Akshaya Patra Digital Education: ಸರಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣಕ್ಕೆ ಮುಂದಾದ ಅಕ್ಷಯ ಪಾತ್ರ
ಡಿಜಿಟಲ್ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಮತ್ತು ಎನ್‌ಟಿಟಿ ಲಿಮಿಟೆಡ್ ಸಹಯೋಗದಲ್ಲಿ ಸರಕಾರಿ ಶಾಲೆಯ 235 ವಿದ್ಯಾರ್ಥಿಗಳಿಗೆ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳನ್ನು ನೀಡಿದೆ.
ಬೆಂಗಳೂರು(ಫೆ.17): ಡಿಜಿಟಲ್ ಶಿಕ್ಷಣಕ್ಕೆ (Digital education) ಉತ್ತೇಜನ ನೀಡುವ ನಿಟ್ಟಿನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ (Akshaya Patra Foundation) ಮತ್ತು ಎನ್‌ಟಿಟಿ ಲಿಮಿಟೆಡ್ (NTT Limited) ಸಹಯೋಗದ ಜೊತೆ ಸೇರಿ ಬಸವನಗುಡಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಬಾಲಕಿಯರ ಪಿಯುಸಿ ಕಾಲೇಜಿನ 235 ವಿದ್ಯಾರ್ಥಿಗಳಿಗೆ (Students) ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳನ್ನು ನೀಡಿದೆ. ಕಾರ್ಪೊರೇಟ್ ದಾನಿಗಳು ಮತ್ತು BYJUನ ಬೆಂಬಲದೊಂದಿಗೆ ಅಕ್ಷಯ ಪಾತ್ರವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ, ಆಧುನಿಕ ಶಿಕ್ಷಣದ ಪ್ರವೇಶವನ್ನು ಉಚಿತವಾಗಿ ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಕೈಗೊಂಡಿದೆ.
ಎನ್‍ಟಿಟಿ ಲಿಮಿಟೆಡ್ ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಕ್ಷೇತ್ರದಲ್ಲಿ ಮಧ್ಯಸ್ಥಿಕೆಗಳ ಮೇಲೆ ಕೆಲಸ ಮಾಡುತ್ತಿದೆ. ಎನ್‍ಟಿಟಿ ಈಗ ಅಕ್ಷಯ ಪಾತ್ರದ ಡಿಜಿಟಲ್ ಶಿಕ್ಷಣ ಕಾರ್ಯಕ್ರಮವನ್ನು ಕೂಡ ಬೆಂಬಲಿಸುತ್ತಿದೆ. ಈ ಮೂಲಕ ಡಿಜಿಟಲ್ ಇಂಡಿಯಾದ ಸರ್ಕಾರದ ದೃಷ್ಟಿಗೆ ಕೊಡುಗೆ ನೀಡುವ ಸಾಮರ್ಥ್ಯ ಆಧಾರಿತ ಕಲಿಕೆಯನ್ನು ಸುಲಭಗೊಳಿಸಲು ಪ್ರಯತ್ನಿಸುತ್ತಿದೆ. ಪ್ರತಿ ಟ್ಯಾಬ್ಲೆಟ್ ಅನ್ನು ಬೈಜೂಸ್‍ನ ಕಲಿಕೆಯ ಅಪ್ಲಿಕೇಶನ್‍ನೊಂದಿಗೆ ಹೊಂದಿಕೆಯಾಗುವಂತೆ ತಯಾರು ಮಾಡಲಾಗಿದೆ. ಮಕ್ಕಳು ಉತ್ತಮ ಗುಣಮಟ್ಟದ ಮತ್ತು ತಂತ್ರಜ್ಞಾನ ಚಾಲಿತ ಕಲಿಕೆಯ ಕಾರ್ಯಕ್ರಮಗಳ ಬಗ್ಗೆ ಜ್ಞಾನ ಹೊಂದಿದ್ದಾರೆ ಎಂದು ಇದು ಖಚಿತಪಡಿಸಿಕೊಳ್ಳಲಿದೆ. 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಅನ್ನು ವಿತರಣೆ ಮಾಡಲಾಗಿದ್ದು, ಜೆಇಇ, ನೀಟ್ ಮತ್ತು ಕರ್ನಾಟಕ ಸಿಇಟಿ ತಯಾರಿ ಪರೀಕ್ಷೆಗೆ ಬೇಕಾದ ಮಾಹಿತಿಗಳನ್ನು ಪಡೆಯಲು ಲಭ್ಯವಾಗುವಂತೆ ಒದಗಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ನಟ ಶೈನ್ ಶೆಟ್ಟಿ, ಎನ್‍ಟಿಟಿ ಮ್ಯಾನೇಜ್ಡ್ ಸರ್ವೀಸಸ್ ಉಪಾಧ್ಯಕ್ಷ ಶ್ರೀ ಪ್ರಸಾದ್ ಮೊಕ್ಕರಾಳ, ಎನ್‍ಟಿಟಿ ಸಪೋರ್ಟ್ ಸರ್ವೀಸಸ್ ವಿಭಾಗದ ಉಪಾಧ್ಯಕ್ಷ ಶ್ರೀ ರವಿ ಕಲಘಟಗಿ, ಮತ್ತು ಡಿಡಿಪಿಯು ಶ್ರೀ ರಾಜ್‍ಕುಮಾರ್ ಉಪಸ್ಥಿತರಿದ್ದರು. ಅಕ್ಷಯಪಾತ್ರೆ ಫೌಂಡೇಷನ್ ಪ್ರಮುಖ ಸಂವಹನ ವಿಭಾಗದ ನಿರ್ದೇಶಕ ಶ್ರೀ ನವೀನ ನರೇಂದ್ರ ದಾಸ ಮತ್ತು ಅಕ್ಷಯಪಾತ್ರ ಸಿಎಂಓ ಸಂದೀಪ್ ತಲವಾರ ಭಾಗವಹಿಸಿದ್ದರು.
IGNOU BSW Admission: ಇಗ್ನೋದ ನೂತನ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆ ದಿನ
ಅಕ್ಷಯ ಪಾತ್ರದ ಡಿಜಿಟಲ್ ಶಿಕ್ಷಣ ಕಾರ್ಯಕ್ರಮಕ್ಕೆ ಅವಕಾಶ ಸಿಕ್ಕಿರುವುದು ಗೌರವವಾಗಿದೆ. ಕೋವಿಡ್ ನಂತರದ ಯುಗದಲ್ಲಿ, ಎಲ್ಲವೂ ಡಿಜಿಟಲ್ ಮಯವಾಗಿದೆ. ಹೀಗಾಗಿ ಇಂತಹದವನ್ನೆಲ್ಲ ಪರಿಚಯಿಸುವ ಮೂಲಕ ಡಿಜಿಟಲ್ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಅವಶ್ಯಕತೆಯಿದೆ. ಹಸಿವಿನ ಸಮಸ್ಯೆಯನ್ನು ನೀಗಿಸಲು ಅಕ್ಷಯ ಪಾತ್ರ ದೇಶಾದ್ಯಂತ ತನ್ನ ಸೇವೆ ಮಾಡುತ್ತಿದೆ. ಪೌಷ್ಟಿಕಾಂಶಯುಕ್ತ ಊಟದ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಭರವಸೆಯ ಹೆಜ್ಜೆ ಮುಂದಿಟ್ಟಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಇಂತಹ ಉದಾತ್ತ ಕಾರ್ಯವನ್ನು ಬೆಂಬಲಿಸಲು ಇಂತಹ ಹಲವು ಸಂಘಟನೆಗಳು ಮುಂದೆ ಬರಬೇಕಾಗಿದೆ. ಮಕ್ಕಳು ಮತ್ತು ಅಕ್ಷಯಪಾತ್ರೆ ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ನಟ ಶ್ರೀ ಶೈನ್ ಶೆಟ್ಟಿ ಇದೇ ವೇಳೆ ಹೇಳಿದ್ದಾರೆ.
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಅಕ್ಷಯ ಪಾತ್ರವು ಹೊಂದಿದೆ. ವಿದ್ಯಾರ್ಥಿಗಳನ್ನು ಬೆಂಬಲಿಸಲು ಇದು ಶಿಕ್ಷಕರೊಂದಿಗೆ ಕೆಲಸ ಮಾಡುತ್ತಿದೆ. ಈ ಯೋಜನೆಯ ಭಾಗವಾಗಿ, ಆಯ್ದ ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಬೆಂಬಲವಾಗಿ ಎರಡು ವರ್ಷಗಳವರೆಗೆ ಇಂಟರ್ನೆಟ್ ಸಂಪರ್ಕವನ್ನು ಪಡೆಯಲಿದ್ದಾರೆ. ಬೈಜೂಸ್ ನ ಡಿಜಿಟಲ್ ಶೈಕ್ಷಣಿಕ ವಿಷಯವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಮಾಜ ವಿಜ್ಞಾನ ಮತ್ತು ವಾಣಿಜ್ಯದಂತಹ ವಿಷಯಗಳ ಅಧ್ಯಯನ ಸಾಮಗ್ರಿಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತದೆ.
Leela Palace Hotel: ಆತಿಥ್ಯ ನಿರ್ವಹಣೆ ಕೋರ್ಸ್ ಆರಂಭಿಸಿದ ಲೀಲಾ ಪ್ಯಾಲೇಸ್ ಹೊಟೇಲ್
ಇದು ವಿದ್ಯಾರ್ಥಿಗಳಿಗೆ ನೀಟ್, ಜೆಇಇ ಮತ್ತು ಕರ್ನಾಟಕ ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಅಧ್ಯಯನ ಸಾಮಗ್ರಿಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯ ಮಂಡಳಿಗಳ ಜೊತೆಗೆ ಐಸಿಎಸ್‍ಇ ಮತ್ತು ಸಿಬಿಎಸ್‍ಇ ಮಂಡಳಿಗಳ ಮೇಲೆ ಕೇಂದ್ರೀಕರಿಸುವ ರೀತಿಯಲ್ಲಿ ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ವಿಷಯವನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.