ರೈತರ ಮಕ್ಕಳ ಸ್ಕಾಲರ್‌ಶಿಪ್‌ಗೆ ಪಹಣಿ ಬೇಕಿಲ್ಲ: ಸಚಿವ ಬಿ.ಸಿ.ಪಾಟೀಲ್‌

*   ಈವರೆಗೆ 6 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ ಬಿಡುಗಡೆ
*  ಅವಿಭಕ್ತ ಕುಟುಂಬದ ಮಕ್ಕಳಿಗಾಗುತ್ತಿದ್ದ ಸಮಸ್ಯೆ ಇತ್ಯರ್ಥ
*  ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾಭ್ಯಾಸ ಪಡೆಯಲು ವಿದ್ಯಾನಿಧಿ ಯೋಜನೆ ಬಳಕೆಯಾಗಲಿ 
 

Agriculture Minister BC Patil React on  Farmers Childrens Scholarship grg

ಬೆಂಗಳೂರು(ಮಾ.19):  ರೈತರ(Farmers) ಮಕ್ಕಳ ಶಿಕ್ಷಣಕ್ಕಾಗಿ ಜಾರಿಗೆ ತಂದಿರುವ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಯಡಿ ಈವರೆಗೆ 6,05,514 ಮಕ್ಕಳು ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ವೇತನ ಪಡೆಯಲು ರೈತರ ಮಕ್ಕಳು ಪಹಣಿ ಸಲ್ಲಿಸುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌(BC Patil) ತಿಳಿಸಿದರು.

ಕಾಂಗ್ರೆಸ್‌(Congress) ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯಾರ್ಥಿ ವೇತನವನ್ನು(Scholarships) ಅರ್ಹತೆ ಆಧಾರದ ಮೇಲೆ ಅರ್ಜಿ ಸಲ್ಲಿಸಿದರೆ ಪರಿಗಣಿಸುತ್ತೇವೆ. ಅವಿಭಕ್ತ ಕುಟುಂಬದಲ್ಲಿ ಒಬ್ಬರ ಹೆಸರಿನಲ್ಲಿ ಮಾತ್ರ ಪಹಣಿ ಇರುವುದರಿಂದ ಕುಟುಂಬದ ಇತರ ಮಕ್ಕಳಿಗೆ ಸಮಸ್ಯೆಯಾಗುತ್ತಿತ್ತು. ಈಗ ಅದನ್ನು ಪರಿಹರಿಸಲಾಗಿದ್ದು, ವಿದ್ಯಾರ್ಥಿ ವೇತನಕ್ಕೆ ಪಹಣಿ ಅಗತ್ಯವಿಲ್ಲ ಎಂದರು.

PMFBY: ರೈತರ ಮನೆ ಬಾಗಿಲಿಗೇ ಫಸಲ್ ಬಿಮಾ ಪಾಲಿಸಿ: ಬಿ.ಸಿ. ಪಾಟೀಲ್‌

ಇ-ಆಡಳಿತ ಇಲಾಖೆಯು(Department of E-Governance) ನಿರ್ವಹಿಸುತ್ತಿರುವ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ ಪೋರ್ಟಲ್‌ನಿಂದ ಕೃಷಿ ಇಲಾಖೆ ಅರ್ಹ ವಿದ್ಯಾರ್ಥಿಗಳ ದಾಖಲಾತಿಗಳನ್ನು ವಿದ್ಯಾರ್ಥಿ ವೇತನ ವರ್ಗಾವಣೆಗಾಗಿ ನೀಡಲಿದೆ. ಕೃಷಿ ಇಲಾಖೆಗೆ(Department of Agriculture) ವಿದ್ಯಾರ್ಥಿಗಳನ್ನು(Students) ತಿರಸ್ಕರಿಸಲು ಯಾವುದೇ ಅವಕಾಶವಿಲ್ಲ. ಈ ಯೋಜನೆಗೆ 2021-22ನೇ ಸಾಲಿಗೆ 200 ಕೋಟಿ ಅನುದಾನ ಮೀಸಲು ಇಡಲಾಗಿದೆ. 8ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು(Girls Education) ಮತ್ತು ಎಸ್‌ಎಸ್‌ಎಲ್‌ಸಿ(SSLC) ಪೂರೈಸಿರುವ ರೈತರ ಮಕ್ಕಳು ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾಭ್ಯಾಸ ಪಡೆಯಲು ವಿದ್ಯಾನಿಧಿ ಯೋಜನೆ ಬಳಕೆಯಾಗಲಿದೆ ಎಂದು ಹೇಳಿದರು.

8ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳು ಮತ್ತು ಎಸ್‌ಎಸ್‌ಎಲ್‌ಸಿ ಪೂರೈಸಿರುವ ಹಾಗೂ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆ, ವಿವಿಗಳಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ(Study) ಮಾಡುತ್ತಿರುವ ರೈತರ ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ. ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ ಬ್ಯಾಂಕ್‌ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ ವರ್ಗಾಯಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಮಾಸಾಂತ್ಯಕ್ಕೆ 100 ‘ಕೃಷಿ ಸಂಜೀವಿನಿ’ ವಾಹನ

ಕೃಷಿ (Agriculture) ಸಂಬಂಧ ಬೆಳೆ, ಕೀಟ ನಿಯಂತ್ರಣ ಕುರಿತು ಮಾಹಿತಿ ಹಾಗೂ ಮಣ್ಣು ಪರೀಕ್ಷೆಗಳನ್ನು ರೈತರ ಜಮೀನಿನ ಬಳಿಯೇ ಮಾಡುವ 100 ‘ಕೃಷಿ ಸಂಜೀವಿನಿ’ ಸಂಚಾರಿ ವಾಹನಗಳ (Krushi Sanjeevini Vehicles) ಸೇವೆಯನ್ನು ಈ ತಿಂಗಳೊಳಗೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು.

ಈಶ್ವರಪ್ಪ ಪರ ಬಿಸಿ ಪಾಟೀಲ್ ಬ್ಯಾಟಿಂಗ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಕೊಪ್ಪಳ (Koppal) ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದ ಕೃಷಿ ಸಂಜೀವಿನಿ ವಾಹನಗಳ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಉದ್ದೇಶಿಸಿದ್ದು, ಒಟ್ಟು 164 ‘ಕೃಷಿ ಸಂಜೀವಿನಿ’ ವಾಹನಗಳ ಖರೀದಿಗೆ ಆರ್ಥಿಕ ಇಲಾಖೆ (finance department) ಒಪ್ಪಿಗೆ ನೀಡಿದೆ. 100 ವಾಹನಗಳನ್ನು ಮಾರ್ಚ್ ಅಂತ್ಯದೊಳಗೆ ತಾಲ್ಲೂಕುಗಳಿಗೆ ನೀಡಲಾಗುವುದು, ಉಳಿದವುಗಳನ್ನು ಮುಂದಿನ ದಿನಗಳಲ್ಲಿ ಕೊಡಲಾಗುವುದು ಎಂದು ಅವರು ಹೇಳಿದರು.

ಜೆಡಿಎಸ್‌ ಸದಸ್ಯ ಗೋವಿಂದರಾಜು ಅವರ ಗಮನ ಸೆಳೆಯುವ ಸೂಚನೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ‘ಪ್ರಯೋಗಾಲಯದಿಂದ ಭೂಮಿಗೆ’ ಎಂಬ ಕಲ್ಪನೆ ಆಧಾರದ ಮೇಲೆ ‘ಕೃಷಿ ಸಂಜೀವಿನಿ’ ಸೇವೆ ಆರಂಭಿಸಲಾಗಿದೆ. ರೈತರು ಕೃಷಿ ಸಂಜೀವಿನಿಗೆ ನಿಗದಿಪಡಿಸಿದ ದೂರವಾಣಿಗೆ ಕರೆ ಮಾಡಿದರೆ ಕೃಷಿಗೆ ಸಂಬಂಧಿಸಿದ ಮಣ್ಣು ಪರೀಕ್ಷೆ, ಕೀಟ ಬಾಧೆ, ಬೆಳೆ ಬೆಳೆಯುವ ಕುರಿತು ಮಾಹಿತಿ ನೀಡುವ ಜೊತೆಗೆ ಅವರ ಜಮೀನಿಗೆ ಹೋಗಿ ಪರಿಹಾರ ಒದಗಿಸಲಾಗುವುದು ಎಂದರು.
 

Latest Videos
Follow Us:
Download App:
  • android
  • ios