ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿನ ನೂತನ ವರ್ಚುವಲ್ ಕೋರ್ಸ್ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ಗೆ  ಆನ್‌ಲೈನ್ ಮೂಲಕ  ಅರ್ಜಿ ಆಹ್ವಾನಿಸಿದ್ದು,  ಫೆಬ್ರವರಿ 21, 2022  ಕೊನೆಯ ದಿನ ಆಗಿದೆ.

ಬೆಂಗಳೂರು(ಫೆ.17): ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (Indira Gandhi National Open University) ದೂರ ಶಿಕ್ಷಣದ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ( Bachelor of Social Work-BSW) ಕೂಡ ಇದರಲ್ಲಿ ಒಂದಾಗಿದೆ. ಸಾಮಾಜಿಕ ಕೆಲಸ ಮತ್ತು ಚಟುವಟಿಕೆಗಳಿಗೆ ಹೆಚ್ಚು ಒಲವು ಹೊಂದಿರುವ ವಿದ್ಯಾರ್ಥಿಗಳಿಗಾಗಿ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು 3 ವರ್ಷಗಳ ಕೋರ್ಸ್ ಆಗಿದ್ದು, ವಿಶ್ವವಿದ್ಯಾನಿಲಯವು ಜನವರಿ ಸೆಶನ್‌ ಗೆ (January session 2022) ಅರ್ಜಿ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಫೆಬ್ರವರಿ 21, 2022 ಕೊನೆಯ ದಿನ ಆಗಿದೆ.

ಈ ಕೋರ್ಸ್ ಮುಗಿದ ನಂತರ ದೇಶದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಕೊಡುಗೆ ನೀಡಬಹುದು. ಈ ಮೂಲಕ ಹಿಂದುಳಿದ ವರ್ಗದವರಿಗೆ ಮತ್ತು ಅನಕ್ಷರಸ್ಥರಿಗೆ ಸಹಾಯ ಮಾಡುವುದು ದೊಡ್ಡ ಭಾಗ್ಯವೂ ಆಗಿದೆ.

ಮೂರು ವರ್ಷಗಳ ಪೂರ್ಣ ಸಮಯದ ಕಾರ್ಯಕ್ರಮವಾಗಿರುವ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ (BSW) ಕೋರ್ಸ್ ಅನ್ನು ವಿಶೇಷವಾಗಿ ಸಾಮಾಜಿಕ ಮತ್ತು ಸಮಾಜ ಕಲ್ಯಾಣ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿಯೇ ತೆರೆಯಲಾಗಿದೆ. 

LIC Recruitment 2022: ಭಾರತೀಯ ಜೀವ ವಿಮಾ ನಿಗಮದಲ್ಲಿ ವಿಮಾ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

ಕೆಲವೊಂದು ಅರ್ಹತಾ ಮಾನದಂಡಗಳನ್ನು ಅನುಸರಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ 10+2 /ಫಿಯುಸಿ ಅಥವಾ BPP ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಕೋರ್ಸ್ ಜಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವಿಲ್ಲ. ST/SC ಯಂತಹ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ 40% ಅಂಕಗಳೊಂದಿಗೆ 10+2 ಉತ್ತೀರ್ಣರಾಗಿರಬೇಕು.

ಕೋರ್ಸ್ ಶುಲ್ಕ: ವಿದ್ಯಾರ್ಥಿಯು 3 ವರ್ಷಕ್ಕೆ 17,400 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಂದರೆ ವರ್ಷಕ್ಕೆ ₹ 6,000ದಂತೆ ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.

ಇಗ್ನೋ ಬಿಎಸ್‌ಡಬ್ಲ್ಯೂ ಕೋರ್ಸ್ ವಿಷಯವಸ್ತುಗಳು ಇಂತಿದೆ:
ಬಿಎಸ್‌ಡಬ್ಲ್ಯೂ ಕೋರ್ಸ್ ವಿಶೇಷವಾಗಿ ಸಮಾಜದ ಒಳಿತಿಗಾಗಿ ಕೆಲಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇದ್ದು, 3 ವರ್ಷಗಳಲ್ಲಿ ಸುಲಭವಾಗಿ ಇದನ್ನು ಪೂರ್ಣಗೊಳಿಸಬಹುದು. ಸಾಮಾಜಿಕ ಕ್ಷೇತ್ರಗಳಾದ ಆರೋಗ್ಯ, ಸಮುದಾಯ ಅಭಿವೃದ್ಧಿ (Community Development), ಶಿಕ್ಷಣ (Education), ಉದ್ಯಮ, ಸಮಾಲೋಚನೆ (Couselling), ಕುಟುಂಬ (Family), ತಿದ್ದುಪಡಿ ಸೆಟ್ಟಿಂಗ್, ಸಾಮಾಜಿಕ ರಕ್ಷಣೆ, ಮಹಿಳೆಯರು(Women), ಮಕ್ಕಳು, ಮಾನಸಿಕ ಆರೋಗ್ಯ ಕ್ಷೇತ್ರ (Mental Health Sector) ಮತ್ತು ಅಂಗವೈಕಲ್ಯ ಕ್ಷೇತ್ರಗಳ ಬಗ್ಗೆ ಅಧ್ಯಯನ ಇರಲಿದೆ.

ಆಸಕ್ತರು ಅಧಿಕೃತ ವೆಬ್‌ಸೈಟ್ ignouiop.samarth.edu.in ಗೆ ಭೇಟಿ ನೀಡಿ ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಧಿಕೃತ ವೆಬ್‌ಸೈಟ್-iop.ignouonline.ac.in ಗೆ ಭೇಟಿ ನೀಡಬಹುದು.
ಕೋರ್ಸ್‌ನ ಎಲ್ಲಾ ಅಧ್ಯಯನ ಸಾಮಗ್ರಿಗಳು (study material ) ಇಗ್ನೋ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ವಿಶ್ವವಿದ್ಯಾನಿಲಯವು ಅಭ್ಯರ್ಥಿಗಳಿಗೆ ಇದನ್ನು ಪಡೆಯಲು ಮುಕ್ತ ಪ್ರವೇಶವನ್ನು ಉಚಿತವಾಗಿ ನೀಡುತ್ತದೆ.

NHAI RECRUITMENT 2022: ಇಂಜಿನಿಯರಿಂಗ್‌ ಪದವೀಧರರಿಗೆ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗವಕಾಶ!

ಜನವರಿ ಸೆಶನ್ ಪ್ರವೇಶಾತಿಗೆ 5ನೇ ಬಾರಿಗೆ ನೋಂದಣಿ ದಿನಾಂಕ ವಿಸ್ತರಿಸಿದ ಇಗ್ನೋ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (Indira Gandhi National Open University) 2022ರ ಜನವರಿ ಸೆಶನ್ ಪದವಿ ಮತ್ತು ಸ್ನಾತಕೋತ್ತರ ಪದವಿ ಮತ್ತು ಪಿಜಿ ಡಿಪ್ಲೋಮಾ ಮತ್ತು ಪಿಜಿ ಸರ್ಟಿಫಿಕೇಟ್ ಕೋರ್ಸ್ ಗಳ ಮರುನೋಂದಣಿ ಅರ್ಜಿ ಸಲ್ಲಿಕೆಯ ಅವಧಿಯನ್ನು ಐದನೇ ಬಾರಿಗೆ ವಿಸ್ತರಣೆ ಮಾಡಿದೆ. ಆಸಕ್ತರು ಆನ್‌ಲೈನ್ ಮೂಲಕ ಫೆಬ್ರವರಿ 21, 2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ https://ignouadmission.samarth.edu.in/ ಗೆ ಭೇಟಿ ನೀಡಿ.