ಮಕ್ಕಳಿಂದ ದೂರ ಉಳಿದ ಸೈಕಲ್ ಭಾಗ್ಯ!

ಕೊರೊನಾ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ಮರಿಚಿಕೆಯಾದ ಸೈಕಲ್ ಭಾಗ್ಯ, ಈ ವರ್ಷವಾದರೂ ಕರ್ನಾಟಕ ಸರ್ಕಾರ ಸಾಕಲಕ್ಕೆ ಮಕ್ಕಳಿಗೆ ಉಚಿತ ಬೈಸಿಕಲ್ ನೀಡಬಹುದುದೇ ಎಂಬ ಪ್ರಶ್ನೆ ಎದ್ದಿದೆ.

after corona pandemic No bicycles for school students in Karnataka

ವರದಿ:  ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಮೇ.14): ಕೋವಿಡ್ ಸಾಂಕ್ರಾಮಿಕ ( corona pandemic) ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬೈಸಿಕಲ್ (bicycles) ವಿತರಿಸದ ಕಾರಣ, ರಾಜ್ಯದ ಮಕ್ಕಳು 'ಕಡ್ಡಾಯ ಶಿಕ್ಷಣದ ಹಕ್ಕಿನಿಂದ' ವಂಚಿತರಾಗಿದ್ದು ಸುಳ್ಳಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷವಾದರೂ, ಕರ್ನಾಟಕ ಸರ್ಕಾರ ಸಾಕಲಕ್ಕೆ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಿಸುವುದೇ? ಇಂತಹದೊಂದು ಪ್ರಶ್ನೆ ರಾಜ್ಯದ ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ಹಾಗೂ ಶಿಕ್ಷಣ ತಜ್ಞರಲ್ಲಿ ಮೂಡಿದೆ.

ಕರ್ನಾಟಕದ ಗ್ರಾಮೀಣ ಮತ್ತು ಗುಡ್ಡಗಾಡು ಮಕ್ಕಳಿಗೆ ದೊಡ್ಡಮಟ್ಟದಲ್ಲಿ ವರವಾಗಿದ್ದ ಈ ಸೈಕಲ್ ವಿತರಣೆ ಯೋಜನೆಗೆ ಸರ್ಕಾರ 2020-21 ,2021-22 ಶೈಕ್ಷಣಿಕ ವರ್ಷದಲ್ಲಿ ಬ್ರೇಕ್ ಹಾಕಿದೆ.

ಯೋಜನೆ ಉದ್ದೇಶ: ರಾಜ್ಯದ ಪ್ರೌಢಶಾಲೆ ಲಭ್ಯತೆ ಮಾನದಂಡ 5 ಕಿ.ಮೀ ವ್ಯಾಪ್ತಿ ಗುಡ್ಡಗಾಡು ಹಾಗೂ ಗ್ರಾಮೀಣದ ಮಕ್ಕಳ ಹಾಜರಾತಿ ಹೆಚ್ಚಳ ಹಾಗೂ ಶಿಕ್ಷಣದ ಹಕ್ಕು ಎತ್ತಿ ಹಿಡಿಯುವ ಉದ್ದೇಶದಿಂದಲೇ ರಾಜ್ಯ ಸರ್ಕಾರ 2006-07 ರಲ್ಲಿ ಈ ಯೋಜನೆ ಅನುಷ್ಠಾನಿಸಿದ್ದು, ಇದಕ್ಕೆ ಜನರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಮೊದಲು ಬಿಪಿಎಲ್ ಪಡಿತರ ಚೀಟಿಯ ಕುಟುಂಬದ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾದ ಹೆಣ್ಣು ಮಕ್ಕಳಿಗೆ ಈ ಸೌಲಭ್ಯವಿತ್ತು. ಕ್ರಮೇಣ ನಗರದ ಶಾಲೆ, ಹಾಸ್ಟೆಲ್, ಪಾಸ್ ಸೌಲಭ್ಯದ ಮಕ್ಕಳನ್ನು ಹೊರತುಪಡಿಸಿ, 8 ನೇ ತರಗತಿ ಎಲ್ಲ ಮಕ್ಕಳಿಗೆ ಸೈಕಲ್ ವಿತರಣೆ ನಡೆಯಿತು.

Professor Recruitment scam ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

 ಶಾಲೆಗೆ ಟೂಲ್ ಕಿಟ್ : ಬೈಸಿಕಲ್‌ಗಳ ಜೊತೆಗೆ ಪ್ರತೀ ಶಾಲೆಗೆ ಒಂದು ಸೆಟ್ ಟೂಲ್ ಕಿಟ್ ಹಾಗೂ ಪ್ರತಿ ಬೈಸಿಕಲ್‌ಗೆ ಐದು ವರ್ಷಗಳ ವಾರಂಟಿ ಕಾರ್ಡ್ ನೀಡಿದೆ. ಸೈಕಲ್ ವಿತರಿಸಿದ ಆರು ತಿಂಗಳ ಒಳಗೆ ಕ್ಲಸ್ಟರ್ ಹಂತದಲ್ಲಿ ಬೈಸಿಕಲ್ ಸರ್ವಿಸಿಂಗ್ ಕ್ಯಾಂಪ್ ಮಾಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಿದ್ದು ಸ್ವಾಗತ. ಆದರೆ, ಜಗತ್ತಿಗೆ ಒಕ್ಕರಿಸಿದ ಕೊರೋನಾ ಸೋಂಕಿನಿಂದ ಎರಡು ವರ್ಷ ಶೈಕ್ಷಣಿಕ ಚಟವಟಿಕೆ ಕುಂಠಿತದ ಜೊತೆಗೆ ಮಕ್ಕಳು ಸೈಕಲ್ ಸೌಲಭ್ಯ ವಂಚಿತರಾಗಿದ್ದಾರೆ. ಈಗ ಸೋಂಕು ತಗ್ಗಿದ್ದು, ಶಾಲೆಗಳು ಆರಂಭವಾದರೂ, ಸರ್ಕಾರ ಮಕ್ಕಳಿಗೆ ಸೈಕಲ್ ಭಾಗ್ಯ ಕರಣಿಸಿಲ್ಲ ಎಂಬ ಆರೋಪ ಪಾಲಕರದು.

ಶಿಕ್ಷಣ ಮೊಟಕು: ಏಳನೇ ತರಗತಿ ಮುಗಿಸಿ, 8 ನೇ ತರಗತಿ ಪ್ರೌಢ ಶಿಕ್ಷಣಕ್ಕೆ ಗ್ರಾಮೀಣ ಹಾಗೂ ಗುಡ್ಡಗಾಡು ಮಕ್ಕಳು ಗ್ರಾಮ ತೊರೆದು ಏಳೆಂಟು ಕಿ.ಮೀ ಚಲಿಸಬೇಕು. ಆದರೆ, ಸರಿಯಾದ ಸಾರಿಗೆ ವ್ಯವಸ್ಥೆ ಹಾಗೂ ಸಂಪರ್ಕ ಇಲ್ಲದ ಕಾರಣ ಮಕ್ಕಳು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವ ಅನಿವಾರ್ಯತೆಯೂ ಉಂಟಾಗಿದೆ. ಇಂದಿನಿಂದ 2022_23 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಹೀಗಾಗಿ ಅಷ್ಟರೊಳಗೆ ಸರ್ಕಾರ ರಾಜ್ಯದ 8 ನೇ ತರಗತಿಗೆ ಕಾಲಿಡುವ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಮಾಡುವ ಮೂಲಕ ಶಾಲೆಗಳಿಗೆ ಮಕ್ಕಳು ಗೈರು ಉಳಿಯುವುದೇ ತಡೆಯುವುದೇ ಎಂಬುದನ್ನು ಕಾದುನೋಡಬೇಕಿದೆ. 

 ಸೈಕಲ್ ಪ್ರಾಮುಖ್ಯತೆ ಏನು? :  ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಪ್ರೌಢ ಶಿಕ್ಷಣದ ಹಂತದಲ್ಲಿ ಒಟ್ಟು ದಾಖಲಾತಿ ಪ್ರಮಾಣ ಶೇ.86.19 ರಷ್ಟಿದ್ದು, ನಿವ್ವಳ ದಾಖಲಾತಿ ಪ್ರಮಾಣ ಕೇವಲ ಶೇ.80.12., ಹಿರಿಯ ಪ್ರಾಥಮಿಕ ಶಿಕ್ಷಣದ ನಂತರ ಶಾಲೆ ತೊರೆಯುವ ಮಕ್ಕಳ ಪ್ರಮಾಣ ಶೇ.2.94 ಆದರೆ, ಪ್ರೌಢ ಶಾಲಾ ಹಂತದಲ್ಲಿ ಅದು ಶೇ.10.08 ರಷ್ಟಿದೆ. ಈ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಮಕ್ಕಳಿಗೆ ಉಚಿತ ಬೈಸಿಕಲ್ ಒದಗಿಸುವುದರ ಪ್ರಾಮುಖ್ಯತೆ ಏನು ಎಂಬುದು ಅರ್ಥವಾಗುತ್ತದೆ. 

Eastern Railway Recruitment 2022: ಬರೋಬ್ಬರಿ 1201 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಕ್ಕಳ ಶಿಕ್ಷಣದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, 2022-23 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮುನ್ನ ಅರ್ಹ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆಗೆ ಆದ್ಯತೆ ಮೇಲೆ ಕ್ರಮ ವಹಿಸಬೇಕು.  2020-21, 2020-22 ರ ಶೈಕ್ಷಣಿಕ ವರ್ಷದಲ್ಲಿ ಯೋಜನೆ ಸ್ಥಗಿತವಾಗಿರುವ ಕಾರಣ, ಆ ಹಣ ಅರ್ಹ ಮಕ್ಕಳ ಖಾತೆಗೆ ಜಮೆ ಮಾಡಬೇಕು.

Latest Videos
Follow Us:
Download App:
  • android
  • ios