PMFBY: ರೈತರ ಮನೆ ಬಾಗಿಲಿಗೇ ಫಸಲ್ ಬಿಮಾ ಪಾಲಿಸಿ: ಬಿ.ಸಿ. ಪಾಟೀಲ್
ಬೆಂಗಳೂರು(ಫೆ.27): ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ(Pradhan Mantri Fasal Bima Yojana) ವ್ಯಾಪ್ತಿಯನ್ನು ಹೆಚ್ಚಿಸುವ ಜೊತೆಗೆ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ‘ನನ್ನ ಪಾಲಿಸಿ ನನ್ನ ಕೈಯಲ್ಲಿ’ ಎಂಬ ಬೆಳೆ ವಿಮೆ ಪಾಲಿಸಿ(Crop Insurance Policy) ವಿತರಣಾ ಅಭಿಯಾನವನ್ನು ಕೃಷಿ ಇಲಾಖೆ(Department of Agriculture) ಪ್ರಾರಂಭಿಸಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ(Bangalore Agricultural University) ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಬಿಎಚ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್(BC Patil), ಪ್ರಕೃತಿ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ಸರ್ಕಾರದ ಸಂಕಲ್ಪವಾಗಿದೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ(Farmers) ನೆರವಿಗೆ ಬರುವ ಯೋಜನೆ ಇದಾಗಿದೆ ಎಂದರು.
ಹಿಂಗಾರು 2021-22 ರ ಹಂಗಾಮಿನಲ್ಲಿ ನೋಂದಣಿ ಮಾಡಿದಂತಹ ರೈತರಿಗೆ ತಮ್ಮ ಪಾಲಿಸಿ ವಿವರವನ್ನು ಇನ್‌ಲ್ಯಾಂಡ್ ಲೆಟರ್ ನಮೂನೆಯಲ್ಲಿ ವಿತರಿಸಲಾಗುವುದು. 2021ರ ಮುಂಗಾರು ಹಂಗಾಮಿನಲ್ಲಿ 113.49 ಕೋಟಿ ರು.ಗಳ ಬೆಳೆ ವಿಮಾ ಪರಿಹಾರ ಮೊತ್ತವನ್ನು ಪ್ರಕೃತಿ ವಿಕೋಪದಡಿ ರೈತರಿಗೆ ವಿತರಣೆ ಮಾಡಲಾಗಿದೆ. 2016-17 ಹಾಗೂ 2017-18 ರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿಮಾ ಪರಿಹಾರ ಮೊತ್ತವು ರೈತರ ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆ ಲಭ್ಯವಿಲ್ಲದ ಕಾರಣ ತಿರಸ್ಕೃತಗೊಂಡ 100.24 ಕೋಟಿ ರು.ಗಳನ್ನು ಎಸ್ಕ್ರೋ (ಉಖಇ್ಕ) ಖಾತೆಯ ಮೂಲಕ 1.27 ಲಕ್ಷ ಅರ್ಹ ರೈತ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದ ಸಚಿವ ಪಾಟೀಲ್
ಕಳೆದ ಬಾರಿ ನಡೆದ ಸಭೆಯಲ್ಲಿ ವಿಮಾ ಸಂಸ್ಥೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರ ಫಲವಾಗಿ ಒಂದೇ ತಿಂಗಳಿನಲ್ಲಿ 43.89 ಕೋಟಿ ರು. ಗಳ ಪರಿಹಾರ ಮೊತ್ತವನ್ನು 33,160 ರೈತರಿಗೆ ಇತ್ಯರ್ಥಪಡಿಸಿದ್ದಾರೆ. ಎನ್‌ಪಿಸಿಐ ಮೌಲ್ಯೀಕರಣದ ವೈಫಲ್ಯದಿಂದಾಗಿ ಹಲವಾರು ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಇತ್ಯರ್ಥವಾಗದ ಕಾರಣ ಎಲ್ಲಾ ರೈತರು ಕಡ್ಡಾಯವಾಗಿ ಆಧಾರನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಕೊಳ್ಳಲೇಬೇಕೆಂದು ತಿಳಿಸಿದ ಬಿ.ಸಿ. ಪಾಟೀಲ್
ಜಿಕೆವಿಕೆ ಕುಲಪತಿ ರಾಜೇಂದ್ರ ಪ್ರಸಾದ್, ಕೃಷಿ ಆಯುಕ್ತ ಬ್ರಿಜೇಶ್‌ಕುಮಾರ್ ದೀಕ್ಷಿತ್, ಕೃಷಿ ಇಲಾಖಾ ನಿರ್ದೇಶಕಿ ನಂದಿನಿಕುಮಾರಿ, ಅಧಿಕಾರಿಗಳಾದ ಶಿವರಾಜ್, ವೆಂಕಟರಮಣ ರೆಡ್ಡಿ ಉಪಸ್ಥಿತರಿದ್ದರು.