ಕರ್ನಾಟಕದ ಶೇ.40ರಷ್ಟು ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲ..!

ರಾಜ್ಯದಲ್ಲಿ 66361 ಅಂಗನವಾಡಿಗಳಿದ್ದು, 20 ಸಾವಿರಕ್ಕೂ ಹೆಚ್ಚು ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸದ್ಯ 11500ಕ್ಕೂ ಅಧಿಕ ಅಂಗನವಾಡಿಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ. ನಗರ ಪ್ರದೇಶದ 6301, ಗ್ರಾಮೀಣ ಭಾಗದ 4337 ಸೇರಿ ಒಟ್ಟು 10638 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಆದರೆ, ಐದಾರು ತಿಂಗಳಿಂದ ಬಾಡಿಗೆ ಭರಿಸದ ಕಾರಣ ಕಟ್ಟಡ ಮಾಲೀಕರು ಕಟ್ಟಡ ತೊರೆಯಲು ಒತ್ತಡ ಹೇರುತ್ತಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಒಂದು ವರ್ಷದಿಂದಲೂ ಬಾಡಿಗೆಯನ್ನೇ ಪಾವತಿಸಿಲ್ಲ.

40 Percent of Anganwadis in Karnataka do not have Own Building grg

ಸಂತೋಷ ಕವಚೂರು

ಬೆಳಗಾವಿ(ಜೂ.04):  ಚಿಣ್ಣರ ಪೋಷಣೆಗಾಗಿ ಅನುಷ್ಠಾನಕ್ಕೆ ಬಂದ ಮಹತ್ವದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಸನಿಹದಲ್ಲಿದೆ. ಹಾಗಿದ್ದರೂ ರಾಜ್ಯದಲ್ಲಿ ಅದೆಷ್ಟೋ ಕಡೆ ಸ್ವಂತ ಕಟ್ಟಡ ನಿರ್ಮಾಣ ಕನಸಾಗೇ ಉಳಿದಿದೆ. ಶೇ.40ರಷ್ಟು ಕೇಂದ್ರಗಳು ಸ್ವಂತ ಸೂರು-ನೆಲೆಯಿಂದ ಹೊರಗುಳಿದಿವೆ.

ರಾಜ್ಯದಲ್ಲಿ 66361 ಅಂಗನವಾಡಿಗಳಿದ್ದು, 20 ಸಾವಿರಕ್ಕೂ ಹೆಚ್ಚು ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸದ್ಯ 11500ಕ್ಕೂ ಅಧಿಕ ಅಂಗನವಾಡಿಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ. ನಗರ ಪ್ರದೇಶದ 6301, ಗ್ರಾಮೀಣ ಭಾಗದ 4337 ಸೇರಿ ಒಟ್ಟು 10638 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಆದರೆ, ಐದಾರು ತಿಂಗಳಿಂದ ಬಾಡಿಗೆ ಭರಿಸದ ಕಾರಣ ಕಟ್ಟಡ ಮಾಲೀಕರು ಕಟ್ಟಡ ತೊರೆಯಲು ಒತ್ತಡ ಹೇರುತ್ತಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಒಂದು ವರ್ಷದಿಂದಲೂ ಬಾಡಿಗೆಯನ್ನೇ ಪಾವತಿಸಿಲ್ಲ.

ಬಿದಿರಿನ ಜೋಪಡಿಯೇ ಹಸುಗೂಸುಗಳ ಅಂಗನವಾಡಿ, ಅಪಾಯಕಾರಿ ಕಾಡುಪ್ರಾಣಿಗಳಿದ್ದರೂ ಸರಕಾರದ ನಿರ್ಲಕ್ಷ್ಯ!

ರಾಜ್ಯದ 66361 ಅಂಗನವಾಡಿಗಳ ಪೈಕಿ 44295 ಸ್ವಂತ ಕಟ್ಟಡದಲ್ಲಿವೆ. 1381 ಕೇಂದ್ರಗಳ ಕಟ್ಟಡ ನಿರ್ಮಾಣ ಹಂತದಲ್ಲಿವೆ. ಉಳಿದವೆಲ್ಲ ಬೇರೆ ಕಟ್ಟಡಗಳ ನೆರಳಿನಲ್ಲಿವೆಯಾದರೂ ಅತಂತ್ರ ಪರಿಸ್ಥಿತಿ ಎದುರಿಸುತ್ತಿವೆ. 4296 ಕೇಂದ್ರಗಳು ಶಾಲಾ ಕಟ್ಟಡದಲ್ಲಿ, 2419 ವಿವಿಧ ಸಮುದಾಯದ ಭವನ, 1125 ಪಂಚಾಯತ ಕಟ್ಟಡ, 73 ಯುವಕ ಮಂಡಳಿ, 49 ಮಹಿಳಾ ಮಂಡಳಿ ಕಟ್ಟಡಗಳಲ್ಲಿದ್ದು, 879 ತಾತ್ಕಾಲಿಕ ವ್ಯವಸ್ಥೆಯಲ್ಲಿವೆ. ಕೆಲವರು ಮಕ್ಕಳ ಸೇವೆ ಎಂದು ಮೃದು ಧೋರಣೆ ತೋರಿದರೆ, ಬಾಡಿಗೆಯಲ್ಲೇ ಉಪಜೀವನ ನಡೆಸುತ್ತಿರುವ ಕಟ್ಟಡ ಮಾಲೀಕರು ಅಸಹಾಯಕರಾಗಿದ್ದಾರೆ.

ಹಣ ನೀಡದ ಸರ್ಕಾರ:

ಸರ್ಕಾರ, ನಗರ ಪ್ರದೇಶದ ಅಂಗನವಾಡಿ ಕಟ್ಟಡಗಳಿಗೆ .4500 ಮತ್ತು ಗ್ರಾಮೀಣ ಕೇಂದ್ರದ ಕಟ್ಟಡಗಳಿಗೆ .1500 ಮಾತ್ರ ಮಾಸಿಕ ಬಾಡಿಗೆ ನೀಡುತ್ತಿದ್ದು, ಸಹಸ್ರಾರು ಕಟ್ಟಡಗಳ ಬಾಡಿಗೆ ವಂತಿಗೆ ಕನಿಷ್ಠ .21 ಕೋಟಿ ಬಾಕಿ ಮಾಡಿಕೊಂಡಿದೆ. ಈ ಮಧ್ಯೆ ನಗರದಲ್ಲಿ .10000, ಗ್ರಾಮೀಣದಲ್ಲಿ ಕನಿಷ್ಠ . 4000 ಬಾಡಿಗೆ ಹೆಚ್ಚಿಸಲು ಒತ್ತಡ ಸಹ ಹಾಕುತ್ತಿದ್ದಾರೆ ಮಾಲೀಕರು.

ಕಟ್ಟಡ-ನಿವೇಶನ ಕೊರತೆ ಎಲ್ಲೆಷ್ಟು?:

44295 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, 17500ಕ್ಕೂ ಅಧಿಕ ಸ್ವಂತ ಕಟ್ಟಡದಿಂದ ವಂಚಿತವಾಗಿವೆ. 3499 ಕೇಂದ್ರಗಳು ಸ್ವಂತ ನಿವೇಶನ ಕಂಡಿದ್ದರೂ ಕಟ್ಟಡ ಭಾಗ್ಯ ಕೂಡಿ ಬಂದಿಲ್ಲ. 14128 ಕೇಂದ್ರಗಳಿಗೆ ಸ್ವಂತ ಕಟ್ಟಡ ಮತ್ತು ನಿವೇಶನ ಎರಡೂ ಇಲ್ಲದಾಗಿದೆ. ಬೆಂಗಳೂರು (5924) ಮತ್ತು ಬೆಳಗಾವಿ ವಿಭಾಗದಲ್ಲಿ (5351) ಹೆಚ್ಚು ಅಂಗನವಾಡಿಗಳು ಕಟ್ಟಡ ಕೊರತೆ ಎದುರಿಸುತ್ತಿವೆ. ನಂತರದ ಸ್ಥಾನದಲ್ಲಿ ಕಲ್ಬುರ್ಗಿ (3335), ಮೈಸೂರು (2674) ವಿಭಾಗವಿದೆ.

ಬೆಂಗಳೂರು-ಬೆಳಗಾವಿಯಲ್ಲೇ ಅಧಿಕ:

ಅತಿ ಹೆಚ್ಚು ಜನಸಂಖ್ಯೆ ಮತ್ತು ಆರ್ಥಿಕವಾಗಿರುವ ಬೆಂಗಳೂರು ವಿಭಾಗದಲ್ಲೇ ಅತ್ಯಧಿಕ 20036 ಅಂಗನವಾಡಿಗಳಿದ್ದು, ಕಟ್ಟಡ-ನಿವೇಶನ ಕೊರತೆ ಇಲ್ಲೇ ಅಧಿಕವಾಗಿದೆ. 4517 ಕೇಂದ್ರಗಳಿಗೆ ಕಟ್ಟಡ-ನಿವೇಶನ ಎರಡೂ ಇಲ್ಲದಾಗಿದೆ. ಬೆಳಗಾವಿ ವಿಭಾಗದಲ್ಲಿ 17165 ಅಂಗನವಾಡಿಗಳಿದ್ದು, 4563 ಕೇಂದ್ರಗಳು ಈ ಕೊರತೆಯಲ್ಲಿವೆ.

ಐದು ದಶಕವಾದರೂ ಇಲ್ಲ ಸೌಲಭ್ಯ!

ರಾಜ್ಯದಲ್ಲಿ 1975ರಲ್ಲಿ ಜಾರಿಯಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಈಗ ಪ್ರತಿ ಜಿಲ್ಲೆಗೂ ಪಸರಿಸಿದೆ. ಜತೆಗೆ ನಬಾರ್ಡ್‌ ಸಹಯೋಗ, ಕೇಂದ್ರದ ಉದ್ಯೋಗ ಖಾತ್ರಿ ನೆರವಿದ್ದರೂ ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾತ್ರ ಆಮೆ ನಡಿಗೆ ಪಡೆದಿದೆ.

ಕಳೆದ ಮೂರು ವರ್ಷಗಳಲ್ಲಿ ವಿವಿಧ ಯೋಜನೆಗಳಡಿ 1381 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಇನ್ನೂ ನಿರ್ಮಾಣ ಹಂತದಲ್ಲೇ ಇವೆ. 2023-24ನೇ ಸಾಲಿನಲ್ಲಿ 791 ಕಟ್ಟಡಗಳ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಇದಕ್ಕಾಗಿ ವಿವಿಧ ಜಿಲ್ಲೆಗಳಿಗೆ .115 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಐಸಿಡಿಎಸ್‌ಗೆ ಅರ್ಧ ಶತಮಾನ ಗತಿಸುತ್ತಿದ್ದರೂ ಸ್ವಂತ ಕಟ್ಟಡ, ಅಡುಗೆ ಕೋಣೆ, ಶೌಚಗೃಹ, ವಿದ್ಯುತ್‌, ಕುಡಿಯುವ ನೀರಿನಂತಹ ಮೂಲ ಸೌಕರ್ಯ ಕೊರತೆ ಕಾಡುತ್ತಿದೆ.

ನಬಾರ್ಡ್‌ ಅಂಗನವಾಡಿಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚಿನ ನೆರವು ನೀಡುತ್ತಿದೆ. ತಲಾ .10 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಬಾರ್ಡ್‌ .5 ಲಕ್ಷ ಭರಿಸಲಿದೆ. ಉಳಿದ ಐದು ಲಕ್ಷವನ್ನು ಸರ್ಕಾರ ಭರಿಸಬೇಕು. ಕೇಂದ್ರ ಸರ್ಕಾರ ನರೇಗಾದಲ್ಲೂ ಇದಕ್ಕೆ ಅವಕಾಶ ಕಲ್ಪಿಸಿದೆ.

ನೇಪಥ್ಯಕ್ಕೆ ಸರಿದ ಜಂಟಿ ಸಮೀಕ್ಷೆ

ರಾಜ್ಯದ ಅಂಗನವಾಡಿ ಕೇಂದ್ರಗಳು ಕಟ್ಟಡ ಸೇರಿದಂತೆ ಮೂಲಸೌಲಭ್ಯ ಕೊರತೆ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಸಮೀಪದ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸಲು ಕಳೆದ ವರ್ಷವಷ್ಟೇ ಸಮೀಕ್ಷೆಗೆ ತಯಾರಿ ನಡೆದಿತ್ತು. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಕೆಗೆ ಸರ್ಕಾರ 2022ರಲ್ಲಿ ಸೂಚಿಸಿತ್ತು. ಅದರಂತೆ 2022-23ರಲ್ಲಿ 479 ಅಂಗನವಾಡಿಗಳನ್ನು ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸಮೀಪದ ಶಾಲೆಗಳಲ್ಲಿ ಸ್ಥಳಾವಕಾಶದ ಲಭ್ಯತೆ ನೋಡಿಕೊಂಡು ಸ್ಥಳಾಂತರಕ್ಕೆ ಕ್ರಮ ವಹಿಸಲಾಗುತ್ತಿದೆ ಎನ್ನುತ್ತಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

ವೃದ್ಧನ ಶಿಕ್ಷೆಯನ್ನು ಕಡಿತಗೊಳಿಸಿ, ಅಂಗನವಾಡಿಯಲ್ಲಿ ಉಚಿತ ಸೇವೆ ಸಲ್ಲಿಸುವಂತೆ ವಿಭಿನ್ನ ಶಿಕ್ಷೆ ನೀಡಿದ ಹೈಕೋರ್ಟ್!

ರಾಜ್ಯದಲ್ಲಿ ಅಂಗನವಾಡಿ ಕಟ್ಟಡ ಬಾಡಿಗೆ ಭರಿಸದ ಕಾರಣ ಮಾಲೀಕರು ಖಾಲಿ ಮಾಡಲು ಕಾರ್ಯಕರ್ತೆಯರಿಗೆ ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ಶೀಘ್ರವೇ ಬಾಡಿಗೆ ಹಣ ಬಿಡುಗಡೆ, ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯಿಸಿದ್ದೇವೆ ಅಂತ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ತಿಳಿಸಿದ್ದಾರೆ. 

ವಿಭಾಗ - ಅಂಗನವಾಡಿ - ಸ್ವಂತ ಕಟ್ಟಡ - ಕಟ್ಟಡ ಇರದವು - ನಿವೇಶನ - ಕಟ್ಟಡ/ನಿವೇಶನ ಇರದವು

ಬೆಂಗಳೂರು- 20036 ​- 12457 - 5924 - 1574 - 4250
ಬೆಳಗಾವಿ - 17165 - 10848 - 3351 - 849 - 4502
ಮೈಸೂರು - 15389 ​- 11760 - 2674 - 686 -1988
ಕಲ್ಬುರ್ಗಿ - 13771- 9230 - 3329 - 390 - 3288
ಒಟ್ಟು - 66361- 44295 - 15278 - 3499 - 14028

Latest Videos
Follow Us:
Download App:
  • android
  • ios