ಆಲ್ಮಾ ಮೀಡಿಯಾ ಸ್ಕೂಲ್‌ನಲ್ಲಿ 2022-23ನೇ ಸಾಲಿನ ಹೊಸ ಕೋರ್ಸ್ ಆರಂಭ

* ಆಲ್ಮಾ ಮೀಡಿಯಾ ಸ್ಖೂಲ್‌ನ 5ನೇ ಬ್ಯಾಚ್‌  ಪ್ರವೇಶ ಪ್ರಕ್ರಿಯೆ ಆರಂಭ
* ಪ್ರಾಕ್ಟಿಕಲ್ ಜರ್ನಲಿಸಂ ಮತ್ತು ಮೀಡಿಯಾ ಮ್ಯಾನೇಜ್ಮೆಂಟ್ " ಕೋರ್ಸ್
* ಇದೇ‌ ಮಾರ್ಚ್ 14ನೇ ತಾರೀಖಿನಂದು ಆರಂಭ

Alma Media School 5 Months Practical Journalism and Media Management to Start From March 14th rbj

ಬೆಂಗಳೂರು, (ಮಾ.02): ಪತ್ರಕರ್ತ ಗೌರೀಶ್ ಅಕ್ಕಿ ಸಾರಥ್ಯದ ಆಲ್ಮಾ ಮೀಡಿಯಾ ಸ್ಕೂಲ್‌ನಲ್ಲಿ 2022-23ನೇ ಸಾಲಿನ ಐದು ತಿಂಗಳ ಹೊಸ ಕೋರ್ಸ್ ಆರಂಭವಾಗುತ್ತಿದೆ.

"ಆಲ್ಮಾ ಮೀಡಿಯಾ ಸ್ಕೂಲ್ ನ(Alma Media School )5ನೇ ಬ್ಯಾಚ್‌  ಪ್ರವೇಶ ಪ್ರಕ್ರಿಯೆ ಇದೇ ಮಾರ್ಚ್ 14ನೇ ತಾರೀಖಿನಂದು ಆರಂಭಗೊಳ್ತಾ ಇದೆ. ಪತ್ರಿಕೋದ್ಯಮದಲ್ಲಿ ಆಸಕ್ತರು ಪ್ರವೇಶ ಪಡೆದುಕೊಳ್ಳಬಹುದು,

ಈಗ Alma Media School ನ 5ನೇ ಬ್ಯಾಚ್ - 5 Months Practical Journalism and Media Management' - ಇದೇ‌ ಮಾರ್ಚ್ 14ನೇ ತಾರೀಖಿನಂದು ಆರಂಭಗೊಳ್ತಾ ಇದೆ. 

PUC Time Table ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಬದಲಾವಣೆ. ಇಲ್ಲಿದೆ ಹೊಸ ವೇಳಾಪಟ್ಟಿ

ಪಿ ಜಿ ಡಿಪ್ಲೊಮಾ ಇನ್ ಪ್ರಾಕ್ಟಿಕಲ್ ಜರ್ನಲಿಸಂ ಮತ್ತು ಮೀಡಿಯಾ ಮ್ಯಾನೇಜ್ಮೆಂಟ್ " ಕೋರ್ಸ್ ಗೆ ಪ್ರವೇಶಾತಿ ಆರಂಭವಾಗಿದ್ದು,  ಪ್ರಿಂಟ್(ಪತ್ರಿಕೆ), ಟಿವಿ, ರೇಡಿಯೋ ಮತ್ತು ಡಿಜಿಟಲ್ ಮೀಡಿಯಾದ ಸಂಯೋಜಿತ ಕೋರ್ಸ್ ಲಭ್ಯವಿವೆ.

ಯಾವುದೇ ವಿಷಯದಲ್ಲಿ ಪದವಿ ಅಥವಾ ಪಿಯು ಮುಗಿಸಿರುವ ವಿದ್ಯಾರ್ಥಿಗಳು ಮೇಲೆ ತಿಳಿಸಲಾದ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಇದು ಐದು ತಿಂಗಳ ತರಬೇತಿ ಆಗಿದ್ದು, 70 ಪ್ರತಿಶತ ಕಲಿಕೆಯು ಪ್ರಾಯೋಗಿಕವಾಗಿ ಇರುತ್ತದೆ. 

ಇನ್ನು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ -76187 46667. ಮೇಲ್ ಐಡಿ www.almamediaschool.com

ಬೆಂಗಳೂರಿನ ಆಲ್ಮಾ ಮೀಡಿಯಾ ಸ್ಕೂಲ್ (Alma Media School) ಮತ್ತು ಗೌರೀಶ್ ಅಕ್ಕಿ ಸ್ಟುಡಿಯೋ ಸಹಯೋಗದಲ್ಲಿ 5 ದಿನಗಳ ಆರ್ ಜೆ ಕಾರ್ಯಾಗಾರವನ್ನು (RJ Workshop) ನಡೆಸಲಾಗಿತ್ತು. ಫೆಬ್ರವರಿ 23ರಿಂದ ಫೆಬ್ರವರಿ 27ರವರೆಗೂ ಈ ಕಾರ್ಯಾಗಾರ ನಡೆದಿತ್ತು.

ಪ್ರಸಿದ್ಧ ರೇಡಿಯೋ ಜಾಕಿಗಳಾದ ವಿಕ್ಕಿ, ಪ್ರದೀಪ್, ಅವನೀಧರ್ ಸೇರಿದಂತೆ ಪ್ರಮುಖ ರೇಡಿಯೋ ಜಾಕಿಗಳು ಹಾಗೂ ರೇಡಿಯೋ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಪರಿಣಿತರು ಮತ್ತು ರೇಡಿಯೋ ತಜ್ಞರು ನಿಮ್ಮ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಆಲ್ಮಾ ಮೀಡಿಯಾ ಸ್ಕೂಲ್  ಸ್ಥಾಪಕ ಗೌರೀಶ್ ಅಕ್ಕಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,  ಕೋವಿಡ್ ನಿಂದಾಗಿ ಎಲ್ಲರಂತೆ ಸ್ವಲ್ಪ ಏಟಾಗಿ, ದಾರಿ ತಪ್ಪಿ, ತಡವರಿಸಿ ಸಾವರಿಸಿಕೊಂಡು ಮುಂದೆ ಹೋಗುತ್ತಿದ್ದೇವೆ. ಪ್ರಾಯೋಗಿಕ ಪತ್ರಿಕೋದ್ಯಮವನ್ನೇ ಕೇಂದ್ರಿಕರಿಸಿದ  ಆಲ್ಮಾ ಮೀಡಿಯಾ ಸ್ಕೂಲ್ ಗೆ ಈಗ ನಾಲ್ಕರ ಹರೆಯ. ತನ್ನ ಕಾಲ ಮೇಲೆ ನಿಲ್ಲುವ ಸಮಯ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳೂ ಆಗಿವೆ. ಕಳೆದ 4 ವರ್ಷಗಳಿಂದ ಚಾಲ್ತಿಯಲ್ಲಿದ್ದ  ಒಂದು ವರ್ಷದ ಕೋರ್ಸ್ ಬದಲಾಯಿಸಿ, ಪ್ರತಿ ವರ್ಷ  5 ತಿಂಗಳ ಎರಡು ಬ್ಯಾಚ್ ಗಳನ್ನು ನಾವೀಗ ಮಾಡುತ್ತಿದ್ದೇವೆ. (ವಿಷಯ, ವಿಸ್ತಾರ, ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ.!) ಮೊದಲ 5 ತಿಂಗಳ ಬ್ಯಾಚ್,  ಇದೇ ಮಾರ್ಚ್ 14ನೇ ತಾರೀಖಿನಂದು ಆರಂಭಗೊಳ್ತಾ ಇದೆ ಎಂದು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios