ಸಿಬಿಎಸ್‌ಇ ೧೦ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಶೇ.೯೩.೬೬ ರಷ್ಟು ಉತ್ತೀರ್ಣತೆ ದಾಖಲಾಗಿದೆ. ಹುಡುಗಿಯರು ೯೫%, ಹುಡುಗರು ೯೨.೬೩% ಉತ್ತೀರ್ಣರಾಗಿದ್ದಾರೆ. ಫಲಿತಾಂಶ cbse.gov.in ಸೇರಿದಂತೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯ. ಜೆಎನ್‌ವಿಗಳು ೯೯.೪೯% ಉತ್ತೀರ್ಣತೆಯೊಂದಿಗೆ ಮುಂಚೂಣಿಯಲ್ಲಿವೆ.
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ( CBSE ) ಇಂದು 10ನೇ ಮತ್ತು 12ನೇ ತರಗತಿ ಫಲಿತಾಂಶಗಳನ್ನು ಬಿಡುಗಡೆಗೊಳಿಸಿದೆ. ಈ ವರ್ಷದ 10ನೇ ತರಗತಿಯಲ್ಲಿ ಶೇ. 93.66 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ. 93.60 ರಷ್ಟು ಫಲಿತಾಂಶ ಬಂದಿದ್ದು, ಈ ವರ್ಷ 0.6% ಫಲಿತಾಂಶ ಹೆಚ್ಚಳ ಬಂದಿದೆ. ಅಂತೆಯೇ 12ನೇ ತರಗತಿಯಲ್ಲಿ 88.39% ಫಲಿತಾಂಶ ಬಂದಿದೆ. CBSE 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳು ಈಗ Digilocker ಹಾಗೂ cbseresults.nic.in ನಲ್ಲಿ ಲಭ್ಯವಿದೆ.
ಫಲಿತಾಂಶ ಇಲ್ಲಿ ವೀಕ್ಷಿಸಿ
CBSE 10ನೇ ತರಗತಿ ಫಲಿತಾಂಶವು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ - cbse.gov.in, cbseresults.nic.in , results.digilocker.gov.in ಮತ್ತು umang.gov.in . ನಲ್ಲಿ ಪರಿಶೀಲಿಸಬಹುದು. ಈಗಾಗಲೇ 12ನೇ ತರಗತಿ ಫಲಿತಾಂಶಗಳನ್ನು ಘೋಷಿಸಿದ್ದಾರೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿ ನಮೂದಿಸಲಾದ ರೋಲ್ ಸಂಖ್ಯೆ, ಜನ್ಮ ದಿನಾಂಕ ಮತ್ತು ಶಾಲಾ ಸಂಖ್ಯೆ ಬಳಸಿಕೊಂಡು ಅಧಿಕೃತ ವೆಬ್‌ಸೈಟ್‌ಗಳಿಂದ ತಮ್ಮ ಅಂಕಪಟ್ಟಿಗಳನ್ನು ಪರಿಶೀಲಿಸಿ, ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 18, 2025 ರವರೆಗೆ ನಡೆದಿತ್ತು. ಈ ವರ್ಷ, 24.12 ಲಕ್ಷ ಸಿಬಿಎಸ್‌ಇ 10ನೇ ತರಗತಿಯ ವಿದ್ಯಾರ್ಥಿಗಳು 84 ವಿಷಯಗಳಲ್ಲಿ ಪರೀಕ್ಷೆ ಬರೆದರು. ಕಳೆದ ವರ್ಷ ಕೂಡ CBSE 10 ನೇ ತರಗತಿಯ ಫಲಿತಾಂಶಗಳನ್ನು ಮೇ 13 ರಂದು ಪ್ರಕಟಿಸಿತ್ತು.
ಹುಡುಗಿಯರೇ ಮೇಲುಗೈ
ಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಹುಡುಗಿಯರು: ಶೇ. 95, ಬಾಲಕರು: ಶೇ. 92.63, ಟ್ರಾನ್ಸ್ಜೆಂಡರ್: ಶೇ. 95 ಫಲಿತಾಂಶ ದಲ್ಲಿ ಉತ್ತೀರ್ಣರಾಗಿದ್ದಾರೆ. ಸಿಬಿಎಸ್‌ಇ 10ನೇ ತರಗತಿಗೆ ಈ ವರ್ಷ ಸುಮಾರು 26675 ಶಾಲೆಗಳು ಹೆಸರು ನೋಂದಾಯಿಸಿದ್ದವು. 10 ನೇ ತರಗತಿ ಪರೀಕ್ಷೆಗಳು 7,837 ಪರೀಕ್ಷಾ ಕೇಂದ್ರಗಳಲ್ಲಿ ನಡೆದವು. ಒಟ್ಟು 23,85,079 ವಿದ್ಯಾರ್ಥಿಗಳಲ್ಲಿ 23,71,939 ವಿದ್ಯಾರ್ಥಿಗಳು ಹಾಜರಾಗಿ 22,21,636 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇ.93.66 ರಷ್ಟು ಫಲಿತಾಂಶ ಬಂದಿದೆ.
2025 ರ CBSE 10 ನೇ ತರಗತಿ ಪರೀಕ್ಷೆಗಳಲ್ಲಿ ಜವಾಹರ್ ನವೋದಯ ವಿದ್ಯಾಲಯಗಳು (JNVs) ಶಾಲೆಗಳು 99.49% ರಷ್ಟು ಪಾಸಾಗಿ ಅಗ್ರಸ್ಥಾನ ಪಡೆದಿದೆ. ಕೇಂದ್ರೀಯ ವಿದ್ಯಾಲಯಗಳು (KVs) 99.45% ರಷ್ಟು ದಾಖಲಿಸಿವೆ. ಖಾಸಗಿ ಶಾಲೆಗಳು ಕೂಡ ಉತ್ತಮ ಪ್ರದರ್ಶನ ನೀಡಿ, 94.17% ರಷ್ಟು ಉತ್ತೀರ್ಣತೆಯನ್ನು ದಾಖಲಿಸಿವೆ. ಕೇಂದ್ರೀಯ ಟಿಬೆಟಿಯನ್ ಶಾಲೆಗಳು (STSS) 91.53% ರಷ್ಟು ಉತ್ತೀರ್ಣತೆಯನ್ನು ದಾಖಲಿಸಿದ್ದರೆ, ಸರ್ಕಾರಿ ಶಾಲೆಗಳು 89.26% ರಷ್ಟು ಮತ್ತು ಸರ್ಕಾರಿ ಅನುದಾನಿತ ಶಾಲೆಗಳು 83.94% ರಷ್ಟು ಕಡಿಮೆ ಫಲಿತಾಂಶವನ್ನು ದಾಖಲಿಸಿವೆ.
ಬೆಂಗಳೂರು ಟಾಪ್ 3
ಸಿಬಿಎಸ್‌ಇ ಮಂಡಳಿಯ 10ನೇ ತರಗತಿ ಫಲಿತಾಂಶದಲ್ಲಿ ತಿರುವನಂತಪುರ ಮತ್ತು ವಿಜಯವಾಡ ಪ್ರದೇಶಗಳು 99.79% ಉತ್ತೀರ್ಣದೊಂದಿಗೆ ಅಗ್ರಸ್ಥಾನದಲ್ಲಿವೆ. 98% ಕ್ಕಿಂತ ಹೆಚ್ಚು ಉತ್ತೀರ್ಣತೆಯೊಂದಿಗೆ ಬೆಂಗಳೂರು (98.90%) ಮೂರನೇ ಸ್ಥಾನ ಮತ್ತು ಚೆನ್ನೈ (98.71%) ನಂತರದ ಸ್ಥಾನದಲ್ಲಿದೆ.
12 ನೇ ತರಗತಿ ಫಲಿತಾಂಶ ಹೇಗಿದೆ?
2025 ರ CBSE ಮಂಡಳಿಯ 12 ನೇ ತರಗತಿ ಫಲಿತಾಂಶದಲ್ಲಿ, ತೆಲಂಗಾಣ (99.73%) ಮತ್ತು ಆಂಧ್ರಪ್ರದೇಶ (99.51%) ಒಟ್ಟಾರೆ ಉತ್ತೀರ್ಣ ಶೇಕಡಾವಾರು ಪ್ರಮಾಣದಲ್ಲಿ ಕೇರಳ (99.32%) ಕ್ಕಿಂತ ಉತ್ತಮ ಸಾಧನೆ ಮಾಡಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ, ಲಕ್ಷದ್ವೀಪವು ಶೇ.100 ಫಲಿತಾಂಶ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದೆ , ಇದು CBSE ಮಂಡಳಿಯ ಫಲಿತಾಂಶ 2025 ರಲ್ಲಿ ದಾಖಲೆಯ ಪ್ರದರ್ಶನವಾಗಿದೆ. ಒಟ್ಟು 1,11,544 ವಿದ್ಯಾರ್ಥಿಗಳು (6.59%) 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ, 24,867 ವಿದ್ಯಾರ್ಥಿಗಳು (1.47%) 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ದೇಶದಾದ್ಯಂತ 19,299 ಶಾಲೆಗಳು ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಗಳಲ್ಲಿ ಹೆಸರು ದಾಖಲಿಸಿತ್ತು. ದೇಶಾದ್ಯಂತ 7,330 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
12 ನೇ ತರಗತಿ ಫಲಿತಾಂಶ ಯಾವ ಸಂಸ್ಥೆ ಟಾಪ್ ನಲ್ಲಿದೆ
ಸಿಬಿಎಸ್‌ಇ 2025 ರ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಸಂಸ್ಥೆವಾರು ಈ ರೀತಿ ಇದೆ
ಜವಾಹರ ನವೋದಯ ವಿದ್ಯಾಲಯ (JNV) 99.29%
ಕೇಂದ್ರೀಯ ವಿದ್ಯಾಲಯ (ಕೆ.ವಿ) 99.05%
ಕೇಂದ್ರೀಯ ಟಿಬೆಟಿಯನ್ ಶಾಲೆಗಳು (STSS) 98.96%
ಸರ್ಕಾರಿ ಅನುದಾನಿತ ಶಾಲೆಗಳು 91.57%
ಸರ್ಕಾರಿ ಶಾಲೆಗಳು 90.48%
ಸ್ವತಂತ್ರ ಶಾಲೆಗಳು 87.94%
12ನೇ ತರಗತಿಯಲ್ಲಿ ಸಿಬಿಎಸ್‌ಇಯ 17 ಪ್ರದೇಶಗಳಲ್ಲಿ ಟಾಪ್ 5 ಇಂತಿದೆ
ವಿಜಯವಾಡ 99.60%
ತಿರುವನಂತಪುರ 99.32%
ಚೆನ್ನೈ 97.39%
ಬೆಂಗಳೂರು 95.95%
ದೆಹಲಿ ಪಶ್ಚಿಮ 95.37%


