ಶಾಲಾ ಮಕ್ಕಳಿಗೆ ‘ಲರ್ನ್‌ ಫ್ರಂ ಹೋಮ್‌’?| 100 ದಿನ ಶಾಲೆ, 100 ದಿನ ಮನೆಯಲ್ಲಿ ಕಲಿಕೆ| -ಕೇಂದ್ರದಿಂದ ಚಿಂತನೆ, ಶೀಘ್ರ ಮಾರ್ಗಸೂಚಿ

ನವದೆಹಲಿ: ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ವಿವಿಧ ವಲಯಗಳ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು (ವರ್ಕ್ ಫ್ರಂ ಹೋಮ್‌) ಉತ್ತೇಜನ ನೀಡುತ್ತಿರುವ ಕೇಂದ್ರ ಸರ್ಕಾರ, ಶಾಲಾ ಶಿಕ್ಷಣದಲ್ಲಿ ‘ಮನೆಯಿಂದಲೇ ಕಲಿಕೆ’ (ಲರ್ನ್‌ ಫ್ರಂ ಹೋಮ್‌) ವಿಧಾನದ ಮೊರೆ ಹೋಗುವ ಸಾಧ್ಯತೆ ಇದೆ.

ಕೊರೋನಾ ಸಮಸ್ಯೆಯ ನಡುವೆಯೇ ಶಾಲೆಗಳನ್ನು ಪುನಾರಂಭಿಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊಸ ಮಾರ್ಗಸೂಚಿ ರಚಿಸುತ್ತಿದ್ದು, ಶೀಘ್ರವೇ ಅದನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇದುವರೆಗೆ ಜಾರಿಯಲ್ಲಿದ್ದ 220 ಶಾಲಾ ಕಲಿಕೆಯ ದಿನಗಳ ಬದಲಾಗಿ 100 ದಿನ ಶಾಲೆ ಮತ್ತು 100 ದಿನ ಮನೆಯಲ್ಲಿ ಕಲಿಕೆ ನೀತಿ ಜಾರಿಗೆ ಬರುವ ಸಾಧ್ಯತೆ ಇದೆ. ಉಳಿದ 20 ದಿನಗಳನ್ನು ವೈದ್ಯರು ಮತ್ತು ಆಪ್ತ ಸಮಾಲೋಚಕರ ಮೂಲಕ ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡಲು ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಕೇಳೋ ಟ್ರಿಕ್ಕಿ ಪ್ರಶ್ನೆಗಳಿವು

ಶಾಲೆಗಳ ಪುನಾರಂಭ ಹೆಸರಿನ ಮಾರ್ಗಸೂಚಿಯಲ್ಲಿ, ಯಾವ ಮಕ್ಕಳಿಗೆ ಆನ್‌ಲೈನ್‌ ಸೌಲಭ್ಯ ಲಭ್ಯವಿಲ್ಲವೋ ಮತ್ತು ಕಲಿಕೆಯ ಉಪಕರಣ ಲಭ್ಯವಿಲ್ಲವೋ ಅಂಥ ಮಕ್ಕಳಿಗೆ ಹೊಸ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಲು ನೆರವಾಗುವಂತೆ ಎಲ್ಲಾ ಶಾಲೆಗಳಿಗೆ ಸೂಚಿಸಲಾಗುತ್ತದೆ ಎನ್ನಲಾಗಿದೆ.

ಶಾಲೆಗಳಲ್ಲಿ ಎರಡು ಪಾಳಿ?:

ಶಾಲೆಗಳಲ್ಲಿ ಎಲ್ಲ ಮಕ್ಕಳಿಗೆ ಅವಕಾಶ ಕಲ್ಪಿಸುವ ಬದಲಿಗೆ ಶೇ.30 ಅಥವಾ ಶೇ.50 ಮಕ್ಕಳಿಗೆ ಅನುಮತಿ ನೀಡುವುದು. ಎರಡು ಪಾಳಿಗಳಲ್ಲಿ ಶಾಲೆ ನಡೆಸುವುದರ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಶಾಲೆಗಳಲ್ಲಿ ಸಾಮಾಜಿಕ, ದೈಹಿಕ ಅಂತರ ಕಡ್ಡಾಯಗೊಳಿಸಿ, ಆಗಮನ, ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಕಲ್ಪಿಸುವುದು. ಸಾಧ್ಯವಿದ್ದಲ್ಲಿ ಬಯಲು ಶಾಲೆ ನಡೆಸುವುದು. ಮಕ್ಕಳ ನಡುವೆ ಶಾಲೆಯಲ್ಲಿ 6 ಅಡಿ ಅಂತರ ಇರುವುದಂತೆ ಕಾಯ್ದುಕೊಳ್ಳುವರದ ಬಗ್ಗೆಯೂ ಚಿಂತನೆಯಲ್ಲಿ ತೊಡಗಿದೆ.

ವಿಷ್ಯ ಹೇಳೋ ಸ್ಟಾರ್ಟ್ ಅಪ್‌ಗೆ ದಿನಕ್ಕೆ 14 ಲಕ್ಷ ಬ್ಯುಸಿನೆಸ್

ಸಂಭಾವ್ಯ ಕ್ರಮಗಳು

- ಶಾಲಾ ವಾಹನಗಳಿಗೆ ದಿನಕ್ಕೆ 2 ಬಾರಿ ಸ್ಯಾನಿಟೈಸೇಷನ್‌

- ಸಾಮೂಹಿಕ ಕಾರು ಬಳಕೆಗೆ ಉತ್ತೇಜನ ಇಲ್ಲ

- 1-5ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ 2 ಬಾರಿ, 6-8ರ ಮಕ್ಕಳಿಗೆ ವಾರಕ್ಕೆ 2-4 ದಿನ, 9-12ನೇ ತರಗತಿ ಮಕ್ಕಳಿಗೆ ವಾರಕ್ಕೆ 4-5 ದಿನ ಶಾಲೆ

- ಪ್ರತಿ ಪೀರಿಯಡ್‌ ಅವಧಿ 30 ನಿಮಿಷ

- 5ನೇ ಶಾಲೆಗಿಂತ ಕೆಳಗಿನ ಶಾಲೆಗಳಿಗೆ ಬ್ಯಾಗ್‌ ಹೊತ್ತೊಯ್ಯುವ ಹೊರೆ ಇಲ್ಲ

- ವಲಸೆ ಹೋಗಿರುವ ಮಕ್ಕಳು ತಾವಿರುವ ಸ್ಥಳದ ಸಮೀಪದ ಶಾಲೆಯಲ್ಲಿ ಪ್ರವೇಶ ಪಡೆಯುವ ಅವಕಾಶ

- ಶಾಲೆ ತೊರೆದಿರುವ ಮಕ್ಕಳ ಪ್ರತ್ಯೇಕ ಪಟ್ಟಿ