ತುಮಕೂರು, (ಜುಲೈ.14): ವಿದ್ಯಾರ್ಥಿಯೋರ್ವ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣನಾಗಿದ್ದರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.

ತಮಕೂರಿನ ಕ್ಯಾತಸಂದ್ರ ಬಳಿಯ ಬಸವಾಪಟ್ಟದ ಚೇತನ್ ( 18) ಮನೆಯಲ್ಲೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ ಶೇ 89 ಅಂಕ ಪಡೆದರೂ ಕಡಿಮೆ ಆಯಿತು ಅಂತ ನೊಂದುಕೊಂಡು ವಿದ್ಯಾರ್ಥಿಯೊಬ್ಬ ನೇಣಿಗೆ ಕೊರಳೊಡ್ಡಿದ್ದಾನೆ.

ಪಿಯುಸಿಯಲ್ಲಿ ಫೇಲ್: ಮನನೊಂದು ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನ

ನಗರದ ವಿದ್ಯಾ ಕಾಲೇಜಿನಲ್ಲಿ ಓದುತಿದ್ದ ಚೇತನ್ ಶೇ 89 ಅಂಕಗಳಿಸಿದ್ದು ಫಲಿತಾಂಶ ಬಂದಾಗಿನಿಂದ ಇನ್ನೂ ಹೆಚ್ಚು ಅಂಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದ. ಆದ್ರೆ ನಿರೀಕ್ಷೆಗೆ ತಕ್ಕಂತೆ ಅಂಕ ಬಂದಿಲ್ಲವೆಂದು ನೊಂದು ಇಂದು (ಮಂಗಳವಾರ) ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣುಹಾಕಿಕೊಂಡಿದ್ದಾನೆ ಎನ್ನಲಾಗಿದೆ. 

ಈ ಬಗ್ಗೆ ಕ್ಯಾತಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.