ಬೆಂಗಳೂರು, (ಮೇ.19):  ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 2019-20 ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ. 

ಕರ್ನಾಟಕದ SSLC, PUC ಪರೀಕ್ಷೆ ದಿನಾಂಕ ಘೋಷಣೆ

ಇಂದು (ಮಂಗಳವಾರ) ಕರ್ನಾಟಕ ಪ್ರೌಢ ಶಿಕ್ಷಣ  ಮಂಡಳಿ ಹೊಸ ಟೈಮ್ ಟೇಬಲ್ ಬಿಡುಗಡೆ ಮಾಡಿದ್ದು.ಇದೇ ಜೂನ್ 25ರಿಂದ ಜುಲೈ 3ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಯಲಿವೆ.

ವೇಳಾಪಟ್ಟಿ

* ಜೂನ್ 25ರಂದು ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ 

* ಜೂನ್ 26ರಂದು ಅರ್ಥಶಾಸ್ತ್ರ 

* ಜೂನ್ 27ರಂದು  ಗಣಿತ ಮತ್ತು ಸಮಾಜಶಾಸ್ತ್ರ

* ಜೂ.29ರಂದು  ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ್ ಹಿಂದೂಸ್ತಾನಿ ಸಂಗೀತ

* ಜುಲೈ 1ರಂದು ಸಮಾಜ ವಿಜ್ಞಾನ 

* ಜುಲೈ 2ರಂದು ಪ್ರಥಮ ಭಾಷೆ- ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು, ಉರ್ದು, ಸಂಸ್ಕೃತ, ಇಂಗ್ಲಿಷ್‌

* ಜುಲೈ 3ರಂದು ತೃತೀಯ ಭಾಷೆಗಳಿಗೆ ಪರೀಕ್ಷೆ- ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ,
ಕೊಂಕಣಿ, ತುಳು ಭಾಷೆಗಳ ಪರೀಕ್ಷೆ

* ಜುಲೈ 3ರಂದು NSQF ಪರೀಕ್ಷೆಗಳು ನಡೆಯಲಿದೆ ( ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್,
ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್ ಪರೀಕ್ಷೆ)