Asianet Suvarna News Asianet Suvarna News

6ರಿಂದ 12ನೇ ಕ್ಲಾಸ್‌ ಪೂರ್ಣ ಪ್ರಮಾಣದಲ್ಲಿ ಆರಂಭ

  •  ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರದಿದ್ದ ಶಾಲಾ-ಕಾಲೇಜುಗಳು ಸೋಮವಾರದಿಂದ ಶೇ.100ರಷ್ಟುಹಾಜರಾತಿಯೊಂದಿಗೆ ಕಾರ್ಯಾರಂಭ
  •  ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ
6th to 12th classes Begins in Karnataka snr
Author
Bengaluru, First Published Oct 5, 2021, 7:47 AM IST

 ಬೆಂಗಳೂರು (ಅ.05):  ಕೊರೋನಾ (Corona) ಆತಂಕದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರದಿದ್ದ ಶಾಲಾ-ಕಾಲೇಜುಗಳು (school Colleges) ಸೋಮವಾರದಿಂದ ಶೇ.100ರಷ್ಟುಹಾಜರಾತಿಯೊಂದಿಗೆ ಕಾರ್ಯಾರಂಭ ಮಾಡಿವೆ. ಆದರೂ ಹಾಜರಾತಿ ಪ್ರಮಾಣ ಅಷ್ಟೇನೂ ಹೆಚ್ಚಳವಾಗಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ನಡೆಸಬೇಕು ಎಂದು ಶಿಕ್ಷಣ ಇಲಾಖೆ (Education Department) ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. 

ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆ-ಕಾಲೇಜುಗಳಲ್ಲಿ ಸೋಮವಾರದಿಂದ 6ರಿಂದ 12ನೇ ತರಗತಿ ಭೌತಿಕವಾಗಿ ಪೂರ್ಣ ಪ್ರಮಾಣದಲ್ಲಿ ಆರಂಭವಾದವು. ಆ.23ರಿಂದ 9ರಿಂದ 12ನೇ ತರಗತಿ ಮತ್ತು ಸೆ.6ರಿಂದ 6ರಿಂದ 8ನೇ ತರಗತಿ ಭೌತಿಕವಾಗಿ ನಡೆಯುತ್ತಿದ್ದವು. ಶಾಲೆಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನದವರೆಗೆ ಮಾತ್ರ ನಾಲ್ಕೈದು ಪೀರಿಯಡ್‌ ನಡೆಯುತ್ತಿದ್ದವು. ಬಳಿಕ ತಂಡಗಳನ್ನು ಮಾಡಿಕೊಂಡು ಮಧ್ಯಾಹ್ನದ ನಂತರ ತರಗತಿ ನಡೆಸುವಂತೆ ಸೂಚಿಸಲಾಗಿತ್ತು.

ದಸರಾ ರಜೆ ಬಳಿಕ ಶಾಲೆಗಳಲ್ಲಿ ಬಿಸಿಯೂಟ

ಪ್ರಥಮ ಮತ್ತು ದ್ವಿತೀಯ ಪಿಯುಸಿ (PUC) ವಿದ್ಯಾರ್ಥಿಗಳಿಗೆ ಶೇ.50 ರಷ್ಟುಹಾಜರಾತಿಯೊಂದಿಗೆ (ಅರ್ಧದಷ್ಟುಮಕ್ಕಳಿಗೆ) ಸೋಮವಾರದಿಂದ ಬುಧವಾರದವರೆಗೆ ಮತ್ತು ಇನ್ನುಳಿದ ವಿದ್ಯಾರ್ಥಿಗಳಿಗೆ ಗುರುವಾರದಿಂದ ಶನಿವಾರದವರೆಗೆ ತರಗತಿ ನಡೆಯುತ್ತಿದ್ದವು. ಸಮಯಾಭಾವದ ಹಿನ್ನೆಲೆಯಲ್ಲಿ ಹೆಚ್ಚು ಪೀರಿಯಡ್‌ಗಳು ನಡೆಯುತ್ತಿರಲಿಲ್ಲ. ಆದರೆ ಇದೀಗ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ಶೇ.100ರಷ್ಟುಹಾಜರಾತಿಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಬೆಳಗಿನಿಂದ ಸಂಜೆಯವರೆಗೂ 8 ಪೀರಿಯಡ್‌ ನಡೆಯುತ್ತಿವೆ.

ಅಮೆಜಾನ್‌ನಿಂದ ಲಕ್ಷ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ

ಕೊರೋನಾ (Corona) ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಸಾರ್ವಜನಿಕರು, ತಜ್ಞರಿಂದ ವ್ಯಕ್ತವಾಗಿದ್ದವು. ಆದ್ದರಿಂದ ಶಿಕ್ಷಣ ಇಲಾಖೆಯು (Education Department) ಹಂತಹಂತವಾಗಿ ತರಗತಿಗಳನ್ನು ಆರಂಭಿಸಿತ್ತು. ಇದೀಗ ಕೊರೋನಾ ಭೀತಿ ಇಲ್ಲದಿರುವುದರಿಂದ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ. ಆದರೆ 1ರಿಂದ 5 ನೇ ತರಗತಿ ಭೌತಿಕವಾಗಿ ಆರಂಭಿಸುವ ಬಗ್ಗೆ ಸ್ಪಷ್ಟನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ದಸರಾ ಹಬ್ಬದ ನಂತರವಷ್ಟೇ ಪ್ರಾಥಮಿಕ ಶಾಲೆ ಆರಂಭವಾಗಲಿವೆ.

ಪೂರ್ಣಪಾಠ 

ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೋಮವಾರದಿಂದ (ಅ.4) 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪೂರ್ಣಪ್ರಮಾಣದ ಭೌತಿಕ ತರಗತಿಗಳು ನಡೆಯಲಿವೆ.  ಈಗಾಗಲೇ ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದರಿಂದ ಎಲ್ಲ ಶಾಲೆ, ಕಾಲೇಜುಗಳಲ್ಲೂ ಪೂರ್ಣ ಪ್ರಮಾಣದಲ್ಲಿ ತರಗತಿ ಬೋಧನೆಗಳನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಇದುವರೆಗೆ ಪದವಿ ಕಾಲೇಜುಗಳಲ್ಲಿ ವಾರದ ಮೂರು ದಿನ ಶೇ.50ರಷ್ಟುಮಕ್ಕಳು ಮತ್ತು ಉಳಿದ ಮಕ್ಕಳಿಗೆ ನಂತರದ ಮೂರು ದಿನ ತರಗತಿ ನಡೆಸಲು ಶಿಕ್ಷಣ ಇಲಾಖೆ ಅವಕಾಶ ನೀಡಿತ್ತು. ಸೋಮವಾರದಿಂದ ಶೇ.100ರಷ್ಟುಪ್ರಮಾಣದ ಹಾಜರಾತಿಯೊಂದಿಗೆ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.

Follow Us:
Download App:
  • android
  • ios