Asianet Suvarna News Asianet Suvarna News

ಅಮೆಜಾನ್‌ನಿಂದ ಲಕ್ಷ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ

ದೈತ್ಯ ಇ-ಕಾಮರ್ಸ್(E-Commerce) ತಾಣವಾದ ಅಮೆಜಾನ್(Amazon) ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿದೆ. ಕಂಪನಿಯು ತನ್ನ ಫ್ಯೂಚರ್ ಎಂಜಿನಿಯರಿಂಗ್(Future Engineering) ಉಪಕ್ರಮದಡಿ ಭಾರತದ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ(Computer Science Education) ವನ್ನು ನೀಡಲಿದೆ. ದೇಶದ ಏಳು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಈ ಪ್ರಯೋಜನ ನೀಡಲಿದೆ.

Amazon will offer Computer Science Education one lakh students
Author
Bengaluru, First Published Oct 1, 2021, 6:53 PM IST
  • Facebook
  • Twitter
  • Whatsapp

ಅಮೆಜಾನ್(Amazon).. ದೊಡ್ಡ ಆನ್ಲೈನ್ ಶಾಪಿಂಗ್ ಮಾರುಕಟ್ಟೆ. ಅಮೆಜಾನ್ನಲ್ಲಿ ಶಾಂಪಿಂಗ್ ಮಾಡದವರಿಲ್ಲ. ಯಾರಿಗೇ ಏನೇ ವಸ್ತು ಬೇಕಂದ್ರೂ ಅಲ್ಲಿ ಸಿಕ್ಕೇ ಸಿಗುತ್ತೆ. ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ಗಳು, ಗ್ರಾಸರಿ - ಹೀಗೆ ಎಲ್ಲ ರೀತಿಯ ವಸ್ತುಗಳು ಅಮೆಜಾನ್ನಲ್ಲಿ ಸಿಗುತ್ತದೆ. ವಿಶ್ವದ   ಅತಿದೊಡ್ಡ ಅಂತರ್ಜಾಲ ಮಾರುಕಟ್ಟೆಯಾಗಿರೋ ಅಮೆಜಾನ್ ಕಂಪನಿಯೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. 

ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ ಒದಗಿಸುವ ಉತ್ತಮ ಕಾರ್ಯಕ್ಕೆ ಕೈಹಾಕಿದೆ. ಹೌದು.. ಅಮೆಜಾನ್, ಬರೋಬ್ಬರೀ 1 ಲಕ್ಷ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್  ಶಿಕ್ಷಣ ನೀಡಲು ಮುಂದಾಗಿದೆ. ಅಮೆಜಾನ್ ಫ್ಯೂಚರ್ ಇಂಜಿನಿಯರ್(Amazon Future Engineer-AFE) ಯೋಜನೆಯಡಿ  ಭಾರತದಲ್ಲಿ ಕಂಪ್ಯೂಟರ್ ಸೈನ್ಸ್  ಶಿಕ್ಷಣ(Computer Science Education) ನೀಡಲಿದೆ.  

ದೇಶದ 7 ರಾಜ್ಯಗಳಲ್ಲಿ ಒಟ್ಟು 900 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನ ಕಲಿಕೆಗೆ ಅವಕಾಶ ಕಲ್ಪಿಸುವುದು ಅಮೆಜಾನ್‌ನ ಗುರಿಯಾಗಿದೆ. ಇದು ಶಿಕ್ಷಣ ಹಾಗೂ ಕೇಂದ್ರಿತ ಲಾಭರಹಿತ ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸಲು ಅನುಕೂಲವಾಗಲಿದೆ. ಇದ್ರಿಂದಾಗಿ ಕರ್ನಾಟಕ(Karnataka), ದೆಹಲಿ(Delhi), ಹರಿಯಾಣ(Haryana), ಮಹಾರಾಷ್ಟ್ರ(Maharashtra), ತಮಿಳುನಾಡು(Tamil Nadu), ಒಡಿಶಾ(Odisha) ಮತ್ತು ತೆಲಂಗಾಣ(Telangana)ದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಕಂಪ್ಯೂಟರ್ ಸೈನ್ಸ್ ಶಿಕ್ಷಣ ಸಿಗಲಿದೆ. 

ಕೋವಿಡ್ ಎಫೆಕ್ಟ್: ಕಾಲೇಜು ಬಿಟ್ಟವರು ಎಷ್ಟು?

ಈ ಯೋಜನೆಯಡಿ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನ ಕೋರ್ಸ್‌ಗಳನ್ನು ಕಲಿಸಲು ಮಾರ್ಗದರ್ಶಕರನ್ನ ನೇಮಿಸಲಾಗುತ್ತದೆ. ಜೊತೆಗೆ ಹಲವು ಶೈಕ್ಷಣಿಕ ಸಾಮಗ್ರಿಗಳು, ರೋಬೊಟಿಕ್ಸ್,  ವಿದ್ಯಾರ್ಥಿ ವೇತನಗಳು, ಇಂಟರ್ನ್‌ಶಿಪ್‌ಗಳು ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಶಿಕ್ಷಕರಿಗೆ ಸಂಪನ್ಮೂಲಗಳನ್ನು ಒದಗಿಸೋದಾಗಿ ಅಮೆಜಾನ್ ತಿಳಿಸಿದೆ. 

ಫ್ಯೂಚರ್ ಇಂಜಿನಿಯರ್ ಮೂಲಕ ಅಮೆಜಾನ್(Amazon) ಕಂಪನಿಯು, ಲಾಭರಹಿತವಾಗಿ ಕಂಪ್ಯೂಟರ್ ವಿಜ್ಞಾನ ಶಿಕ್ಷಣಕ್ಕೆ ಮೀಸಲಾಗಿರುವ ಕೋಡ್ ಡಾಟ್ ಆರ್ಗ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಮಕ್ಕಳು ಮತ್ತು ಯುವ ವಯಸ್ಕರಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣದ ಅವಕಾಶಗಳನ್ನು  ಒದಗಿಸಲಿದೆ. ಈ ಕಾರ್ಯಕ್ರಮವು ಪ್ರಾಥಮಿಕವಾಗಿ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಕೇಂದ್ರೀಕೃತವಾಗಿದೆ ಎಂದು ಆಮೆಜಾನ್ ಹೇಳಿದೆ.

ಭಾರತದಲ್ಲಿ ವಾರ್ಷಿಕವಾಗಿ ಒಂದು ಮಿಲಿಯನ್ ವಿದ್ಯಾರ್ಥಿಗಳು ಸಿಎಸ್ ಇಂಜಿನಿಯರಿಂಗ್(Engineering) ಕೋರ್ಸ್‌ಗಳಿಗೆ ದಾಖಲಾಗುತ್ತಾರೆ. ಕಡಿಮೆ ಪ್ರಾತಿನಿಧ್ಯ ಹೊಂದಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಸಂಬಂಧಿತ ವೃತ್ತಿ ಅವಕಾಶಗಳು ಸಿಗುವುದು ಬಹಳ ಕಡಿಮೆ. ಅಲ್ಲದೇ ಅವರ ಸಮುದಾಯದಲ್ಲಿ ಸ್ಫೂರ್ತಿದಾಯಕ ರೋಲ್ ಮಾಡೆಲ್‌ಗಳ ಕೊರತೆ ಹಾಗೂ ಆಸಕ್ತಿದಾಯಕ ಪಠ್ಯಕ್ರಮವನ್ನು ಕಲಿಯಲು ಭಾಷೆಯ ಅಡೆತಡೆಗಳು ಇರುತ್ತವೆ. ಇನ್ನು ಸರ್ಕಾರಿ ಶಾಲೆಗಳು ಸಿಎಸ್ ಶಿಕ್ಷಣವನ್ನು ನೀಡಲು ಸೀಮಿತ ಸಂಪನ್ಮೂಲಗಳನ್ನು ಹೊಂದಿರುತ್ತವೆ. 

ಸ್ಕಾಲರ್‌ಶಿಪ್ ಆರಂಭಿಸಿದ ಸೋನು ಸೂದ್, ಯಾರೆಲ್ಲ ಅರ್ಹರು ಚೆಕ್ ಮಾಡ್ಕೊಳ್ಳಿ

ಅಮೆಜಾನ್ ಫ್ಯೂಚರ್ ಇಂಜಿನಿಯರ್, ಭಾರತೀಯ ಶಿಕ್ಷಕ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಸಂದರ್ಭೋಚಿತವಾಗಿದೆ ಎಂದು ಅಮೆಜಾನ್ ಕಂಪನಿ ಹೇಳಿದೆ. ಅಮೆಜಾನ್ ಒದಗಿಸುವ ಕಂಪ್ಯೂಟರ್ ಶಿಕ್ಷಣವು ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ. ಒಂದು ವರ್ಷದೊಳಗೆ ಏಳು ರಾಜ್ಯಗಳ 900 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ದೇಶದ 1 ಲಕ್ಷ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಒದಗಿಸಲಿದೆ. 

ಅಮೆಜಾನ್ ಫ್ಯೂಚರ್ ಎಂಜಿನಿಯರ್ ಯೋಜನೆಯನ್ನು ಭಾರತಕ್ಕೆ ತರಲು ನಾವು ಉತ್ಸುಕರಾಗಿದ್ದೇವೆ. ಏಕೆಂದರೆ ಎಲ್ಲಾ ಯುವಜನರು ತಮ್ಮ ಹಿನ್ನೆಲೆಗಳನ್ನು ಲೆಕ್ಕಿಸದೆ, ಗುಣಮಟ್ಟದ ಕಂಪ್ಯೂಟರ್ ವಿಜ್ಞಾನ ಶಿಕ್ಷಣವನ್ನು ಪಡೆಯಬೇಕು ಎಂದು ನಾವು ಬಯಸುತ್ತೇವೆ ಎಂದು ಅಮೆಜಾನ್ ಇಂಡಿಯಾದ ಜಾಗತಿಕ ಹಿರಿಯ ವಿಪಿ ಮತ್ತು ದೇಶದ ಮುಖ್ಯಸ್ಥ ಅಮಿತ್ ಅಗರ್ವಾಲ್(Amit Agarwal) ತಿಳಿಸಿದ್ದಾರೆ.  
 

Amazon will offer Computer Science Education one lakh students

ಭಾರತದಲ್ಲಿ ಇದುವರೆಗೆ 6.5 ಬಿಲಿಯನ್ ಡಾಲರ್ ಗೂ ಹೆಚ್ಚು ಹೂಡಿಕೆ ಮಾಡಿರುವ ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್, ಕೆಲವು ವರ್ಷಗಳಿಂದ ದೇಶದಲ್ಲಿ ಶಿಕ್ಷಣ ವಲಯದಲ್ಲಿ ನೆಲೆ ಕಂಡುಕೊಳ್ಳಲು ಅನ್ವೇಷಣೆ ನಡೆಸುತ್ತಿತ್ತು. ಎರಡು ವರ್ಷಗಳ ಹಿಂದೆ, ಇದು ಭಾರತದ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಜೆಇಇ ರೆಡಿ(JEE Ready) ಎಂಬ ಆ್ಯಪ್ ಅನ್ನು ಆರಂಭಿಸಿತು. ಅಂದಿನಿಂದ ಅಮೆಜಾನ್ ಅಕಾಡೆಮಿ(Amazon Academy) ಎಂದು ಮರುನಾಮಕರಣಗೊಂಡ ಜೆಇಇ ರೆಡಿ, ಉಚಿತ ಆನ್ ಲೈನ್(Online) ತರಗತಿಗಳನ್ನು ನೀಡುತ್ತಾ ಬಂದಿದೆ. ಅಣಕು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುತ್ತದೆ. ಇದೀಗ ಲಕ್ಷಾಂತರ ಬಡ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಕಲಿಕೆ ಒದಗಿಸಲು ಮುಂದಾಗಿರೋದು ನಿಜಕ್ಕೂ ಶ್ಲಾಘನೀಯ.

ಎಸ್‌ಬಿಐ ಎಸ್‌ಸಿಒ ನೇಮಕಾತಿ: 606 ಹುದ್ದೆಗಳಿಗೆ ಅರ್ಜಿ ಆಹ್ವಾನ

Follow Us:
Download App:
  • android
  • ios