SSLC ಪರೀಕ್ಷೆ ಶುರುವಾಗಿಲ್ಲ, ಆಗಲೇ ರಿಸಲ್ಟ್ ಡೇಟ್ ಫಿಕ್ಸ್: ಇದು ಸೂಪರ್ ಫಾಸ್ಟ್

ಕೊರೋನಾ ಭೀತಿ ಹಿನ್ನೆಯಲ್ಲಿ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದೂಡಲಾಗಿದ್ದು, ವೇಳಾಪಟ್ಟಿ ಪ್ರಕಟಿಸಲಾಗಿದೆ. ಆದ್ರೆ, ಇನ್ನೂ ಪರೀಕ್ಷೆಗಳು ಪ್ರಾರಂಭವಾಗಿಲ್ಲ. ಆಗಲೇ ಫಲಿತಾಂಶದ ದಿನಾಂಕ ಘೋಷಣೆ ಮಾಡಲಾಗಿದೆ

sslc exams results maybe in august first week says suresh kumar

ಬಳ್ಳಾರಿ, (ಜೂನ್.06): ಎಸ್ಎಸ್ಎಲ್ ಸಿ ಪರೀಕ್ಷೆಗಳು ಇದೇ ಜೂನ್ 25 ರಿಂದ ಜುಲೈ  3ರ ವರೆಗೆ ನಡೆಯಲಿದ್ದು, ಇದಕ್ಕೆ ರಾಜ್ಯ ಶಿಕ್ಷಣ ಇಲಾಖೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 

ಇನ್ನೂ ಪರೀಕ್ಷೆಗಳು ಶುರುವಾಗಿಲ್ಲ ಆಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದ್ದಾರೆ.

ಕರ್ನಾಟಕ SSLC ಪರೀಕ್ಷೆ ವೇಳಾಪಟ್ಟಿ

 ಬಳ್ಳಾರಿಯಲ್ಲಿ ಇಂದು (ಶನಿವಾರ)  ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ಜುಲೈ ಕೊನೆವಾರ, ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಫಲಿತಾಂಶ ನೀಡಲಾಗುತ್ತದೆ. ಪೂರಕ ಪರೀಕ್ಷೆಗೆ ಅವಕಾಶ ಇದೆ. ಈ ಪರೀಕ್ಷೆಯಲ್ಲಿ ಅನಾರೋಗ್ಯದ ಕಾರಣ ಬರೆದಿರಲಿಲ್ಲಾ ಅಂದ್ರೆ ಅವರನ್ನು ಪೂರಕ ಪರೀಕ್ಷೆಯಲ್ಲಿ ಬರೆಯಲಾಗುತ್ತದೆ. ಅವರನ್ನು ಫ್ರೇಷರ್ ಕ್ಯಾಂಡಿಡೆಟ್ ಅಂತ ಪರಿಣಗಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಒಂದು ಪರೀಕ್ಷೆ ಹಾಲ್‌ನಲ್ಲಿ 18 ಜನರಿಂದ 20 ಜನರನ್ನೂ ಕೂಡಿಸುತ್ತೇವೆ. ಮಾಸ್ಕ್ ಕಡ್ಡಾಯ- ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆ ಉಚಿತವಾಗಿ ನೀಡಲಾಗುತ್ತಿದೆ. 8,48,203 ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಪ್ರತಿ ಮಗುವಿಗೆ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಕಡ್ಡಾಯ. ತಪಾಸಣೆಯಲ್ಲಿ ಮಗುವಿಗೆ ಅನಾರೋಗ್ಯ ಕಂಡ್ರೆ, ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು. 

Latest Videos
Follow Us:
Download App:
  • android
  • ios