ಯಾರ್ಥಿಗಳನ್ನು ಮಾತನಾಡಿಸಿದ್ದು, ಬಹುತೇಕರಿಂದ ಸ್ಯಾನಿಟರಿ ಪ್ಯಾಡ್‌ ಬಂದಿಲ್ಲ, ವಿತರಿಸಿಲ್ಲ ಎಂಬ ಉತ್ತರವೇ ಬಂದಿದೆ. ಆದರೆ ಅವರಾರ‍ಯರೂ ತಮ್ಮ ಹೆಸರು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಗಂಭೀರ ಸಮಸ್ಯೆ:

ಅನೇಕ ಹಾಸ್ಟೆಲ್‌ಗಳಲ್ಲಿ ಮಹಿಳಾ ಪ್ರಾಚಾರ್ಯರು ಇದ್ದಾರೆ. ಆದರೂ ಸಹ ಹಂಚಿಕೆಯಾಗುವಂತೆ ನೋಡಿಕೊಳ್ಳದೆ ಇರುವುದರು ನಾಚಿಕೆಗೇಡಿನ ಸಂಗತಿಯಾಗಿದೆ.

ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಇರುವ ವಿದ್ಯಾರ್ಥಿಗಳು ನಾಲ್ಕಾರು ತಿಂಗಳುಗಳ ಕಾಲ ತಮ್ಮೂರಿಗೆ ಹೋಗುವುದಿಲ್ಲ. ಹೀಗಾಗಿ,ಆ ಮಕ್ಕಳು ಪಾಲಕರಿಂದ ಹಣ ಪಡೆದು ತೆಗೆದುಕೊಳ್ಳಬೇಕು ಎಂದರೂ ಆಗುತ್ತಿಲ್ಲ. ಅವರೆಲ್ಲ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಇಷ್ಟುಗಂಭೀರವಾಗಿದ್ದರೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಚಿದಾನಂದ ಕುರಿ ಅವರು ಮಾತ್ರ ಎಲ್ಲ ಕಡೆಯೂ ವಿತರಣೆಯಾಗುತ್ತಿದೆ ಎಂದು ಹೇಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಶಾಲಾ ಬಾಲಕಿಯರಿಗೆ ಸ್ಯಾನಿಟರಿ ಪ್ಯಾಡ್: ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ಜಿಪಂ ಸಿಇಓಗೆ ದೂರು:

ವಿದ್ಯಾರ್ಥಿನಿಯರು ನೀಡಿದ ಹೇಳಿಕೆ ಆಧರಿಸಿ ಸಮಸ್ಯೆಯನ್ನು ಎಸ್‌ಎಫ್‌ಐ ಸಂಘಟನೆ ಕೊಪ್ಪಳ ಜಿಪಂ ಸಿಇಓ ಗಮನಕ್ಕೆ ತಂದಿದ್ದು, ಈ ಕುರಿತು ಲಿಖಿತ ದೂರು ಸಹ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪಾಲಕರು ಸಹ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಡದಿರುವ ಕುರಿತು ಕಿಡಿಕಾರಿದ್ದಾರೆ. ಸ್ಯಾನಿಟರಿ ಪ್ಯಾಡ್‌ಗಾಗಿಯೇ ಪ್ರತಿ ಹಾಸ್ಟೆಲ್‌ಗೂ ದೊಡ್ಡ ಪ್ರಮಾಣದ ಅನುದಾನ ಬರುತ್ತದೆ.ಆದರೂ ಈ ರೀತಿಯ ಸಮಸ್ಯೆಯಾಗಿರುವುದು ಮಾತ್ರ ನಾಚಿಕೆಗೇಡಿನ ಸಂಗತಿಯಾಗಿದೆ.

ಸ್ಯಾನಿಟರಿ ಪ್ಯಾಡ್‌ ವಿತರಣೆ ಎಲ್ಲ ಕಡೆಯೂ ಆಗಿದೆ ಎಂದು ನಮ್ಮ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೂ ಇದನ್ನು ಪರಿಶೀಲನೆ ಮಾಡಲಾಗುವುದು.

ಚಿದಾನಂದ ಕುರಿ, ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆ ಕೊಪ್ಪಳ

ಜಿಲ್ಲಾದ್ಯಂತ ಬಹುತೇಕ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆಯಾಗಿಲ್ಲ. ಈ ಕುರಿತು ಅನೇಕ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೆಲವೊಂದು ಪ್ರಾಚಾರ್ಯರನ್ನು ಸಹ ಭೇಟಿಯಾಗಿದ್ದು, ಅವರು ಸಹ ವಿತರಣೆಯಾಗದೆ ಇರುವ ಮಾಹಿತಿ ನೀಡಿದ್ದಾರೆ. ಹೀಗಾಗಿ,ಈ ಕುರಿತು ಜಿಪಂ ಸಿಇಓ ಅವರಿಗೆ ದೂರು ಸಲ್ಲಿಸಲಾಗುವುದು.

ಅಮರೇಶ ಕಡಗದ ರಾಜ್ಯಾಧ್ಯಕ್ಷರು ಎಸ್‌ಎಫ್‌ಐ ಸಂಘಟನೆ

Latest Videos
Follow Us:
Download App:
  • android
  • ios