ಶಿಕ್ಷಕರ ಬೋಧನೆ, ಮಕ್ಕಳ ಕಲಿಕೆ ವೃದ್ಧಿಗೆ ಎಐ ಆ್ಯಪ್: ಸಚಿವ ಮಧು ಬಂಗಾರಪ್ಪ
ಎಐ ಆಧಾರಿತ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಶಿಕ್ಷಕರು ಅಗತ್ಯಾನುಸಾರ ಪಠ್ಯಕ್ರಮ, ಸಂದರ್ಭಕ್ಕೆ ತಕ್ಕಂತೆ ಕಡಿಮೆ ಅವಧಿಯಲ್ಲಿ ಪಾಠ ಯೋಜನೆ (ಲೆಸೆನ್ ಪ್ಲಾನ್) ಸಿದ್ದಪಡಿಸಿಕೊಳ್ಳುವುದು. ಹೊಸ ಪಾಠ, ಪ್ರಯೋಗಗಳನ್ನು ಸಂಯೋಜಿಸುವುದು ಸೇರಿದಂತೆ ಸಮಗ್ರ ಬೋಧನಾ ಸಂಪನ್ಮೂಲ ರಚನೆಗೆ ಸಹಕಾರಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಬೆಂಗಳೂರು(ಅ.19): ಎಐ ತಂತ್ರಜ್ಞಾನದ ನೆರವಿನೊಂದಿಗೆ ಸರ್ಕಾರಿ ಶಾಲಾ ಶಿಕ್ಷಕರ ಬೋಧನಾ ಗುಣಮಟ್ಟ, ವಿದ್ಯಾ ರ್ಥಿಗಳ ಕಲಿಕಾ ಸಾಮರ್ಥ ವೃದ್ಧಿಸಲು ಸಿದ್ದಪಡಿಸಿರುವ 'ಶಿಕ್ಷ ಕೋಪೈಲಟ್' ಆ್ಯಪ್ ಅನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಶಾಲಾ ಶಿಕ್ಷಣ ಇಲಾಖೆಯು, ಮೈಕ್ರೋಸಾಫ್ಟ್ ಮತ್ತು ಶಿಕ್ಷಣ ಪೌಂಡೇಷನ್ ಸಹಯೋಗದಲ್ಲಿ ರಚಿಸಿರುವ ಈ ಆ್ಯಪ್ ಅನ್ನು ಪ್ರಾಯೋಗಿಕವಾಗಿ ರಾಜ್ಯದ ಆಯ್ದ 750 ಶಾಲೆಗಳ 1000 ಶಿಕ್ಷಕರಿಗೆ ಒದಗಿಸಲಾಗಿದೆ. ಪ್ರಾರಂಭಿಕವಾಗಿ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳನ್ನು ಈ ಆ್ಯಪ್‌ನಲ್ಲಿ ಒದಗಿಸಲಾಗುತ್ತಿದೆ. ಮುಂದೆ ಎಲ್ಲ ವಿಷಯಗಳಿಗೆ ಅನ್ವಯವಾಗಲಿದೆ. ಒಂದು ಲಕ್ಷ ಶಿಕ್ಷಕರಿಗೆ ಈ ಸೌಲಭ್ಯ ನೀಡುವ ಯೋಜನೆಯಿದೆ ಎಂದರು.
5, 8, 9ನೇ ಕ್ಲಾಸ್‌ಗೆ ಬೋರ್ಡ್ ಪರೀಕ್ಷೆ ಇಲ್ಲ: ಸಚಿವ ಮಧು ಬಂಗಾರಪ್ಪ
ಎಐ ಆಧಾರಿತ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಶಿಕ್ಷಕರು ಅಗತ್ಯಾನುಸಾರ ಪಠ್ಯಕ್ರಮ, ಸಂದರ್ಭಕ್ಕೆ ತಕ್ಕಂತೆ ಕಡಿಮೆ ಅವಧಿಯಲ್ಲಿ ಪಾಠ ಯೋಜನೆ (ಲೆಸೆನ್ ಪ್ಲಾನ್) ಸಿದ್ದಪಡಿಸಿಕೊಳ್ಳುವುದು. ಹೊಸ ಪಾಠ, ಪ್ರಯೋಗಗಳನ್ನು ಸಂಯೋಜಿಸುವುದು ಸೇರಿದಂತೆ ಸಮಗ್ರ ಬೋಧನಾ ಸಂಪನ್ಮೂಲ ರಚನೆಗೆ ಸಹಕಾರಿ. ಬೋಧನಾ ಗುಣಮಟ್ಟ ಮಕ್ಕಳ ಕಲಿಕಾ ಸಾಮರ್ಥ ಹೆಚ್ಚಿಸಲು ಸಹಕಾರಿಯಾಗಲಿದೆ. ಪ್ರಯೋಗಗಳನ್ನು ಚಟುವಟಿಕೆ ಆಧಾರಿತವಾಗಿ ನಡೆಸು ವುದು. ವಿದ್ಯಾರ್ಥಿಗಳ ಭಾಗವಹಿಸುವಿಕೆ ಪ್ರೇರೇಪಿಸುತ್ತದೆ ಎಂದರು.