2019ರ UPSC ರಿಸಲ್ಟ್ ಪ್ರಕಟ: ಪ್ರದೀಪ್ ಸಿಂಗ್ ದೇಶಕ್ಕೆ ಫಸ್ಟ್

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) 2019ನೇ ಸಾಲಿನ  ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.

UPSC civil services 2019 final result declared 829 candidates qualify

ನವದೆಹಲಿ, (ಆ.04): ನಾಗರಿಕ ಸೇವಾ ಪರೀಕ್ಷೆಗಳ 2019 ರ ಅಂತಿಮ ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮಂಗಳವಾರ ಪ್ರಕಟಿಸಿದ್ದು, 829 ಆಕಾಂಕ್ಷಿಗಳು ಉತ್ತಿರ್ಣರಾಗಿದ್ದಾರೆ.

ಪ್ರದೀಪ್ ಸಿಂಗ್ ಪ್ರಥಮ ರ‍್ಯಾಂಕ್ ಪಡೆದರೆ, ಜತಿನ್ ಕಿಶೋರ್ ದ್ವಿತೀಯಾ ಸ್ಥಾನ ಮತ್ತು ಪ್ರತಿಭಾ ವರ್ಮಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆದ್ರೆ, ಮಹಿಳೆಯರ ಪೈಕಿ ಪ್ರತಿಭಾ ವರ್ಮಾಟಾಪರ್ ಆಗಿದ್ದಾರೆ. 

ಸಿವಿಲ್ ಸರ್ವೀಸ್ ಪರೀಕ್ಷೆಯ ಟ್ರಿಕ್ಕಿ ಪ್ರಶ್ನೆ ಹಾಗೂ ಫನ್ನಿಯೆಸ್ಟ್ ಉತ್ತರಗಳು

ಆಯ್ಕೆಯಾದ 829 ಜನರಲ್ಲಿ 304 ಮಂದಿ ಸಾಮಾನ್ಯ ವರ್ಗ, ಮತ್ತು 78 ಮಂದಿ ಆರ್ಥಿಕವಾಗಿ ಹಿಂದುಳಿದ ವರ್ಗದವರು, 251 ಮಂದಿ ಇತರ ಹಿಂದುಳಿದ ವರ್ಗದವರು (ಒಬಿಸಿ), 129 ಪರಿಶಿಷ್ಟ ಜಾತಿ ಮತ್ತು 67 ಮಂದಿ ಪರಿಶಿಷ್ಟ ಪಂಗಡದವರಿದ್ದಾರೆ. 

ಐಎಎಸ್ ನಲ್ಲಿ 180, ಐಪಿಎಸ್ ನಲ್ಲಿ 150 ಮತ್ತು ಐಎಫ್‌ಎಸ್ ನಲ್ಲಿ 24 ಹುದ್ದೆಗಳು ಖಾಲಿ ಇವೆ.

ಸುಲಭದ ಪ್ರಶ್ನೆಗಳು, ಆದರೂ IAS ಅಭ್ಯರ್ಥಿಗಳು ಉತ್ತರಿಸುವಲ್ಲಿ ಫೇಲ್!

ಅಭ್ಯರ್ಥಿಗಳು ಪರೀಕ್ಷೆ ಗಳು ಮತ್ತು ನೇಮಕಾತಿಗಳ ಬಗ್ಗೆ ಯಾವುದೇ ಮಾಹಿತಿ ಅಥವಾ ಸ್ಪಷ್ಟೀಕರಣ ಬೇಕಿದ್ದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವೈಯಕ್ತಿಕವಾಗಿ ಅಥವಾ ದೂರವಾಣಿ ಮೂಲಕ 011-23385271 / 23381125/23098543 ಕ್ಕೆ ಕರೆ ಮಾಡಿ ಪಡೆಯಬುಹುದಾಗಿದೆ.

ಇಲ್ಲಿದೆ Rank ಪಟ್ಟಿ...

Latest Videos
Follow Us:
Download App:
  • android
  • ios