ಬೆಂಗಳೂರು, (ಜುಲೈ.14): ಇಂದು (ಮಂಗಳವಾರ) ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಹಾಜರಾಗಿದ್ದ 6,75,277 ವಿದ್ಯಾರ್ಥಿಗಳ ಪೈಕಿ 4,17,297 ಮಂದಿ ಉತ್ತೀರ್ಣರಾಗಿದ್ದಾರೆ. 

ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮುಂದಿನ ತಿಂಗಳು ಅಂದರೆ ಆಗಸ್ಟ್​ನಲ್ಲಿ ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಜುಲೈ ಕೊನೇ ವಾರದಲ್ಲಿ ವೇಳಾಪಟ್ಟಿ ಪ್ರಕಟವಾಗಲಿದೆ.

ದ್ವಿತೀಯ ಪಿಯುಸಿ ರಿಸಲ್ಟ್: ಡಿಸ್ಟಿಂಕ್ಷನ್‌ನಲ್ಲಿ ಪಾಸಾದ್ರೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಪೂರಕ ಪರೀಕ್ಷೆಯ ಶುಲ್ಕ ಪಾವತಿಸಲು ಜು.31 ಕೊನೇ ದಿನ. ಕಾಲೇಜಿನವರು ಪರೀಕ್ಷಾ ಅರ್ಜಿಗಳನ್ನು ಮೂಲ ಚಲನ್​ ಸಹಿತ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕಡ್ಡಾಯವಾಗಿ ಆ. 3ರೊಳಗೆ ಕಳುಹಿಸಬೇಕಿದೆ.

ಕಾಲೇಜಿನವರು ಆ.5ರೊಳಗೆ ಉಪನಿರ್ದೇಶಕರ ಕಚೇರಿಗೆ ಚಲನ್ ಸಹಿತ ಶುಲ್ಕ ಪಾವತಿಸಬೇಕು. ಪ್ರತಿ ವಿಷಯಕ್ಕೆ 140 ರೂ, ಎರಡು ವಿಷಯಕ್ಕೆ 270, ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ 470 ರೂ.ಗಳು. ಎಸ್ಸಿ-ಎಸ್ಟಿ ಪ್ರವರ್ಗ 1ರ ವಿದ್ಯಾರ್ಥಿಗಳು 50 ರೂ. ಶುಲ್ಕ ಕಟ್ಟಬೇಕು.

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2020: ರಾಜ್ಯಕ್ಕೆ ಇವರೇ ಟಾಪರ್ಸ್..!

ಮರು ಮೌಲ್ಯಮಾಪನ
ಇನ್ನು ಫಲಿತಾಂಶ ತೃಪ್ತಿಯಾಗದ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್​ ಪ್ರತಿ ಪಡೆಯಲು, ಉತ್ತರ ಪತ್ರಿಕೆ ಮರು ಮೌಲ್ಯಮಾಪನಕ್ಕೆ ಹಾಗೂ ಅಂಕಗಳ ಮರು ಏಣಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಜು.16ರಿಂದ ಜು.30ರವರೆಗೆ ಅವಕಾಶ ಕಲ್ಪಿಸಿದೆ. ಸ್ಕ್ಯಾನಿಂಗ್​ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ ನಿಗದಿ ಪಡಿಸಲಾಗಿದೆ.

 ಉತ್ತರ ಪತ್ರಿಕೆಯ ಸ್ಕ್ಯಾನಿಂಗ್​ ಪ್ರತಿ ಡೌನ್​ಲೋಡ್​ ಮಾಡಿಕೊಳ್ಳಲು ಆ. 3ರಿಂದ 7ರವರೆಗೆ ಅವಕಾಶ ನೀಡಲಾಗಿದೆ. ಮರುಮೌಲ್ಯಮಾಪನಕ್ಕೆ ಮತ್ತು ಮರು ಏಣಿಕೆಗಾಗಿ ಆ.4ರಿಂದ 10ರವರೆಗೆ ಅರ್ಜಿ ಸಲ್ಲಿಸಬಹುದು. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂಪಾಯಿ ನಿಗದಿ ಮಾಡಲಾಗಿದೆ.