ಲಕ್ನೋ, (ಜೂನ್, 05): ಓರ್ವ ಶಿಕ್ಷಕಿ 13 ತಿಂಗಳಲ್ಲಿ ಬರೊಬ್ಬರಿ 1 ಕೋಟಿ ರೂ ವೇತನವನ್ನು ಪಡೆದಿದ್ದಾರೆ. ಇದು ಅಚ್ಚರಿಯಾದರೂ ಸತ್ಯ.

ತ್ತರ ಪ್ರದೇಶದ ಅನಾಮಿಕ ಶುಕ್ಲ ಎಂಬ ಶಿಕ್ಷಕಿ ಅನಾಮಿಕ ಶುಕ್ಲ ಎಂಬ ಶಿಕ್ಷಕಿ ಒಂದೇ ಸಮಯಕ್ಕೆ 25 ಶಾಲೆಗಳಲ್ಲಿ ಕೆಲಸ ಮಾಡಿ ಒಂದು ವರ್ಷದಲ್ಲಿ 1 ಕೋಟಿ ರೂ. ವೇತನ ಪಡೆದಿದ್ದಾರೆ.

ಉತ್ತರ ಪ್ರದೇಶದ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಈ ಶಿಕ್ಷಕಿ, ಶಾಲಾ ಆಡಳಿತ ಮಂಡಳಿಯ ಕಣ್ತಪ್ಪಿಸಿ ಶಿಕ್ಷಣ ಇಲಾಖೆಯ ವಿಶೇಷ ಯೋಜನೆಯಡಿ ಜಿಲ್ಲೆಯ ಸುಮಾರು 25 ಶಾಲೆಗಳಲ್ಲಿ ಪಾಠ ಮಾಡಿದ್ದಾರೆ. ಅಷ್ಟೇ ಅಲ್ಲದೇ ಫೆಬ್ರವರಿ ಒಳಗೆ 1 ಕೋಟಿ ರೂ ಗಳಿಸಿದ್ದಾರೆ ಫೆಬ್ರವರಿ 2020ರೊಳಗೆ ಸುಮಾರು 1 ಕೋಟಿ ರೂ. ಸಂಬಳವನ್ನೂ ಸಹ ಎಣೆಸಿದ್ದಾರೆ.

ಶಾಲಾ ಮಕ್ಕಳಿಗೆ ‘ಲರ್ನ್‌ ಫ್ರಂ ಹೋಮ್‌’?: ಕೇಂದ್ರದ ಚಿಂತನೆ, ಶೀಘ್ರ ಮಾರ್ಗಸೂಚಿ

ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಪೂರ್ಣ ಅವಧಿಯ ವಿಜ್ಞಾನ ಶಿಕ್ಷಕಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ  ಅನಾಮಿಕ ಶುಕ್ಲ, ಅವರು ಅಂಬೇಡ್ಕರ್ ನಗರ, ಬಾಘ್‌ಪಟ್, ಅಲಿಗಢ, ಸಹರಾನ್ಪುರ, ಪ್ರಯಾಗ್‌ರಾಜ್ ಜಿಲ್ಲೆಗಳ ಶಾಲೆಗಳಲ್ಲಿಯೂ ಪಾಠ ಮಾಡುತ್ತಿದ್ದರು. ಅದು ಇದೀಗ ಬಯಲಿಗೆ ಬಂದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್ ಪ್ರತಿಕ್ರಿಯಿಸಿದ್ದು, ಮೈನ್‌ಪುರಿ ಮೂಲದವರಾಗಿರುವ ಅನಾಮಿಕ ಶುಕ್ಲಾ, ಕೆಲಸ ಮಾಡಿದ ಶಾಲೆಗಳ ಶಿಕ್ಷಕರುಗಳ ಹೆಸರಿನ ಪಟ್ಟಿಯಲ್ಲಿ ಕಳೆದ ಒಂದು ವರ್ಷದಿಂದ ಇದ್ದು, ಇದರ ಸತ್ಯಾಸತ್ಯತೆಗಾಗಿ ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಡಿಸಿದ್ದಾರೆ.

ಮಾರ್ಚ್ ನಲ್ಲಿ ಶುಕ್ಲಾ ಬಗ್ಗೆ ದೂರು ಬಂದಿದೆ. ಪ್ರೇರಣಾ ಪೋರ್ಟಲ್‌ ಆನ್‌ಲೈನ್‌ನಲ್ಲಿ ತಮ್ಮ ಹಾಜರಾತಿಯನ್ನು  ಗುರುತಿಸಬೇಕಾದರೆ, ಈ ಶಿಕ್ಷಕಿ ಇನ್ನು ಹಲವಾರು ಶಾಲೆಗಳಲ್ಲಿ ತನ್ನ ಹಾಜರಾತಿಯನ್ನು ಹೇಗೆ ಗುರುತಿಸಬಹುದು? ಇದರ ಸಂಪೂರ್ಣ ತನಿಖೆ ಅಗತ್ಯ ಎಂದು ಆನಂದ್ ತಿಳಿಸಿದ್ದಾರೆ.

ಶಿಕ್ಷಕಿ ಆಟಾಟೋಪವನ್ನು ಪತ್ತೆ ಮಾಡಲು ಮೇ 26 ರಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದ್ರೆ,   ಲಾಕ್‌ಡೌನ್ ಇರುವ ಕಾರಣ ತನಿಖೆ ನಿಧಾನವಾಗಿದೆ. ಶಿಕ್ಷಕಿ ಮೇಲಿನ ಆರೋಪ ನಿಜವಾದರೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಹೇಳಿದ್ದಾರೆ.

UPSC ಪರೀಕ್ಷೆಯಲ್ಲಿ ಕೇಳುವ ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೇ ?

ಕೆಜಿವಿಬಿ ಒಂದು ರೆಸಿಡೆನ್ಶಿಯಲ್ ಶಾಲೆಯಾಗಿದೆ. ಅಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ತಿಂಗಳಿಗೆ 30 ಸಾವಿರ ರೂ ವೇತನ ನೀಡಲಾಗುತ್ತದೆ. ಅದೇ ರೀತಿ ಪ್ರತಿಯೊಂದು ಬ್ಲಾಕ್‌ನಲ್ಲೂ ಒಂದೊಂದು ಕಸ್ತೂರಬಾ ಗಾಂಧಿ ಶಾಲೆ ಇದೆ. ಈ ಹಿನ್ನೆಲೆಯಲ್ಲಿ ಆಕೆಯ ಮೂಲ ಪೋಸ್ಟ್ ಬಗ್ಗೆ ನಮಗೆ ಯಾವುದೇ ಸುಳಿವು ಇಲ್ಲ. ಅಂಬೇಡ್ಕರ್ ನಗರ, ಬಾಘ್‌ಪಟ್, ಅಲಿಗಢ, ಸಹರಾನ್ಪುರ, ಪ್ರಯಾಗ್‌ರಾಜ್ ಜಿಲ್ಲೆಗಳ ಶಾಲೆಗಳಲ್ಲಿಯೂ ಪಾಠ ಮಾಡಿರುವುದು ಕಂಡುಬಂದಿದೆ. ದೂರಿನಲ್ಲಿ ತಿಳಿಸಲಾದ ಜಿಲ್ಲೆಗಳಿಂದ ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ನಿಜವಾಗಿದ್ದರೆ ಎಫ್ಐಆರ್ ದಾಖಲಿಸಲಾಗುವುದು. ಎಂದರು.

ಒಟ್ಟಿನಲ್ಲಿ ಈ ಶಿಕ್ಷಕಿ 25 ಶಾಲೆಗಳಲ್ಲಿ ಹಾಜರಾತಿ ಹಾಕಿ ಅದು ಹೇಗೆ ಪಾಠ ಮಾಡಿದ್ದಾರೆ? ಅದು ಹೇಗೆ ವೇತನ ಪಡೆದುಕೊಳ್ಳುತ್ತಿದ್ದರೋ? ಅದು ಹೇಗೆ 25 ಕಡೆಗಳಲ್ಲೂ ಮ್ಯಾನೇಜ್ ಮಾಡುತ್ತಿದ್ರೋ? ಎನ್ನುವುದು ಯಕ್ಷ ಪ್ರಶ್ನೆಯಾಗಿದ್ದು, ತನಿಖೆಯಿಂದ ಹೊರಬರಬೇಕಿದೆ.