Asianet Suvarna News Asianet Suvarna News

Professor Recruitment scam ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಶಿವಾಜಿನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ  ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

Professor Recruitment scam allegations HC notice to Karnataka Government gow
Author
Bengaluru, First Published May 14, 2022, 4:11 PM IST

ಬೆಂಗಳೂರು (ಮೇ.13): ಶಿವಾಜಿನಗರದಲ್ಲಿರುವ (Shivajinagar) ಸರ್ಕಾರಿ ಸ್ವಾಮ್ಯದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (Atal Bihari Vajpayee Medical College and Research Institute ) 33 ಸಹಾಯಕ ಪ್ರಾಧ್ಯಾಪಕರ ನೇಮಕಾತಿ (Assistant Professors recruitment) ಪ್ರಕ್ರಿಯೆಗೆ ಸಂಬಂಧಿಸಿದಂತೆ  ಕೇಂದ್ರೀಯ ತನಿಖಾ ಸಂಸ್ಥೆಯಿಂದ (CBI)  ಅಥವಾ ಹೊರಗಿನ ಏಜೆನ್ಸಿಯಿಂದ ತನಿಖೆ ನಡೆಸುವಂತೆ  ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕರ್ನಾಟಕ ಹೈಕೋರ್ಟ್ (Karnataka High Court) ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. 

ಮುಂದಿನ ಆದೇಶದವರೆಗೆ ಸಂಸ್ಥೆಯಲ್ಲಿ ಡಾ ಎಂ ಮೀನಾಕ್ಷಿ ಪಾರ್ಥಸಾರಥಿ (Dr M Meenakshi Parthasarathy) ಅವರ ಸೇವೆಯನ್ನು ಮುಂದುವರಿಸಲು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ರಜಾಕಾಲದ ಪೀಠವು ಮಧ್ಯಂತರ ಆದೇಶವನ್ನು ನೀಡಿದೆ.

ಈ ಹಿಂದೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ ಮೀನಾಕ್ಷಿ ಅವರನ್ನು ಮಾರ್ಚ್ 8, 2019 ರ ಆದೇಶದ ಮೂಲಕ ಅಟಲ್ ಬಿಹಾರಿ ಸಂಸ್ಥೆಗೆ ಶಾಶ್ವತವಾಗಿ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

NEET PG-22 EXAM ಮುಂದೂಡಲು ನಿರಾಕರಿಸಿದ ಸುಪ್ರೀಂ

ಆದಾಗ್ಯೂ, ಮೇ 8,2019ರಂದು ಹೊರಡಿಸಿದ್ದ ಆದೇಶವನ್ನು ಹಿಂತೆಗೆದುಕೊಳ್ಳುವುದಾಗಿ ರಾಜ್ಯ ಸರ್ಕಾರ ಮೇ 4 ಮತ್ತು 5 ರಂದು ಆದೇಶ ಹೊರಡಿಸಿತ್ತು. ಇದರಿಂದಾಗಿ ಅರ್ಜಿದಾರರು ದಿಗ್ಬ್ರಮೆ ವ್ಯಕ್ತಪಡಿಸಿದ್ದರು. 33 ಸಹಾಯಕ ಪ್ರಾಧ್ಯಾಪಕರ ನೇಮಕಾತಿ  ಪ್ರಕ್ರಿಯೆಯನ್ನು ಯಾವುದೇ ನಿರ್ಣಯ, ಸಭೆ ಅಥವಾ ಯಾವುದೇ ಶೋಕಾಸ್ ನೋಟಿಸ್ ನೀಡದೆ  ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಡಾ. ಮೀನಾಕ್ಷಿ ಅವರು ಬಹುಕೋಟಿ ನೇಮಕಾತಿ ಹಗರಣವನ್ನು ಆರೋಪಿಸಿದ್ದು, ಪ್ರತಿ ಸಹಾಯಕ ಪ್ರಾಧ್ಯಾಪಕರ ಹುದ್ದೆಯನ್ನು 50 ಲಕ್ಷದಿಂದ 70 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೋರಿದ್ದಾರೆ.

ಮೇ 19ರಂದು SSLC Result, ಶಿಕ್ಷಣ ಸಚಿವರಿಂದ ಟ್ವೀಟ್ ಸ್ಪಷ್ಟನೆ 

PUC ಫಲಿತಾಂಶ ಶೀಘ್ರವೇ ಪ್ರಕಟ: ಈಗಾಗಲೇ SSLC ಫಲಿತಾಂಶ ದಿನ ನಿಗದಿಯಾಗಿದೆ. ಮೇ 19 ರಂದು SSLC ಫಲಿತಾಂಶ ಪ್ರಕಟ ವಾಗಲಿದೆ. ಜೊತೆಗೆ ದ್ವಿತೀಯ ಪಿಯುಸಿ ಫಲಿತಾಂಶಕ್ಕೂ ಕ್ಷಣಗಣನೆ ಆರಂಭವಾಗಿದೆ.  ಕಳೆದ ವರ್ಷದಂತೆ ಈ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Result 2022) ತಡವಾಗಲ್ಲ. ಜೂನ್ ಕೊನೆಯ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬರುವುದು ಪಕ್ಕಾ ಆಗಿದೆ. ಒಂದೊಂದು ವಿಷಯ ಪರೀಕ್ಷೆ ಆಗುತ್ತಿದ್ದಂತೆ ಮೌಲ್ಯಮಾಪನ ಶುರುವಾಗುತ್ತದೆ. 

ಜೂನ್ ಕೊನೆಯ ವಾರ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬರಲಿದೆ. ಮೇ. 20 ರಿಂದ ಜೂನ್ 15 ರೊಳಗೆ ಮೌಲ್ಯಮಾಪನ ಕಂಪ್ಲೀಟ್ ಆಗಬೇಕು, ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು, ಹಾಗಾಗಿ ಆದಷ್ಟು ಬೇಗ ಫಲಿತಾಂಶ ನೀಡುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್ ರಾಮಚಂದ್ರನ್ ಈಗಾಗಲೇ ಹೇಳಿದ್ದಾರೆ.

ಹಿಜಾಬ್ ಗದ್ದಲ, ಪರೀಕ್ಷೆ ಗೈರು ಸೇರಿದಂತೆ ಹಲವು ಕಾರಣಗಳಿಂದ  ದ್ವಿತೀಯ ಪಿಯುಸಿ ಪರೀಕ್ಷೆ ಭಾರಿ ಸದ್ದು ಮಾಡಿತ್ತು. ಇದೀಗ ಇಡೀ ರಾಜ್ಯವೇ ಪರೀಕ್ಷಾ ಫಲಿತಾಂಶದ ಮೇಲೆ ಕಣ್ಣಿಟ್ಟಿದೆ. ಕಳೆದ ತಿಂಗಳು ಎಪ್ರಿಲ್ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿತ್ತು. ಮೇ.18 ರಂದು ಪರೀಕ್ಷೆ ಮುಗಿಯಲಿದೆ. ಒಂದೊಂದು ವಿಷಯ ಪರೀಕ್ಷೆ ಆಗುತ್ತಿದ್ದಂತೆ ಮೌಲ್ಯಮಾಪನ ಜೂನ್  ನಲ್ಲಿ ರಿಸಲ್ಟ್ ಪ್ರಕಟವಾಗಲಿದೆ. ಈ ಬಾರಿ ಪರೀಕ್ಷೆಗೆ ಗೈರಾದವರ ಸಂಖ್ಯೆ ಕೂಡ ಹೆಚ್ಚಿದೆ.

Follow Us:
Download App:
  • android
  • ios