ಕರ್ನಾಟಕದಲ್ಲಿ 52 ಸಾವಿರ ಸರ್ಕಾರಿ ಶಾಲೆ ಪುನಾರಂಭ
ಸುಮಾರು ಎರಡು ತಿಂಗಳ ಬೇಸರಿಗೆ ರಜೆ ಮುಗಿಸಿ ಶಾಲೆಗೆ ಮರಳಿದ ಚಿಣ್ಣರು ತಮ್ಮ ನೆಚ್ಚಿನ ಗುರುಗಳನ್ನು ಕಂಡು ಪುಳಕಿತರಾದರು. ಮಕ್ಕಳ ಆರೋಗ್ಯ, ರಜೆಯ ದಿನಗಳಲ್ಲಿ ಕೈಗೊಂಡ ಚಟುವಟಿಕೆಗಳ ಬಗ್ಗೆ ಶಿಕ್ಷಕರು ಮಕ್ಕಳನ್ನು ವಿಚಾರಿಸಿ ಮುಂದಿನ ತರಗತಿಯಲ್ಲಿ ಈ ವರ್ಷ ಇನ್ನಷ್ಟು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ಮಾರ್ಗದರ್ಶನ ನೀಡುತ್ತಿದ್ದುದು ಕಂಡುಬಂತು.
ಬೆಂಗಳೂರು(ಜೂ.01): ರಾಜ್ಯಾದ್ಯಂತ ಬುಧವಾರದಿಂದ 52 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಪುನಾರಂಭಗೊಂಡಿದ್ದು, ಇಲಾಖೆಯ ಸೂಚನೆಯಂತೆ ಮೊದಲ ದಿನ ಎಲ್ಲೆಡೆ ‘ಶಾಲಾ ಪ್ರಾರಂಭೋತ್ಸವ’ ನಡೆಸಿ ತಳಿರು ತೋರಣ, ವರ್ಣರಂಚಿತ ಕಾಗದಗಳಿಂದ ಶಾಲೆಯನ್ನು ಸಿಂಗರಿಸಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚಿ ಬರಮಾಡಿ ಕೊಂಡಿದ್ದಾರೆ.
ಸುಮಾರು ಎರಡು ತಿಂಗಳ ಬೇಸರಿಗೆ ರಜೆ ಮುಗಿಸಿ ಶಾಲೆಗೆ ಮರಳಿದ ಚಿಣ್ಣರು ತಮ್ಮ ನೆಚ್ಚಿನ ಗುರುಗಳನ್ನು ಕಂಡು ಪುಳಕಿತರಾದರು. ಮಕ್ಕಳ ಆರೋಗ್ಯ, ರಜೆಯ ದಿನಗಳಲ್ಲಿ ಕೈಗೊಂಡ ಚಟುವಟಿಕೆಗಳ ಬಗ್ಗೆ ಶಿಕ್ಷಕರು ಮಕ್ಕಳನ್ನು ವಿಚಾರಿಸಿ ಮುಂದಿನ ತರಗತಿಯಲ್ಲಿ ಈ ವರ್ಷ ಇನ್ನಷ್ಟು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ಮಾರ್ಗದರ್ಶನ ನೀಡುತ್ತಿದ್ದುದು ಕಂಡುಬಂತು. ಮಧ್ಯಾಹ್ನದ ಬಿಸಿಯೂಟದಲ್ಲಿ ಕೆಲ ಶಾಲೆಗಳಲ್ಲಿ ಪಾಯಸ, ಕೆಲವೆಡೆ ಕೇಸರಿ ಭಾತ್ ಹೀಗೆ ಒಂದೊಂದು ಸಿಹಿ ಉಪಹಾರ ನೀಡಿ ಬಡಿಸಲಾಯಿತು.
ಮಧ್ಯಾಹ್ನದ ಬಿಸಿಯೂಟದಲ್ಲಿ ಪತ್ತೆಯಾದ ಹಾವು, 12ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ!
ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ, ಗೊರಗುಂಟೆ ಪಾಳ್ಯ, ಯಶವಂತಪುರ, ರಾಜರಾಜೇಶ್ವರಿ ನಗರ, ಮೈಸೂರು ರಸ್ತೆಯ ಹಳೇ ಗುಡ್ಡದಹಳ್ಳಿ ಸೇರಿದಂತೆ ನಗರದಾದ್ಯಂತ ಇರುವ ನೂರಾರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ತಿಂಗಳುಗಳ ಬಳಿಕ ಚಿಣ್ಣರ ಕಲರವ ಎದ್ದು ಕಾಣುತ್ತಿತ್ತು. ಮೊದಲ ದಿನ ಮಕ್ಕಳನ್ನು ಬರಮಾಡಿಕೊಳ್ಳಲು ಶಿಕ್ಷಕರು ಶಾಲೆಯ ಗೇಟಿನ ಬಳಿಯೇ ನಿಂತು ಹೂವು, ಚಾಕೊಲೆಟ್ ನೀಡಿದ್ದು ಕಂಡುಬಂತು. ಕೆಲವೆಡೆ ಮಕ್ಕಳನ್ನು ಶಾಲೆಗೆ ಬಿಡಲು ಬಂದ ಪೋಷಕರಿಗೂ ಶಿಕ್ಷಕರು ಹಸ್ತಲಾಘವ ಮಾಡಿ ಕುಷಲೋಪರಿ ವಿಚಾರಿಸಿದ್ದು ವಿಶೇಷವಾಗಿತ್ತು.
ಸಚಿವರಿಂದ ಪುಸ್ತಕ ವಿತರಣೆ:
2023-24ನೇ ಸಾಲಿನ ಪಠ್ಯಪುಸ್ತಕಗಳು ಈಗಾಗಲೇ ಶಾಲೆಗಳಿಗೆ ಶೇ.95ರಷ್ಟುಪ್ರಮಾಣದಲ್ಲಿ ಸರಬರಾಜಾಗಿದ್ದು ಪುಸ್ತಕ, ಸಮವಸ್ತ್ರ ತಲುಪಿರುವ ಶಾಲೆಗಳಲ್ಲಿ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಕರೆಸಿ ಮಕ್ಕಳಿಗೆ ಅವುಗಳನ್ನು ವಿತರಿಸುವ ಕೆಲಸ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲೆಯ ದೇವನಹಳ್ಳಿ ತಾಲ್ಲೂಕಿನ ಅರದೇಶನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವದಲ್ಲಿ ಖುದ್ದು ಭಾಗಿಯಾಗಿದ್ದ ನೂತನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಕ್ಕಳಿಗೆ ಹೂ, ಸಹಿ ಹಂಚಿ ಬರಮಾಡಿಕೊಂಡರು. ನಂತರ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು.