ಸಂಬಂಧಿಸಿದ ಕಾಲೇಜುಗಳಿಗೆ ಕಂಪ್ಯೂಟರ್‌ಗಳನ್ನು ಸಾಗಿಸುವ ಜವಾಬ್ದಾರಿ ತೆಗೆದುಕೊಂಡ ರೋಟರಿ ಸಂಸ್ಥೆ| ನಿಯಮಾನುಸಾರ ಕಂಪ್ಯೂಟರ್‌ ಸ್ವೀಕರಿಸುವಂತೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ|  

ಬೆಂಗಳೂರು(ಮಾ.17): ಕಾಗ್ನಿಜೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಉನ್ನತ ಶಿಕ್ಷಣ ಇಲಾಖೆಯೊಂದಿಗಿನ ಒಪ್ಪಂದಾನುಸಾರ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಲು ಒಪ್ಪಿಕೊಂಡಿದೆ.

ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿರುವ ಇಲಾಖೆಯು, ಆ ಕಂಪ್ಯೂಟರ್‌ಗಳನ್ನು ಯಾವ ಕಾಲೇಜಿಗೆ ಎಷ್ಟು ನೀಡಬೇಕೆಂಬ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. 

ವೈದ್ಯ ಸೀಟು ನಿರಾಕರಿಸಿದರೆ 25 ಲಕ್ಷ ರು ದಂಡ?

ಸಂಬಂಧಿಸಿದ ಕಾಲೇಜುಗಳಿಗೆ ಕಂಪ್ಯೂಟರ್‌ಗಳನ್ನು ಸಾಗಿಸುವ ಜವಾಬ್ದಾರಿಯನ್ನು ರೋಟರಿ ಸಂಸ್ಥೆ ತೆಗೆದುಕೊಂಡಿದೆ. ನಿಯಮಾನುಸಾರ ಕಂಪ್ಯೂಟರ್‌ ಸ್ವೀಕರಿಸುವಂತೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.